ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡಾನ್ ಯೋಜನೆ: ರಾಜ್ಯಕ್ಕೆ ಹೊಸ 15 ವಿಮಾನ ಸೌಲಭ್ಯ

|
Google Oneindia Kannada News

ಬೆಂಗಳೂರು, ಜನವರಿ 25: ಎರಡನೇ ಮತ್ತು ಮೂರನೇ ಹಂತದ ನಗರಗಳಿಗೆ ವಿಮಾನ ಯಾನ ಸಂಪರ್ಕ ಕಲ್ಪಿಸುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಉಡಾನ್ ಯೋಜನೆಯಲ್ಲಿ ಕರ್ನಾಟಕಕ್ಕೆ ಒಟ್ಟು 15 ವಿಮಾನ ಸಂಪರ್ಕಗಳು ಲಭಿಸಿವೆ.

ಇದರಲ್ಲಿ 12 ವಿಮಾನಗಳು ಉತ್ತರ ಕರ್ನಾಟಕ ಭಾಗದ ಪ್ರಮುಖ ನಗರ ಹುಬ್ಬಳ್ಳಿಯನ್ನು ದೇಶದ ವಿವಿಧೆಡೆ ಸಂಪರ್ಕಿಸಲಿವೆ. ಉಳಿದಂತೆ ಮೂರು ವಿಮಾನಗಳು ಕೊಪ್ಪಳದಿಂದ ಹಾರಾಟ ನಡೆಸಲಿವೆ. ರಾಷ್ಟ್ರರಾಜಧಾನಿ ನವದೆಹಲಿಯ ನ್ಯಾಷನಲ್ ಮೀಡಿಯ ಸೆಂಟರ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು ಮಾಹಿತಿ ನೀಡಿದರು.

ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ವಿಮಾನ ಯಾನ ಸೌಲಭ್ಯ ದಕ್ಕಬೇಕು, ವ್ಯವಹಾರ ಸರಳೀಕರಣ ಮತ್ತು ಪ್ರಾದೇಶಿಕ ಭಾಗಗಳಿಗೂ ವಿಮಾನಯಾನ ಸೌಲಭ್ಯದ ವಿಸ್ತರಣೆ ಆಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಉಡಾನ್ ಯೋಜನೆ ಜಾರಿಗೊಳಿಸುತ್ತಿದೆ. ಕರ್ನಾಟಕಕ್ಕೆ ಲಭಿಸಿರುವ ವಿಮಾನಗಳು ಪ್ರತಿದಿನ ಹಾರಾಟ ನಡೆಸಲಿದ್ದು ಇವುಗಳ ದರ ಕೂಡ ನಿಗದಿಯಾಗಿದೆ. ಉಡಾನ್ ಯೋಜನೆಯ ಘೋಷಣೆಯ ಸಂದರ್ಭದಲ್ಲಿ ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ಉಪಸ್ಥಿತರಿದ್ದರು.
ಎಲ್ಲಿಂದ ಎಲ್ಲಿಗೆ ವಿಮಾನಯಾನ ಕಂಪನಿ ಗರಿಷ್ಠ ದರ

Two tier cities of the state get 15 air service

ಕೊಪ್ಪಳ-ಬೆಂಗಳೂರು ಟರ್ಬೋ ಏವಿಯೇಶನ್ 1980 ರೂ

ಕೊಪ್ಪಳ-ಗೋವಾ ಟರ್ಬೋ ಏವಿಯೇಶನ್ 1810 ರೂ.

ಕೊಪ್ಪಳ-ಹೈದರಾಬಾದ್ ಟರ್ಬೋ ಏವಿಯೇಶನ್ 2060 ರೂ.

ಹುಬ್ಬಳ್ಳಿ-ಚೆನ್ನೈ ಸ್ಪೈಸ್ ಜೆಟ್ 2840 ರೂ.

ಹುಬ್ಬಳ್ಳಿ- ಅಹಮದಾಬಾದ್ ಇಂಡಿಗೋ 3199 ರೂ.

ಹುಬ್ಬಳ್ಳಿ-ಚೆನ್ನೈ ಇಂಡಿಗೋ 2599ರೂ.

ಹುಬ್ಬಳ್ಳಿ-ಕೊಚ್ಚಿನ್ ಇಂಡಿಗೋ 2599 ರೂ

ಹುಬ್ಬಳ್ಳಿ-ಗೋವಾ ಇಂಡಿಗೋ 1299 ರೂ

ಹುಬ್ಬಳ್ಳಿ-ಹಿಂಡನ್ ಘೋಡಾವತ್ 3470 ರೂ

ಹುಬ್ಬಳ್ಳಿ-ಹೈದರಾಬಾದ್ ಅಲಯೆನ್ಸ್ ಏರ್ 2480 ರೂ

ಹುಬ್ಬಳ್ಳಿ-ಹೈದರಾಬಾದ್ ಸ್ಪೈಸ್ ಜೆಟ್ 2480 ರೂ

ಹುಬ್ಬಳ್ಳಿ-ಕಣ್ಣೂರು ಇಂಡಿಗೋ 1999 ರೂ

ಹುಬ್ಬಳ್ಳಿ-ಪುಣೆ ಸ್ಪೈಸ್ ಜೆಟ್ 2150 ರೂ

ಹುಬ್ಬಳ್ಳಿ-ಪುಣೆ ಘೋಡಾವತ್ 2150 ರೂ

ಹುಬ್ಬಳ್ಳಿ-ತಿರುಪತಿ ಘೋಡಾವತ್ 2570 ರೂ

English summary
The government of India has been announced new 15 air service in the two tier cities of Karnataka under Udaan project
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X