ಕಾರ್ ಪೂಲಿಂಗ್‌ಗೆ ಬೆಂಗಳೂರನ್ನು ಆಯ್ಕೆ ಮಾಡಿಕೊಂಡ ಉಬರ್
ಬೆಂಗಳೂರು, ಸೆಪ್ಟೆಂಬರ್. 22: ಟ್ಯಾಕ್ಸಿ ಸೇವೆಯಲ್ಲಿ ಮಹಾನಗರ ಜನರ ಪ್ರೀತಿಗೆ ಪಾತ್ರವಾಗಿರುವ ಉಬರ್ ಮತ್ತೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಕಾರ್ ಪೂಲಿಂಗ್ ಸೇವೆ ಮುಂದಾಗಿರುವ ಸಂಸ್ಥೆ ಬೆಂಗಳೂರನ್ನು ಭಾರತದಲ್ಲಿ ತನ್ನ ಪ್ರಥಮ ನಗರವನ್ನಾಗಿ ಆಯ್ಕೆ ಮಾಡಿಕೊಂಡಿದೆ.
ಉಬರ್ ಸಂಸ್ಥೆಯು ಭಾರತದಲ್ಲಿ 'ಉಬರ್ ಪೂಲ್' ಹೆಸರಿನಲ್ಲಿ ಕಾರ್ ಪೂಲಿಂಗ್ (ಬೇರೆ ಬೇರೆ ವ್ಯಕ್ತಿಗಳು ಒಂದೇ ಕಡೆ ಹೋಗಲು ಒಂದೇ ಕಾರನ್ನು ಬಳಸುವುದು) ಸೇವೆಯನ್ನು ಆರಂಭಿಸುವುದಾಗಿ ಸೋಮವಾರ ಘೋಷಣೆ ಮಾಡಿದೆ. [ಚಾಲಕನಿಗೆ ಹಣ ಕೊಟ್ಟು ಉಬರ್ ಕ್ಯಾಬ್‌ನಿಂದ ಇಳಿರಿ]

ಕೆಲವೇ ದಿನದಲ್ಲಿ ಈ ಸೇವೆ ನಗರದಲ್ಲಿ ಆರಂಭವಾಗಲಿದೆ. ಇಂತಹ ಸೇವೆಯನ್ನು ಈಗಾಗಲೇ ಸ್ಯಾನ್ ಫ್ರಾನ್ಸಿಸ್ಕೊ, ನ್ಯೂಯಾರ್ಕ್, ಬಾಸ್ಟನ್, ಆಸ್ಟಿನ್ ಮತ್ತು ಪ್ಯಾರಿಸ್‌ನಲ್ಲಿ ಉಬರ್ ಒದಗಿಸುತ್ತಿದ್ದು ಜನಪ್ರಿಯವಾಗಿದೆ. ನಿಮ್ಮ ಮೊಬೈಲ್ ಅಪ್ಲಿಕೇಶನ್ ಮೂಲಕ ಸುಲಭ ಸಂವಹನವೂ ಸಾಧ್ಯವಾಗಲಿದೆ.
ಬೇರೆ ಬೇರೆ ವ್ಯಕ್ತಿಗಳು ಒಂದೇ ಜಾಗಕ್ಕೆ ಹೋಗಬೇಕಾದರೆ ಒಂದೇ ಕಾರಿನಲ್ಲಿ ಬಾಡಿಗೆಯನ್ನು ಹಂಚಿಕೊಂಡು ಸಂಚರಿಸಬಹುದು. ಕಾರ್ ಪೂಲಿಂಗ್ ಸೇವೆ ಘೋಷಣೆ ಮಾಡಲು ಸಂತಸವಾಗುತ್ತಿದೆ. ಮಹಾನಗರಗಳು ಎದುರಿಸುತ್ತಿರುವ ಸಂಚಾರ ದಟ್ಟಣೆಯನ್ನು ಇದು ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಉಬರ್ ಪ್ರಧಾನ ವ್ಯವಸ್ಥಾಪಕ ಭಾವಿಕ್ ರಾಥೋಡ್ ಹೇಳಿದ್ದಾರೆ. [ಬೆಂಗಳೂರು: ಟ್ಯಾಕ್ಸಿ ಫಾರ್ ಶ್ಯೂರ್ ಬಾಡಿಗೆ ಭಾರೀ ಇಳಿಕೆ]
ಎರಡು ವರ್ಷದ ಹಿಂದೆ ಭಾರತದಲ್ಲಿ ಸೇವೆ ಆರಂಭಿಸಿದ ಉಬರ್ 22 ನಗರಗಳಲ್ಲಿ ಸಂಚಾರ ಮಾಡುತ್ತಿದೆ. ಈ ಪೂಲಿಂಗ್ ಸೇವೆ ಬಳಕೆ ಮಾಡಿಕೊಳ್ಳುವುದರಿಂದ ಶೇ. 50 ರಷ್ಟು ಹಣ ಉಳಿತಾಯ ಮಾಡುವುದರೊಂದಿಗೆ ಇಂಧನ ಉಳಿತಾಯ, ಪರಿಸರ ಸಂರಕ್ಷಣೆಯೂ ಸಾಧ್ಯವಿದೆ.












Click it and Unblock the Notifications