ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇ–ಗ್ರಂಥಾಲಯ ಸ್ಥಾಪನೆ 1 ಕೋಟಿ ರು ನೀಡಿದ ಸಂಸದ ಅನಂತಕುಮಾರ್

By Mahesh
|
Google Oneindia Kannada News

ಬೆಂಗಳೂರು, ಜನವರಿ 22: ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಎಲ್ಲಾ ವಾರ್ಡ್‌ಗಳಲ್ಲಿ ಇ-ಗ್ರಂಥಾಲಯ ಸ್ಥಾಪನೆ ಮಾಡಲು ಮುಂದಾಗಬೇಕು. ಇದಕ್ಕಾಗಿ ಸಂಸದರ ನಿಧಿಯಿಂದ 1 ಕೋಟಿ ರು ಅನುದಾನ ನೀಡುತ್ತೇನೆ. ಇ-ಗ್ರಂಥಾಲಯ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೂ ಪತ್ರ ಬರೆಯುತ್ತೇನೆ' ಎಂದು ಕೇಂದ್ರ ಸಚಿವ ಅನಂತಕುಮಾರ್‌ ತಿಳಿಸಿದರು.

ಮೈಸೂರಿಗೆ 'ಓದಿನ ಮನೆ'ಗೆ ನೀವೂ ಒಮ್ಮೆ ಹೋಗಿಬನ್ನಿ...ಮೈಸೂರಿಗೆ 'ಓದಿನ ಮನೆ'ಗೆ ನೀವೂ ಒಮ್ಮೆ ಹೋಗಿಬನ್ನಿ...

ನಗರ ಕೇಂದ್ರ ಗ್ರಂಥಾಲಯ ಹಾಗೂ ಬಿಬಿಎಂಪಿ ವತಿಯಿಂದ ಎನ್.ಆರ್. ಕಾಲೊನಿಯಲ್ಲಿ ಸ್ಥಾಪಿಸಿರುವ ಇ-ಗ್ರಂಥಾಲಯವನ್ನು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌ ಭಾನುವಾರ ಉದ್ಘಾಟಿಸಿ ಮಾತನಾಡಿದರು

'ಪಾಲಿಕೆಯು ಸಂಗ್ರಹಿಸಿರುವ ಸುಮಾರು 300 ಕೋಟಿ ರು ಗಳಷ್ಟು ಗ್ರಂಥಾಲಯ ಕರವನ್ನು ಕೂಡಲೇ ಗ್ರಂಥಾಲಯ ಇಲಾಖೆಗೆ ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸುತ್ತೇನೆ. ಇದರಿಂದ ಮತ್ತಷ್ಟು ಗ್ರಂಥಾಲಯಗಳನ್ನು ಸ್ಥಾಪಿಸಲು ಸಹಕಾರಿಯಾಗುತ್ತದೆ' ಎಂದರು.

Union Minister Ananth Kumar assures Rs.1 crore e-libraries for BBMP wards

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮೇಯರ್‌ ಆರ್‌.ಸಂಪತ್‍ ರಾಜ್ ಮಾತನಾಡಿ, 'ಎಲ್ಲಾ ವಾರ್ಡ್‌ಗಳಲ್ಲಿ ಇ-ಗ್ರಂಥಾಲಯ ಸ್ಥಾಪಿಸುವ ಯೋಜನೆಯನ್ನು ಮುಂದಿನ ಬಜೆಟ್‌ನಲ್ಲಿ ಸೇರ್ಪಡೆ ಮಾಡಲಾಗುವುದು, ಇದಕ್ಕೆ ಸಿಗುವ ಅನುದಾನವನ್ನು ಸದುಪಯೋಗಪಡಿಸಿಕೊಳ್ಳಲಾಗುವುದು' ಎಂದು ಹೇಳಿದರು.
English summary
Union Minister for Chemicals and Fertilizers and Minister for Parliamentary Affairs Ananth Kumar has assured of sanctioning Rs.1 crore from MP fund to establish e-libraries in every ward of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X