ಗೂಂಡಾ ಕಾಯ್ದೆಯಡಿ ಇಬ್ಬರು ಪಾತಕಿಗಳ ಬಂಧನ
ಬೆಂಗಳೂರು, ಆ. 26 : ಪಾತಕಿ ಪಳನಿ ಕೊಲೆ ಆರೋಪಿಗಳಾದ ಪ್ರದೀಪ್ ಮತ್ತು ವಿಜೇಂದ್ರನ್ ಅವರನ್ನು ಬೆಂಗಳೂರು ಪೊಲೀಸರು ಗೂಂಡಾ ಕಾಯ್ದೆಯಡಿ ಮಂಗಳವಾರ ಬಂಧಿಸಿದ್ದಾರೆ.
ಇಂದಿರಾ ನಗರ ಠಾಣೆಯಲ್ಲಿ ಇವರ ಮೇಲೆ ರೌಡಿ ಶೀಟರ್ ಪಟ್ಟಿ ತೆರೆಯಲಾಗಿತ್ತು. ಸಹೋದರರಾದ ಪ್ರದೀಪ್ ಮತ್ತು ವಿಜಿ ಹಾಸ್‌ಮಟ್ ಆಸ್ಪತ್ರೆಗೆ ದಾಖಲಾಗಿದ್ದ ಪಳನಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. (ಗೂಂಡಾ ಕಾಯ್ದೆ ಏನಿದು? ಈಗ ಸುದ್ದಿಯಲ್ಲೇಕಿದೆ?)

ದರೋಡೆ, ಗುಂಪುಗಾರಿಕೆ, ಜೂಜಾಟ ಮತ್ತಿತರ ಪ್ರಕರಣಗಳು ಇವರ ಮೇಲೆ ದಾಖಲಾಗಿದ್ದವು. ಕಳ್ಳ ಬಟ್ಟಿ ತಯಾರಿಕೆಯಲ್ಲೂ ನಿಸ್ಸಿಮರೆಂದು ಹೆಸರು ಪಡೆದಿದ್ದರು. ಅಲ್ಲದೇ ಕೊಳಚೆ ಪ್ರದೇಶ ಒತ್ತುವರಿ ಮಾಡಲು ಹವಣಿಸುತ್ತಿದ್ದರು. ಇವರ ಮೇಲೆ ಕೇವಲ ಬೆಂಗಳೂರು ಅಲ್ಲದೇ ಪಕ್ಕದ ಜಿಲ್ಲೆಗಳಲ್ಲೂ ದೂರು ದಾಖಲಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications