• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ವಿಟರ್‌ನಲ್ಲಿ ಚುನಾವಣಾ ಕಾವು ಹೆಚ್ಚಿಸಿದ ಇಬ್ಬರು ಗೌಡರು!

|
   Lok Sabha Elections 2019 : ಟ್ವಿಟರ್‍ನಲ್ಲಿ ಶುರುವಾಯ್ತು ಚುನಾವಣಾ ಕಾವು

   ಬೆಂಗಳೂರು, ಏಪ್ರಿಲ್ 11 : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ಟ್ವಿಟರ್‌ನಲ್ಲಿ ಮಾತಿನ ಸಮರ ನಡೆಯುತ್ತಿದೆ. ಏಪ್ರಿಲ್ 18ರಂದು ಬೆಂಗಳೂರು ಉತ್ತರ ಕ್ಷೇತ್ರದ ಚುನಾವಣೆ ನಡೆಯಲಿದೆ.

   ಡಿ.ವಿ.ಸದಾನಂದ ಗೌಡ ಮತ್ತು ಕೃಷ್ಣ ಬೈರೇಗೌಡ ಅವರು ಟ್ವೀಟ್‌ಗಳನ್ನು ಮಾಡುವ ಮೂಲಕ ಚುನಾವಣಾ ಕಾವನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿಸಿದ್ದಾರೆ. ಡಿ.ವಿ.ಸದಾನಂದ ಗೌಡರು ಚರ್ಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಳೆದು ತಂದಿದ್ದಾರೆ.

   ಚುನಾವಣಾ ಚಿತ್ರಣ : ಬೆಂಗಳೂರು ಉತ್ತರದಲ್ಲಿ ಯಾವ ಗೌಡರಿಗೆ ಗೆಲುವು?

   'ಮಾನ್ಯ ಸಿದ್ದರಾಮಯ್ಯನವರೇ ನಿಮ್ಮ ಸಾಂದರ್ಭಿಕ ಅಭ್ಯರ್ಥಿ ಕೇಳಿದ ಪ್ರಶ್ನೆಗೆ ನಾನು ಉತ್ತರ ಕೊಟ್ಟರೆ ಅವರು 'ಉತ್ತರ' ಬಿಟ್ಟು ಹೋಗುವ ಸ್ಥಿತಿಯಲ್ಲಿ ಇದ್ದಾರೆ. ನಿಮ್ಮ ಮುಂದಿನ 'ಉತ್ತರ' ಪ್ರವಾಸ ಯಾವಾಗ?' ಎಂದು ಡಿ.ವಿ.ಸದಾನಂದ ಗೌಡರು ಪ್ರಶ್ನೆ ಮಾಡಿದ್ದಾರೆ.

   ವಿಳಾಸದ ವಿಚಾರದಲ್ಲಿ ಸಿದ್ದರಾಮಯ್ಯ, ಡಿವಿಎಸ್ ನಡುವೆ ಕಿತ್ತಾಟ!

   'ತಾವು ಚರ್ಚೆಗೆ ಗೈರಾದಿರಿ. ಕಳೆದ ಐದು ವರ್ಷಗಳಿಂದ ತಾವು ಕ್ಷೇತ್ರದಿಂದ ಗೈರಾದದ್ದು ಗೊತ್ತಿರುವಂತದ್ದೇ, ಆದರೆ ತಾವು ಇಂದು ಚರ್ಚೆಗಾದರೂ ಬರಬಹುದು ಎಂದು ನಿರೀಕ್ಷಿಸಿದ್ದೆ' ಎಂದು ಕೃಷ್ಣ ಬೈರೇಗೌಡ ಅವರು ಸದಾನಂದ ಗೌಡರಿಗೆ ತಿರುಗೇಟು ನೀಡಿದ್ದಾರೆ....

   ಬೆಂಗಳೂರು ಉತ್ತರ ಚುನಾವಣಾ ಪುಟ

   ಸದಾನಂದ ಗೌಡರಿಗೆ ಟಾಂಗ್

   ಐದು ವರ್ಷಗಳಿಂದ ತಾವು ಕ್ಷೇತ್ರದಿಂದ ಗೈರಾದದ್ದು ಗೊತ್ತಿರುವಂತದ್ದೇ, ಆದರೆ ತಾವು ಇಂದು ಚರ್ಚೆಗಾದರೂ ಬರಬಹುದು ಎಂದು ನಿರೀಕ್ಷಿಸಿದ್ದೆ ಎಂದು ಕೃಷ್ಣ ಬೈರೇಗೌಡ ಟ್ವೀಟ್ ಮಾಡಿದ್ದಾರೆ.

   ತಿರುಗೇಟು ಕೊಟ್ಟ ಡಿವಿಎಸ್

   ಮಾನ್ಯ ಕೃಷ್ಣ ಬೈರೇ ಗೌಡರೇ ಅದ್ಯಾಕೆ ಮತ್ತೆ ತಪ್ಪು ಮಾಹಿತಿ ನೀಡ್ತೀರಾ ? ಇದು ನಿಮ್ಮ ಜಾಯಮಾನವೋ ? ಅಥವಾ ಚುನಾವಣಾ ಗಿಮಿಕೊ? ನಾವು ಮುಖಾಮುಖಿಯಾಗಿದ್ದು ಮರೆತು ಹೋಯಿತೇ ಎಂದು ಸದಾನಂದ ಗೌಡರು ಪ್ರಶ್ನೆ ಮಾಡಿದ್ದಾರೆ.

   ನನಗೆ ನಿರಾಸೆ ಉಂಟು ಮಾಡಿದೆ

   ಬಿ ಪ್ಯಾಕ್‌ನಂತಹ ಪ್ರತಿಷ್ಠಿತ ಸಂಸ್ಥೆ ಕ್ಷೇತ್ರಕ್ಕೆ ಸಂಬಂದಿಸಿದ ವಿಚಾರಗಳನ್ನು ಚರ್ಚಿಸಲು ವೇದಿಕೆಯನ್ನು ನಿರ್ಮಿಸಿದಾಗ ತಾವು ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳನ್ನು ತಿಳಿಸಲು ಬರುತ್ತಿರಿ ಎಂದು ಭಾವಿಸಿದ್ದೆ ಎಂದು ಕೃಷ್ಣ ಬೈರೇಗೌಡ ಟ್ವೀಟ್ ಮಾಡಿದ್ದಾರೆ.

   ಸತ್ಯ ಒಪ್ಪಿಕೊಂಡಿದ್ದಕ್ಕೆ ಸಂತಸ

   ಒಂದು ಸತ್ಯ ಒಪ್ಪಿಕೊಂಡಿರಿ ಸಂತೋಷವಾಯಿತು. ಭೇಟಿನೇ ಆಗಿಲ್ಲ ಚರ್ಚೆನೇ ಆಗಿಲ್ಲ ಅನ್ನೋ ಅಪವಾದ ಸುಳ್ಳು ಅನ್ನೋದು ಮತದಾರರಿಗೆ ಗೊತ್ತಾಯಿತು ಎಂದು ಸದಾನಂದ ಗೌಡರು ಟ್ವೀಟ್ ಮಾಡಿದ್ದಾರೆ

   ಸಿದ್ದರಾಮಯ್ಯಗೆ ಪ್ರಶ್ನೆ

   ಚರ್ಚೆಗೆ ಸಿದ್ದರಾಮಯ್ಯ ಅವರನ್ನು ಎಳೆದು ತರಲಾಗಿದೆ. 'ಮಾನ್ಯ ಸಿದ್ದರಾಮಯ್ಯನವರೇ ನಿಮ್ಮ ಸಾಂದರ್ಭಿಕ ಅಭ್ಯರ್ಥಿ ಕೇಳಿದ ಪ್ರಶ್ನೆಗೆ ನಾನು ಉತ್ತರ ಕೊಟ್ಟರೆ ಅವರು 'ಉತ್ತರ' ಬಿಟ್ಟು ಹೋಗುವ ಸ್ಥಿತಿಯಲ್ಲಿ ಇದ್ದಾರೆ. ನಿಮ್ಮ ಮುಂದಿನ 'ಉತ್ತರ' ಪ್ರವಾಸ ಯಾವಾಗ?' ಎಂದು ಡಿ.ವಿ.ಸದಾನಂದ ಗೌಡರು ಪ್ರಶ್ನೆ ಮಾಡಿದ್ದಾರೆ.

   English summary
   Twitter war between Bangalore North lok sabha seat candidates D.V.Sadananda Gowda and Kishna Byre Gowda. Election will be held on April 18, 2019.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X