ಮೆಜೆಸ್ಟಿಕ್‌ನಲ್ಲಿ ಅಂಧ ದಂಪತಿಯ 8 ತಿಂಗಳ ಹಸುಗೂಸು ಅಪಹರಣ
ಬೆಂಗಳೂರು, ಏಪ್ರಿಲ್ 30: ಸಂಬಂಧಿಕರ ಮನೆಗೆಂದು ನಗರಕ್ಕೆ ಬಂದಿದ್ದ ಅಂಧ ದಂಪತಿಗಳ 8 ತಿಂಗಳ ಹಸುಗೂಸನ್ನು ಮಹಿಳೆಯೊಬ್ಬರು ಅಪಹರಿಸಿದ ಘಟನೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಡೆದಿದೆ.
ರಾಯಚೂರು ಮೂಲದ ಬಸವರಾಜು ಮತ್ತು ಬಿಕೆ ಚಿನ್ನು ದಂಪತಿಯ ಮಗು ಸಾಗರ್‌ನನ್ನು ಅಪಹರಣ ಮಾಡಲಾಗಿದ್ದು,ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಪೊಲೀಸರು ಮಗು ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ದಂಪತಿ ಕೆಎಸ್‌ಆರ್‌ಟಿಸಿ ಬಸ್ ಮೂಲಕ ರಾಯಚೂರಿನಿಂದ ಬೆಂಗಳೂರಿಗೆ ಬಂದಿದ್ದರು. ಮೆಜೆಸ್ಟಿಕ್ ಶೌಚಾಲಯದಲ್ಲಿ ದಂಪತಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಬೆಳಗ್ಗೆ 7.30ರ ಸುಮಾರಿಗೆ ನಿಲ್ದಾಣದಲ್ಲಿರುವ ಪ್ಲಾಟ್‌ಫಾರಂ ಸಂಖ್ಯೆ 19ರಲ್ಲಿ ಮಗು ಜೊತೆ ಕುಳಿತಿದ್ದರು. ಮಗು ಜೋರಾಗಿ ಅಳುತ್ತಿದ್ದ ಹಿನ್ನೆಲೆಯಲ್ಲಿ ಚಿನ್ನು ಮಗುವಿಗೆ ನೀರು ಕುಡಿಸುವುದಾಗಿ ಬಾಟಲಿ ಪಡೆದುಕೊಂಡಿದ್ದಾಳೆ.

ನಮಗೆ ಯಾರೋ ಸಹಾಯ ಮಾಡುತ್ತಿದ್ದಾರೆ ಎಂದುಕೊಂಡು ಚಿನ್ನು ಅವರು ಮಹಿಳೆಗೆ ಕೈಗೆ ನೀರಿನ ಬಾಟಲಿ ನೀಡಿದ್ದಾರೆ. ನಂತರ ಮಗುವನ್ನು ಎತ್ತಿಕೊಳ್ಳುತ್ತೇನೆ ಎಂದು ಮಹಿಳೆಯು ಮಗುವನ್ನು ಕೇಳಿದ್ದು, ಚಿನ್ನು ಮಗುವನ್ನು ಆಕೆಗೆ ನೀಡಿದ್ದಾಳೆ. ಕೆಲ ನಿಮಿಷಗಳ ಬಳಿಕ ಮಗುವನ್ನು ಕೊಡುವಂತೆ ಕೇಳಿದ್ದಾಳೆ. ಆದರೆ ಯಾರಿಂದಲೂ ಪ್ರತಿಕ್ರಿಯೆ ಬಂದಿಲ್ಲ, ಅಲ್ಲೆಲ್ಲಾ ಹುಡುಕಾಡಿದಾಗಲೂ ಮಗು ಸಿಗಲಿಲ್ಲ. ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.












Click it and Unblock the Notifications