ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮಾಜಿಕ ಮಾಧ್ಯಮಗಳಲ್ಲೂ ರವಿ ಬೆಳಗೆರೆ ಬಂಧನ ಪ್ರತಿಧ್ವನಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 09: ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆಯವರನ್ನು ಸಿಸಿಬಿ ಪೊಲೀಸರು ನಿನ್ನೆ ಬಂಧಿಸಿರುವ ಪ್ರಕರಣ ಇಂದೂ ಬಿಸಿ ಬಿಸಿ ಸುದ್ದಿಯಾಗಿ ಚರ್ಚೆಯಾಗುತ್ತಲೇ ಇದೆ.

ಸುನಿಲ್ ಹತ್ಯೆಗೆ ಸುಪಾರಿ ತಪ್ಪೊಪ್ಪಿಗೆ ನೀಡಿದ ರವಿ ಬೆಳಗರೆ?ಸುನಿಲ್ ಹತ್ಯೆಗೆ ಸುಪಾರಿ ತಪ್ಪೊಪ್ಪಿಗೆ ನೀಡಿದ ರವಿ ಬೆಳಗರೆ?

ಪ್ರಕರಣದ ಕುರಿತು ಊಹಾಪೋಹಗಳನ್ನು ಬಿಟ್ಟರೆ, ಯಾವುದೇ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ವಿಚಾರಣೆಯ ನಂತರವೇ ಸತ್ಯ ಹೊರಬೀಳಲಿದೆ.

ಅನಾರೋಗ್ಯದ ಕಾರಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿ ಬೆಳಗೆರೆಯವರನ್ನು ನಾಲ್ಕು ದಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.

ಪತ್ರಕರ್ತ ರವಿ ಬೆಳಗೆರೆ ನಾಲ್ಕು ದಿನ ಸಿಸಿಬಿ ಪೊಲೀಸರ ವಶಕ್ಕೆಪತ್ರಕರ್ತ ರವಿ ಬೆಳಗೆರೆ ನಾಲ್ಕು ದಿನ ಸಿಸಿಬಿ ಪೊಲೀಸರ ವಶಕ್ಕೆ

ಈ ಕುರಿತು ಕೆಲವು ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗಿದೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲೂ ಇದು ವ್ಯಾಪಕ ಚರ್ಚೆಯಾಗುತ್ತಿದೆ. ಬೆಳೆಗೆರೆ ಅಭಿಮಾನಿಗಳಿಗೆ ಈ ಆಘಾತದ ಸುದ್ದಿ ನುಂಗಲಾರದ ಬಿಸಿತುಪ್ಪ ಅನ್ನಿಸಿದೆ.

ಪ್ರಶಸ್ತಿ ಹಿಂದಿರುಗಿಸಿದವರೆಲ್ಲ ಎಲ್ಲಿ ಹೋದರು?!

ಅಸಹಿಷ್ಣುತೆಯ ಹೆಸರಿನಲ್ಲಿ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ ಕೆಲವು ಪತ್ರಕರ್ತರೆಲ್ಲ ಈಗ ಎಲ್ಲಿ ಹೋದರು. ತಮ್ಮ ಸಹೋದ್ಯೋಗಿಯ ಮೆಲೆ ಇಂಥ ಆರೋಪ ಬಂದಿರುವ ಬಗ್ಗೆ ಅವರು ಏನು ಪ್ರತಿಕ್ರಿಯೆ ನೀಡುತ್ತಾರೆ?! ಎಂದು ಶೀಥಲ್ ಆರ್ ಸಂಜಯ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಅವರವರ ಕರ್ಮದ ಫಲ ಅನುಭವಿಸಲೇಬೇಕು!

ಗೌರಿ ಲಂಕೇಶ್ ಹತ್ಯೆಯ ಸಮಯದಲ್ಲಿ ರವಿ ಬೆಳಗೆರೆಯವರು ಉಪದೇಶ ನೀಡುತ್ತಿದ್ದುದನ್ನು ನಾನು ನೋಡಿದ್ದೆ. ಆದರೆ ಈಗ ಅವರೇ ತಮ್ಮ ಸಹೋದ್ಯೋಗಿಯೊಬ್ಬರ ಹತ್ಯೆಗೆ ಸುಪಾರಿ ಕೊಟ್ಟಿದ್ದಾರೆಂಬುದು ತಿಳಿಯಿತು. ಏನೇ ಆದರೂ ಯಾವತ್ತೂ ಗೆಲ್ಲುವುದು ಕರ್ಮವೇ! ಅವರವರ ಕರ್ಮದ ಫಲ ಅವರವರೇ ಅನುಭವಿಸಬೇಕು! ಎಂದು ಗುರುಪ್ರಸಾದ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬರ ಬಗ್ಗೆ ಬರೆಯುತ್ತಾರೆ!

ಮತ್ತೊಬ್ಬರ ಬಗ್ಗೆ ಬರೆಯುವ, ವಿಮರ್ಶೆ ಮಾಡುವ ಪತ್ರಕರ್ತರು ತಾವೇ ಸುಪಾರಿ ಕಿಲ್ಲರ್ ಗಳಾಗುತ್ತಿದ್ದಾರೆ. ಇಂಥವರನ್ನು ಜೈಲಿಗೆ ಹಾಕಲೇ ಬೇಕು. ನಿಜಕ್ಕೂ ಇಂಥ ನಡೆಗಳು ಪತ್ರಕರ್ತರು ನಾಚಿಕೆ ಪಡುವಂಥ ವಿಷಯ ಎಂದು ಕಿಶನ್ ಚಡಗ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮೋದಿ ಕಾರಣ ಎನ್ನಬೇಡಿ!

ಟೌನ್ ಹಾಲ್ ಸಹ ಈ ಲಿಬ್ರಲ್ ಗಳ ಕಳ್ಳ ಹೋರಾಟಗಳನ್ನು ನೋಡಿ ನೋಡಿ ವಾಕರಿಸಿಕೊಂಡಿದೆ,ಅವತ್ತು ಲಬ್ಬೊ ಅಂತ ಬಾಯಿ ಬಡಿದುಕೊಂಡ ಸರ್ವೋತ್ತಮರೆಲ್ಲ ಎಲ್ಲಿದಿರಪ್ಪ, ಇದಕ್ಕೂ ಮತ್ತೆ ಮೋದಿ ಕಾರಣ ಅಂಥ ಹೇಳಿ ಟೌನ್ ಹಾಲ್ ಕಡೆ ಓಡಿ ಹೋಗಿರ ಬಹುದೇನೋ ಎಂದು ರವಿ ಕೀರ್ತಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ರೈ ಎಲ್ಲಿದ್ದೀರಾ?

ಪ್ರಕಾಶ್ ರೈ ಅವರೇ ಈಗ ಎಲ್ಲಿದ್ದೀರಾ? ಈ ಪ್ರಶ್ನೆ ಮಾಡುವುದಕ್ಕೆ ಬರುವುದಿಲ್ಲವೇ ಎಂದು ವೆಂಕಟರಮಣನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

English summary
Twitterians react for Journalist Ravi Belagere who has arrested by CCB police on allegation of attempt to killing another journalist through supari killers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X