ಮೇ 26ರಂದು ಮನೆಯಂಗಳದಲ್ಲಿ ಕವಿತಾ ಗಾಯನ!
ಬೆಂಗಳೂರು, ಮೇ 22: ಉಪಾಸನಾ ಟ್ರಸ್ಟ್ ಮನೆಯಂಗಳದಲ್ಲಿ ಕವಿತಾ ಗಾಯನ ಕಾರ್ಯಕ್ರಮವನ್ನು ಮೇ 26ರಂದು ಶನಿವಾರ ಬಿ.ಜಿ ಶ್ರೀನಿವಾಸ್ ಅವರ ಮನೆಯಂಗಳ ರಾಜರಾಜೇಶ್ವರಿನಗರದಲ್ಲಿ ಆಯೋಜಿಸಿದೆ.
ಅಂದು ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ, ಬಿ.ಎನ್.ಶಿಲ್ಪಕಲಾ, ಪೂಜಾ ತಾಯೂರ್, ವಿದ್ಯಾಮೂರ್ತಿ, ಸಹನಾ ಭಟ್ ಮತ್ತು ಸ್ವಾತಿ ಶ್ರೀನಾಥ್ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಇದು ಉಪಾಸಣಾ ಟ್ರಸ್ಟ್ ನ 18ನೇ ಮನೆಯಂಗಳದಲ್ಲಿ ಕವಿತಾಗಾಯನ ಕಾರ್ಯಕ್ರಮವಾಗಿದೆ. ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ.

ಆಯೋಜನೆ: ಉಪಾಸನಾ ಟ್ರಸ್ಟ್
ಏನು?: ಮನೆಯಂಗಳದಲ್ಲಿ ಕವಿತಾ ಗಾಯನ
ಎಲ್ಲಿ ?: ಬಿ.ಜಿ ಶ್ರೀನಿವಾಸ್, ಅವರ ಮನೆಯಂಗಳ, ಜಿತಾಂತಕ, ಐಡಿಯಲ್ ಹೋಮ್ಸ್, ರಾಜರಾಜೇಶ್ವರಿನಗರ ಭಾರತ್ ಪೆಟ್ರೋಲಿಯಂ ಹಿಂಭಾಗ
ಯಾವಾಗ?: ಮೇ 26, ಶನಿವಾರ, ಸಂಜೆ 6












Click it and Unblock the Notifications