ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ, 75 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶ!

ಬೆಂಗಳೂರು, ಮಾರ್ಚ್ 17: ರಾಜಧಾನಿಯಲ್ಲಿ ಎಂಡಿಎಂಎ, ಕೊಕೇನ್ ಮತ್ತಿತರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಜಕ್ಕೂರು ಸುತ್ತಮುತ್ತಲಿನ ಡ್ರಗ್ ಡೀಲಿಂಗ್ ಮಾಡುತ್ತಿದ್ದ ಇಬ್ಬರು ಪೆಡ್ಲರ್ ಗಳಿಂದ ಸುಮಾರು 75 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Recommended Video

      ಅಕ್ರಮವಾಗಿ ನಗರದಲ್ಲಿ ವಾಸವಿದ್ದು, ಭಾರಿ ಪ್ರಮಾಣದ ಡ್ರಗ್ ಡೀಲ್‌ ಮಾಡ್ತಿದ್ದ ನೈಜೀರಿಯನ್ ಪ್ರಜೆಗಳು ಅರೆಸ್ಟ್‌ | Oneindia Kannada

      ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಜಕ್ಕೂರಿನ ನವ್ಯ ನಗರದ ಶ್ರೀರಕ್ಷಾ ಮೆಡಿಕಲ್ಸ್ ಸಮೀಪದ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿದ್ದಾರೆ. ಬ್ಯುಜಿನೆಸ್ ವೀಸಾ ಮೇಲೆ ಭಾರತಕ್ಕೆ ಬಂದು ಅಕ್ರಮವಾಗಿ ನೆಲೆಸಿದ್ದ ನೈಜೀರಿಯಾ ಮೂಲದ ಯುಚಿಕ್ವೋ ಮಾರ್ಕ್ ಮುರೀಸ್ ಎಂಬುವನನ್ನು ಬಂಧಿಸಿದ್ದಾರೆ.

      ಈತನ ಮನೆಯಲ್ಲಿದ್ದ ಸುಮಾರು 50 ಲಕ್ಷ ರೂ. ಮೌಲ್ಯದ 91 ಎಂಡಿಎಂಎ ಎಕ್ಸ್‌ಟೆಸಿ ಮಾತ್ರೆಗಳು, 56 ಎಲ್ ಎಸ್ ಡಿ ಸ್ಟ್ರಿಪ್ಸ್ , ಮೂರು ಮೊಬೈಲ್, ಐದು ಸಾವಿರ ರೂ. ನಗದು ಹಾಗೂ ಒಂಡಾ ಸಿಟಿ ಕಾರು ವಶಪಡಿಸಿಕೊಳ್ಳಲಾಗಿದೆ. ಈತನ ಸಂಪರ್ಕದಲ್ಲಿದ್ದು ಡ್ರಗ್ ಖರೀದಿ ಮಾಡುತ್ತಿದ್ದವರ ಪತ್ತೆಗೆ ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಈತ ಕಾಲೇಜು ವಿದ್ಯಾರ್ಥಿಗಳಿಗೆ ಅಲ್ಲದೇ ಪ್ರತಿಷ್ಠಿತ ಹೋಟೆಲ್ ಪಾರ್ಟಿಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

      Two international drug peddlers arrested by CC; 75 lakh worth drugs seized

      ಮತ್ತೊಂದು ಪ್ರಕರಣದಲ್ಲಿ ನೈಜೀರಿಯಾ ಮೂಲದ ಜೋಸೆಫ್ ಡುಕ್ವೇ ಒಕಾಫರ್ ಎಂಬ ಡ್ರಗ್ ಪೆಡ್ಲರ್ ನನ್ನು ಬಂಧಿಸಿ ಸುಮಾರು ಹದಿನೈದು ಲಕ್ಷ ರೂ. ಮೌಲ್ಯದ ಕೋಕೇನ್, ಎಲ್ ಎಸ್ ಡಿ ಪಿಲ್ಸ್ ಹಾಗೂ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಂಡಿದ್ದಾರೆ. ನೈಜೀರಿಯಾ ಮೂಲದ ಜೋಸೆಫ್ ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬಂದು ಅಕ್ರಮವಾಗಿ ಬೆಂಗಳೂರಿನ ಸಂಪಿಗೆಹಳ್ಳಿ ವ್ಯಾಪ್ತಿಯಲ್ಲಿ ವಾಸವಾಗಿದ್ದ. ಖಚಿತ ಮಾಹಿತಿ ಮೇರೆಗೆ ಈತನ ಮನೆ ಮೇಲೆ ದಾಳಿ ನಡೆಸಿ 65 ಗ್ರಾಂ ಕೋಕೇನ್, 50 ಎಕ್ಸಟೆಸಿ ಮಾತ್ರೆಗಳು, 56 ಎಲ್‌ ಎಸ್ ಡಿ ಸ್ಟ್ರಿಪ್ಸ್ ಪತ್ತೆಯಾಗಿದೆ.

      ಈತ ತನ್ನ ಸಂಪರ್ಕದಲ್ಲಿರುವ ವಿದ್ಯಾರ್ಥಿಗಳಿಗೆ ಹಾಗೂ ಶ್ರೀಮಂತ ಮನೆತನದ ಮಕ್ಕಳ ಪಾರ್ಟಿಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+