ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೀವವೈವಿಧ್ಯವನ ಭಾಗ 6: ಜೀವವೈವಿಧ್ಯವನ ರಕ್ಷಣೆಗೆ ಸಿಂಡಿಕೇಟ್ ಸದಸ್ಯ ಡಾ.ಗೋವಿಂದರಾಜು ತಾಕೀತು

|
Google Oneindia Kannada News

ಬೆಂಗಳೂರು ವಿ.ವಿ. ಜ್ಞಾನಭಾರತಿ ಆವರಣದಲ್ಲಿ ಕಳೆದ ಹಲವು ವರ್ಷಗಳಿಂದ ವಿವಿಧ ಸಂಸ್ಥೆಗಳಿಗೆ ವಿ.ವಿ ನೀಡಿರುವ ಜಮೀನಿನ ಕುರಿತು ವಿವರಗಳನ್ನು ಪ್ರಸ್ತಾಪಿಸಿರುವ ವಿ.ವಿ. ಸಿಂಡಿಕೇಟ್ ಸದಸ್ಯ ಡಾ.ಗೋವಿಂದರಾಜು ಇನ್ನೆಂದೂ ವಿ.ವಿ ಭೂಮಿಯನ್ನು ಕಟ್ಟಡಗಳಿಗಾಗಿ ನೀಡಬಾರದೆಂದು ಕುಲಪತಿ ಹಾಗೂ ಕುಲಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರು ವಿ.ವಿ. ಜ್ಞಾನಭಾರತಿ ಆವರಣದ ಜೀವ ವೈವಿಧ್ಯವನ ಪ್ರದೇಶದಲ್ಲಿ ಮೂರು ಸಂಸ್ಥೆಗಳಿಗಾಗಿ ಸುಮಾರು 32 ಎಕರೆ ಜಾಗವನ್ನು ಸರ್ಕಾರ ಬೋಗ್ಯಕ್ಕೆ ನೀಡಿತ್ತು. ಆ ಬಗ್ಗೆ ದೊಡ್ಡ ವಿವಾದ ಸೃಷ್ಟಿಯಾಗಿ ಮಾಧ್ಯಮಗಳಲ್ಲಿ ಜೀವ ವೈವಿಧ್ಯವನ ನಾಶ ಮಾಡಬಾರದು, ಇಲ್ಲಿನ ಪರಿಸರವನ್ನು ಉಳಿಸಿಕೊಳ್ಳಬೇಕೆಂದು ಅನೇಕ ಬಾರಿ ಸುದ್ದಿಯಾಯಿತು. ನಂತರ ಮೂರೂ ಸಂಸ್ಥೆಗಳಿಗೆ 30 ವರ್ಷಗಳ ಕಾಲ ನೀಡಿದ್ದ ಲೀಸ್ ಅಗ್ರಿಮೆಂಟ್ ಗಳಲ್ಲಿ ಬಯೋ ಪಾರ್ಕ್ ಗೆ ಯಾವುದೇ ಹಾನಿ ಮಾಡಬಾರದೆಂಬ ಷರತ್ತು ವಿಧಿಸಲಾಗಿತ್ತು. ಇದೀಗ ವಿ.ವಿ ಭೂಮಿಯನ್ನು ಕಟ್ಟಡಗಳಿಗಾಗಿ ನೀಡಬಾರದೆಂಬ ಕೂಗೂ ಕೇಳಿಬರುತ್ತಿದೆ. ಮುಂದೆ ಓದಿ...

 ವಿ.ವಿಯ ಭೂಮಿ ಹಂಚಿಕೆ ಹೀಗಿದೆ...

ವಿ.ವಿಯ ಭೂಮಿ ಹಂಚಿಕೆ ಹೀಗಿದೆ...

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾಗೆ 81.20 ಎಕರೆ, ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಗೆ 11.11 ಎಕರೆ, ಅಗ್ನಿಶಾಮಕ ದಳಕ್ಕೆ 4 ಎಕರೆ, ISEC ಗೆ 38.21 ಎಕರೆ, Atomic Energy Department ಗೆ 15 ಎಕರೆ, NLSIU ಗೆ 19+5 ಎಕರೆ, ಅರಣ್ಯ ಇಲಾಖೆ ಧನ್ವಂತ್ರಿ ವನಕ್ಕೆ 8 ಎಕರೆ, IIPM ಗೆ 4.30 ಎಕರೆ, ಟೆಲಿಕಾಂ ಡಿಪಾರ್ಟ್ಮೆಂಟ್ ಗೆ 10,000 ಚದುರ ಅಡಿ, NAAC 5+5=10 ಎಕರೆ, ಕಲಾಗ್ರಾಮಕ್ಕೆ 20 ಎಕರೆ, NCTE ಗೆ 1 ಎಕರೆ, SBI ಕಟ್ಟಡಕ್ಕೆ 200x 220 ಚದುರ ಅಡಿ, ಕುವೆಂಪು ಶತಮಾನೋತ್ಸವ ಭವನಕ್ಕೆ 2 ಎಕರೆ, ಕೇಂದ್ರ ಸಾಹಿತ್ಯ ಅಕಾಡೆಮಿಗೆ 0.32 ಗುಂಟೆ, NCC ಗೆ 2 ಎಕರೆ, Interuniversity for Yogic Sciences ಗೆ 15 ಎಕರೆ, ಸೆಂಟ್ರಲ್ ಯೂನಿವರ್ಸಿಟಿ ಕರ್ನಾಟಕ ಕ್ಕೆ 10 ಎಕರೆ, CBSC ಗೆ 1 ಎಕರೆ ಜಾಗವನ್ನು ನೀಡಲಾಗಿದೆ.

ಜೀವವೈವಿಧ್ಯ ವನ ಭಾಗ 2; ನಮ್ಮ ಗಿಡ-ನಮ್ಮ ವನ- ಕಡಿಯಲು ಬಿಡೆವುಜೀವವೈವಿಧ್ಯ ವನ ಭಾಗ 2; ನಮ್ಮ ಗಿಡ-ನಮ್ಮ ವನ- ಕಡಿಯಲು ಬಿಡೆವು

 ಗೋವಿಂದ ರಾಜು ಆರೋಪ

ಗೋವಿಂದ ರಾಜು ಆರೋಪ

ಹೀಗೆ ಬೆಂಗಳೂರು ವಿಶ್ವವಿದ್ಯಾಲಯದ ಅರಣ್ಯ ನಾಶವಾಗಿ ಬರೀ ಕಟ್ಟಡಗಳು ಬರಲು ಆಯಾ ಕಾಲದ ಉಪಕುಲಪತಿಗಳೇ ಪರೋಕ್ಷವಾಗಿ ಕಾರಣರಾಗಿರುತ್ತಾರೆ ಎಂದು ಡಾ. ಗೋವಿಂದರಾಜು ವಿವಿಯ ಕುಲಪತಿ ಹಾಗೂ ಕುಲಸಚಿವರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.

ಆರೋಪಕ್ಕೆ ಅವರು ನೀಡಿರುವ ತರ್ಕವೂ ನ್ಯಾಯಸಮ್ಮತವಾಗಿದೆ. ಒಂದೊಮ್ಮೆ ಸರ್ಕಾರ ವಿ.ವಿಯ ಮುಖ್ಯಸ್ಥರಿಗೆ ಜಮೀನು ಕೇಳಿದಾಗ ‘ತಮ್ಮ ವಿವಿ ವ್ಯಾಪ್ತಿಯಲ್ಲಿ ಜೀವವೈವಿಧ್ಯವನ ಇರುವ ಕಾರಣ ಆ ಜಾಗವನ್ನು ಬೇರಾವ ಕಾರಣಕ್ಕೂ ಕೊಡಲು ಬರುವುದಿಲ್ಲವೆಂದು ಸರ್ಕಾರಕ್ಕೆ ಬಂದು ಹೋದ ಉಪಕುಲಪತಿಗಳು ತಿಳಿಸಲು ಯಾ ಮನದಟ್ಟು ಮಾಡಲು ಸೋತಿದ್ದಾರೆ' ಇದು ದುರಂತವೇ ಸರಿ ಎಂದು ತಮ್ಮ ನೋವನ್ನು ಗೋವಿಂದ ರಾಜ್ ಹೊರಹಾಕಿದ್ದಾರೆ.

 ಇತರೆ ಚಟುವಟಿಕೆಗಳಿಗೆ ದೊಡ್ಡ ಪ್ರಮಾಣದ ಜಮೀನು

ಇತರೆ ಚಟುವಟಿಕೆಗಳಿಗೆ ದೊಡ್ಡ ಪ್ರಮಾಣದ ಜಮೀನು

ಬೆಂಗಳೂರು ವಿವಿ ಅಧೀನದಲ್ಲಿದ್ದ 1112 ಎಕರೆ ಪೈಕಿ ಬಹು ದೊಡ್ಡ ಪ್ರಮಾಣದ ಜಮೀನನ್ನು ಇತರೆ ಚಟುವಟಿಕೆಗಳಿಗೆ ಕೊಟ್ಟಿರುವುದು ಮತ್ತು ಬಹುಕೋಟಿ ಮೌಲ್ಯದ ಭೂಮಿಯೂ ಒತ್ತುವರಿ ಆಗಿರುವುದು ಕಂಡುಬರುತ್ತದೆ. ಇದು ಹೀಗೇ ಮುಂದುವರೆದರೆ ವಿ.ವಿಯ ಕಾರ್ಯಚಟುವಟಿಕೆಗಳಿಗೇ ಜಾಗವಿಲ್ಲದಾಗಬಹುದು. ಒಂದೇ ಕಟ್ಟಡದಲ್ಲಿ ಹಲವು ವಿಭಾಗಗಳು ನಡೆಯುತ್ತಿರುವುದನ್ನು ಕಾಣಬಹುದಾಗಿದೆ.

ಜೀವವೈವಿಧ್ಯವನ ಭಾಗ 4: ಪರಿಸರ ಪ್ರಿಯರಿಗೊಂದು ಗುಡ್ ನ್ಯೂಸ್ಜೀವವೈವಿಧ್ಯವನ ಭಾಗ 4: ಪರಿಸರ ಪ್ರಿಯರಿಗೊಂದು ಗುಡ್ ನ್ಯೂಸ್

Recommended Video

ಒಬ್ಬರೇ ಬಸ್ stand ಅಲ್ಲಿ ಇದ್ರೆ ಹುಷಾರು !!! | Oneindia Kannada
 ವಿ.ವಿ.ಗೆ ಜಮೀನು ನೀಡದಂತೆ ತಾಕೀತು

ವಿ.ವಿ.ಗೆ ಜಮೀನು ನೀಡದಂತೆ ತಾಕೀತು

ಇನ್ನು ವಿ.ವಿ ಆವರಣದಲ್ಲಿ ಬೆಳೆದು ನಿಂತಿರುವ ಜೀವವೈವಿಧ್ಯವನದ ಹಿಂದೆ ಪ್ರೊ. ರೇಣುಕಾ ಪ್ರಸಾದ್ ಅವರ ಶ್ರಮ, ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಕಾಳಜಿಯನ್ನು ಕೊಂಡಾಡಿರುವ ಗೋವಿಂದರಾಜ್ ವಿ.ವಿ ಭೂಮಿ ಇನ್ನು ಮುಂದೆ ಯಾವುದೇ ಸಂಸ್ಥೆಗಾಗಿ, ಕಟ್ಟಡಗಳಿಗಾಗಿ ಕೊಡಲೇಬಾರದೆಂದು ವಿ.ವಿ.ಗೆ ತಾಕೀತು ಮಾಡಿದ್ದಾರೆ.

English summary
Syndicate member Dr. Govindaraju has written a letter to the Chancellor and vice Chancellor not to give Bangalore university land for buildings
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X