16 ಕೆರೆಗಳಿಗೆ ಜೀವ ಕೊಟ್ಟ 'ಯುನೈಟೆಡ್ ವೇ ಆಫ್ ಬೆಂಗಳೂರು'
ಬೆಂಗಳೂರು, ಜೂನ್ 30 : ಅಲ್ಲಿದ್ದ ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆಯ ಕಾರ್ಯಕರ್ತರ ಮುಖದಲ್ಲಿ ಒಂದು ಹೆಮ್ಮೆ, ಸಾಧನೆಯ ಹಾದಿಯನ್ನು ಕ್ರಮಿಸಿದ ಸಂತಸ ಇಣುಕುತ್ತಿತ್ತು. ಅದನ್ನು ಹೇಳಿಕೊಳ್ಳಲು ಕಾರಣವಾಗಿದ್ದು ಸಂಸ್ಥೆಯ ವಾರ್ಷಿಕ ಸಭೆ.
ಬೆಂಗಳೂರಿನ ರಾಯಲ್ ಆರ್ಕಿಡ್ ಹೋಟೆಲ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿಕೊಳ್ಳುವುದಕ್ಕೆ ಸಂಸ್ಥೆಗೆ ಸಾಕಷ್ಟು ವಿಚಾರಗಳಿದ್ದವು. ಅಳವಿನ ಅಂಚಿನಲ್ಲಿದ್ದ ಬೆಂಗಳೂರಿನ 16 ಕೆರೆಗಳ ಪುನರುಜ್ಜೀವನ ಕೊಟ್ಟ ಸಂತಸದ ಗಳಿಗೆಯನ್ನು ಹಂಚಿಕೊಂಡಿತು.
ಯುನೈಟೆಡ್ ವೇ ಆಫ್ ಬೆಂಗಳೂರು' ನಗರದ ಸರಕಾರೇತರ ಸಂಸ್ಥೆಯಾಗಿದ್ದು ನಾಗರೀಕ ಸಮುದಾಯದ ಜತೆ ಸೇರಿ 16 ಕೆರೆಗಳ ಪುನರುಜ್ಜೀವನಗೊಳಿಸಿದೆ. ಈ ಮೂಲಕ ಪ್ರಾಣಿ ಮತ್ತು ಸಸ್ಯಗಳ ಸಂರಕ್ಷಣೆಗೆ ದಾರಿ ಮಾಡಿದೆ. ಅಂತೆಯೇ ನೀರಿನ ಗುಣಮಟ್ಟವು ವೃದ್ಧಿಸಿದ್ದು ಆ ಎಲ್ಲಾ ಕೆರೆಗಳಿಗೀಗ ಹೊಸ ಜೀವಕಳೆ ಬಂದಿದೆ.
'ವೇಕ್ ದ ಲೇಕ್' ಕ್ಯಾಂಪೇನ್ ಸೇರಿದಂತೆ ಇತರ ಮಾದರಿ ಕಾರ್ಯಕ್ರಮಗಳ ಮೂಲಕ 16 ಕೆರೆಗಳನ್ನು ಸ್ವಚ್ಛಗೊಳಿಸಲಾಗಿದ್ದು, ಈ ಕೆರೆಗಳ ಸುತ್ತ ವಾಕಿಂಗ್ ಪಾತ್ ನಿರ್ಮಿಸುವ ಜವಾಬ್ದಾರಿಯನ್ನು ಯುನೈಟೆಡ್ ವೇ ಆಫ್ ಬೆಂಗಳೂರು ಹೊತ್ತಿತ್ತು. ಅದರಂತೆ ಹದಿನಾರು ಕೆರೆಗಳ ಸುತ್ತ ಸಸಿಗಳನ್ನು ಬೆಳೆಸುವ ಮೂಲಕ ಹಸಿರು ಬೆಂಗಳೂರಿಗೂ ನಾಂದಿ ಹಾಡಿದೆ. ಇದಷ್ಟೇ ಅಲ್ಲದೆ 'ಯುನೈಟೆಡ್ ವೇ ಸಂಸ್ಥೆ' ಇನ್ನು ಹತ್ತಾರು ಮಹತ್ತರ ಸಾಮಾಜಿಕ ಕಾರ್ಯಗಳನ್ನು ಮಾಡಿದೆ. ಆ ಎಲ್ಲಾ ಮಹತ್ವದ ಸಾಧನೆಗಳನ್ನು ಮುಂದೆ ಓದಿ.

'ಯುನೈಟೆಡ್ ವೇ ಸಂಸ್ಥೆ'ಯಿಂದ ಜೀವಕಳೆ ಕಂಡ 16 ಕೆರೆಗಳು
ಅಧೋಗತಿ ತಲುಪಿದ್ದ ನಗರದ ಯಲಹಂಕ, ಕೈಕೊಂಡ್ರಹಳ್ಳಿ, ಉತ್ತರಹಳ್ಳಿ, ಹಲಸೂರು, ಚಿನ್ನಪ್ಪನಹಳ್ಳಿ, ಶೀಲವಂತಕೆರೆ, ಮುನ್ನೆಕೊಳಲು, ಸೌಕೆರೆ, ಕೌಡೆನಹಳ್ಳಿ, ದೇವಸಮುದ್ರ, ಶಿಂಗೇಹಳ್ಳಿ, ರಾಚೇನಹಳ್ಳಿ, ಮಹದೇವಪುರ, ಕುಂದಲಹಳ್ಳಿ. ಕುಡ್ಲು ದೊಡ್ಡ ಕೆರೆ ಹಾಗೂ ದಾಸರಹಳ್ಳಿ ಕೆರೆಗಳಿಗೆ ಹಲವು ಕಾರ್ಪೊರೇಟ್, ಸಂಘ-ಸಂಸ್ಥೆಗಳ ನೆರವಿನಿಂದ 'ಯುನೈಟೆಡ್ ವೇ ಆಫ್ ಬೆಂಗಳೂರು' ಸಂಸ್ಥೆ ಜೀವ ಕೊಟ್ಟಿದೆ.

18000 ಮಕ್ಕಳಿಗೆ ಶಿಕ್ಷಣ
ಸಂಸ್ಥೆ ವತಿಯಿಂದ 18000 ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದ್ದು, ಪ್ರತಿ ದಿನ ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡಲಾಗುತ್ತಿದೆ. ಜತೆಗೆ 2500 ನಿರುದ್ಯೋಗಿಗಳು ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗಿದೆ. ಈ ಎಲ್ಲಾ ಮಹತ್ತರ ಸಮಾಜ ಮುಖಿ ಕಾರ್ಯಗಳಿಗಾಗಿ 7500 ಸ್ವಯಂ ಸೇವಕರನ್ನು ಸಂಸ್ಥೆ ಸಂಘಟಿಸಿದೆ.

ಕರ್ನಾಟಕದ ಸಂಸ್ಕೃತಿ ಉಳಿಸಲು ಯುಡಬ್ಲ್ಯುಬಿಇ ಪಣ
ಸೆಪ್ಟೆಂಬರ್ 1 ರಿಂದ 3ರ ವರೆಗೆ ನಂದಿ ಬೆಟ್ಟದಲ್ಲಿ 'ನಂದಿ ಹಿಲಥಾನ್' ಹಬ್ಬವನ್ನು ಆಚರಿಸಲು 'ಯುನೈಟೆಡ್ ವೇ ಆಫ್ ಬೆಂಗಳೂರು' ಮುಂದಾಗಿದೆ. ಈ ಹಬ್ಬದ ಸಮಯದಲ್ಲಿ ಕರ್ನಾಟಕದ ಸ್ಥಳೀಯ ಸಂಸ್ಕೃತಿ, ಆಹಾರ, ಪರಿಸರ ಮತ್ತು ಇತಿಹಾಸದ ಬಗ್ಗೆ ಜಾಗೃತಿ ಮೂಡಿಸಲು ಸಂಸ್ಥೆ ನಿರ್ಧರಿಸಿದೆ.

ಯುಡಬ್ಲ್ಯುಬಿಇ ಕಾರ್ಯಕ್ಕೆ ಸಚಿವ ಪ್ರಿಯಾಂಕ ಖರ್ಗೆ ಶ್ಲಾಘನೆ
ಜೂನ್ 30ರಂದು 'ಯುನೈಟೆಡ್ ವೇ ಆಫ್ ಬೆಂಗಳೂರು' ಹಮ್ಮಿಕೊಂಡಿದ್ದ ಕೆರೆಗಳ ಉದ್ಧಾರದ ಯಶಸ್ಸಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಗ್ಗೊಂಡಿದ್ದ ರಾಜ್ಯ ಐಟಿ, ಬಿಟಿ ಮತ್ತು ಪ್ರವಾಸೋಧ್ಯಮ ಸಚಿವ ಪ್ರಿಯಾಂಕ ಖರ್ಗೆ ಅವರು ಮಾತನಾಡಿ, " 16 ಕರೆಗಳ ಉದ್ಧಾರದ ಜತೆಗೆ ಬೆಂಗಳೂರನ್ನು ನಿಜವಾಗಿಯೂ ಗಮನಾರ್ಹ ತಾಣವನ್ನಾಗಿಸಿದೆ," ಎಂದು ಯುಡಬ್ಲ್ಯುಬಿಇ ಕಾರ್ಯವನ್ನು ಶ್ಲಾಘಿಸಿದರು.

'ಯುನೈಟೆಡ್ ವೇ ಆಫ್ ಬೆಂಗಳೂರು' ಸಂಸ್ಥೆ ಬಗ್ಗೆ ಒಂದಷ್ಟು ಮಾಹಿತಿ
ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಸಾಗಿರುವ 'ಯುನೈಟೆಡ್ ವೇ ಆಫ್ ಬೆಂಗಳೂರು' ಸಂಸ್ಥೆ ಬಗ್ಗೆ ಒಂದಷ್ಟು ತಿಳಿಯಲೇಬೇಕು. 2008ರಲ್ಲಿ ಸ್ಥಾಪನೆಗೊಂಡಿರುವ ಯುಡಬ್ಲ್ಯುಬಿಇ ಒಂದು ಸ್ವ ಇಚ್ಛೆಯಿಂದ ಸಾಮಾಜಿಕ ಕಾರ್ಯದಲ್ಲಿ ಮುಂದೆ ಸಾಗುತ್ತಿರುವ ಲಾಭ ರಹಿತ ಸಂಸ್ಥೆಯಾಗಿದೆ. ಇದು ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಕಾರ್ಪೊರೇಟ್ ನೊಂದಿಗೆ ಸಂಯೋಜಿತವಾಗಿದ್ದು, ವಿದ್ಯಾಭ್ಯಾಸ, ಜನಜೀವನ, ಆರೋಗ್ಯ ಮತ್ತು ಪರಿಸರವನ್ನು ಕೇಂದ್ರೀಕರಿಸಿ ಕಾರ್ಯ ನಿರ್ವಹಿಸುತ್ತದೆ.












Click it and Unblock the Notifications