Kidney for sale: ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಭದ್ರತಾ ಠೇವಣಿಯಿಡಲು ಕಿಡ್ನಿ ಮಾರಲು ಮುಂದಾದ ಯುವಕ?
ಈ ಪೋಸ್ಟರ್ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಡಿಗೆ ಮತ್ತು ಭದ್ರತಾ ಠೇವಣಿಗಳ ಕುರಿತು ಚರ್ಚೆಯನ್ನು ಹೆಚ್ಚಿಸಿದೆ.
ಬೆಂಗಳೂರು, ಫೆಬ್ರವರಿ. 27: ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಹಿಡಿಯುವುದು ತುಂಬಾಕಷ್ಟ. ಅದರ್ಲೂ ಕೊರೊನಾ ನಂತರ ಬಾಡಿಗೆ ಮನೆಗಳನ್ನು ವಿಚಾರಿಸುವುದು ಕೂಡ ಬಹಳ ಕಷ್ಟ ಎಂಬಂತಿದೆ. ಇಂತಹ ಸ್ಥಿತಿಯಲ್ಲಿ ಬಾಡಿಗೆ ಮನೆಯ ಭದ್ರತಾ ಠೇವಣಿಗಾಗಿ ಕಿಡ್ನಿ ಮಾರಾಟ ಮಾಡಬೇಕೆ ಎಂಬ ಪ್ರಶ್ನೆಗಳು ಎದುರಾಗಿವೆ.
Does this qualify for @peakbengaluru? pic.twitter.com/GGuMZXy2iH
— Ramyakh (@ramyakh) February 25, 2023
ಹೌದು, ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ಫೋಟೋವೊಂದು ಸಿಲಿಕಾನ್ ಸಿಟಿಯ ಕಠೋರ ಸತ್ಯವನ್ನು ವ್ಯಂಗ್ಯವಾಗಿ ಜನರ ಎದುರಿಗಿಟ್ಟಿದೆ. ಬೆಂಗಳೂರು ಸೇರಿದಂತೆ ಮುಂಬೈ, ದೆಹಲಿಯಂತಹ ಮೆಟ್ರೋ ನಗರಗಳಲ್ಲಿ ಯಾರಾದರೂ ಆಸ್ತಿಯನ್ನು ಬಾಡಿಗೆಗೆ ತೆಗೆದುಕೊಳ್ಳಲು ಮುಂದಾದರೆ ಅವರು ಬೃಹತ್ 'ಭದ್ರತಾ ಠೇವಣಿ' ಎಂಬ ಕಠೋರ ವಾಸ್ತವವನ್ನು ಎದುರಿಸುತ್ತಾರೆ. ನಗರದಲ್ಲಿಯೂ ಅದೇ ಸ್ಥಿತಿ ಮುಂದುವರೆದಿದೆ.

ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಅಂತಹ ಒಂದು ಫೋಸ್ಟ್ ಹರಿದಾಡುತ್ತಿದ್ದು, ಭದ್ರತಾ ಠೇವಣಿಗೆ ಪಾವತಿಸಲು ಮೂತ್ರಪಿಂಡವನ್ನು ಮಾರಾಟ ಮಾಡಲು ಹಾಕಿರುವ ಮುದ್ರಣ ಜಾಹೀರಾತನ್ನು ನೋಡಬಹುದು. ಕಂಬಕ್ಕೆ ಅಂಟಿಸಲಾಗಿರುವ ಪೋಸ್ಟರ್‌ನಲ್ಲಿ, "ಎಡ ಕಿಡ್ನಿ ಮಾರಾಟದಲ್ಲಿದೆ. ಭೂಮಾಲೀಕರು ಕೇಳುತ್ತಿರುವ ಭದ್ರತಾ ಠೇವಣಿ ಮೊತ್ತಕ್ಕೆ ಹಣ ಬೇಕು" ಎಂದು ಬರೆಯಲಾಗಿದೆ.
ಮುಂದುವರಿದು, ತಾವು ತಮಾಷೆ ಮಾಡುತ್ತಿರುವುದಾಗಿಯೂ, ಬೆಂಗಳೂರಿನ ಇಂದಿರಾನಗರ ಪ್ರದೇಶದಲ್ಲಿ ಬಾಡಿಗೆಗೆ ಮನೆಯನ್ನು ಹುಡುಕುತ್ತಿರುವುದಾಗಿಯೂ ಹೇಳಿದ್ದಾರೆ. "ತಮಾಷೆ, ಆದರೆ ನನಗೆ ಇಂದಿರಾನಗರದಲ್ಲಿ ಮನೆ ಬೇಕು. ಪ್ರೊಫೈಲ್‌ಗಾಗಿ ಕೋಡ್ ಅನ್ನು ಸ್ಕ್ಯಾನ್ ಮಾಡಿ" ಎಂದು ಹೇಳಿ ಪೋಸ್ಟರ್‌ನಲ್ಲಿ ಕ್ಯೂಆರ್ ಕೋಡ್ ಅನ್ನು ಸಹ ನೀಡಲಾಗಿದೆ. ಆದರೆ, ಇದು ವಾಸ್ತವ ಎಂದು ಹಲವು ಮಂದಿ ನೆಟ್ಟಿಗರು ಹೇಳಿದ್ದಾರೆ.
ಈ ಪೋಸ್ಟರ್ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಡಿಗೆ ಮತ್ತು ಠೇವಣಿಗಳ ಕುರಿತು ಚರ್ಚೆಯನ್ನು ಹೆಚ್ಚಿಸಿದೆ. ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಒಬ್ಬರು, "ಈ ದಿನಗಳಲ್ಲಿ ಠೇವಣಿ ಮಾಡಲು ಮೂತ್ರಪಿಂಡವು ಸಾಕಾಗುತ್ತದೆಯೇ ಎಂದು ನನಗೆ ಅನುಮಾನವಿದೆ" ಎಂದು ಬರೆದಿದ್ದಾರೆ. ಈ ಪೋಸ್ಟ್ ನಗರಗಳಾದ್ಯಂತ ಹೆಚ್ಚುತ್ತಿರುವ ಬಾಡಿಗೆಯ ಚರ್ಚೆಗಳನ್ನು ಮತ್ತೊಮ್ಮೆ ಎದುರಿಗೆ ತಂದಿದೆ. ರಿಯಲ್ ಎಸ್ಟೇಟ್ ಸಲಹೆಗಾರ ಅನಾರಾಕ್ ಪ್ರಕಾರ, ಏಳು ಪ್ರಮುಖ ನಗರಗಳಲ್ಲಿ 2019 ಮತ್ತು 2022 ರ ನಡುವೆ ಸ್ಟ್ಯಾಂಡರ್ಡ್ 1,000 ಚದರ ಅಡಿ ವಿಸ್ತೀರ್ಣದ ಎರಡು ಬೆಡ್‌ರೂಮ್ ಫ್ಲಾಟ್‌ಗಳ ಸರಾಸರಿ ಮಾಸಿಕ ಬಾಡಿಗೆಗಳು 23% ರಷ್ಟು ಹೆಚ್ಚಾಗಿದೆ.












Click it and Unblock the Notifications