ದೀಪಾಂಜಲಿ ನಗರದ ರೈಲ್ವೆ ಹಳಿ ಮೇಲೆ ತುಂಡಾದ ಶವ ಪತ್ತೆ
ದೀಪಾಂಜಲಿ ನಗರ ರೈಲ್ವೆ ಹಳಿಯ ಬಳಿ ಅಪರಿಚಿತ ಶವ ಪತ್ತೆ. ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಮೇಲ್ನೋಟಕ್ಕೆ ಹೆಣ್ಣಿನ ಶವವೆಂಬಂತೆ ಭಾಸವಾಗಿದೆ.
ಬೆಂಗಳೂರು, ಜೂನ್ 17: ದೀಪಾಂಜಲಿ ನಗರದ ಬಳಿಯಿರುವ ರೈಲ್ವೆ ಹಳಿಯ ಮೇಲೆ ಅಪರಿಚಿತ ಶವವೊಂದು ಪತ್ತೆಯಾಗಿದೆ. ಶನಿವಾರ ಬೆಳ್ಳಂಬೆಳಗ್ಗೆ ಈ ಶವ ಪತ್ತೆಯಾಗಿರುವುದು ಸುತ್ತಲಿನ ನಿವಾಸಿಗಳಲ್ಲಿ ದಿಗ್ಭ್ರಮೆ ಮೂಡಿಸಿತ್ತು.
ಮೇಲ್ನೋಟಕ್ಕೆ ಇದು ಮಹಿಳೆಯ ಶವವಾಗಿ ಗೋಚರಿಸುತ್ತಿತ್ತು. ರೈಲಿಗೆ ಸಿಕ್ಕಿದ್ದ ಈ ದೇಹ ಎರಡು, ಮೂರು ತುಂಡುಗಳಾಗಿದ್ದವು. ರೈಲ್ವೇ ಹಳಿಯ ಮೇಲೆಲ್ಲಾ ರಕ್ತ ಹಾಗೂ ಕರುಳು ಮುಂತಾದ ಅಂಗಾಂಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನೋಡುಗರಲ್ಲಿ ಅಪಘಾತದ ಭೀಕರತೆಯನ್ನು ಸಾರುತ್ತಿತ್ತು.

ಇದು ರೈಲು ಹಳಿ ದಾಟುವ ವೇಳೆ ನಡೆದಿರುವ ಅಪಘಾತವೇ ಅಥವಾ ಆತ್ಮಹತ್ಯೆಯೇ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಸಾಬೀತಾಗಬೇಕಿದೆ.












Click it and Unblock the Notifications