ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮ್ಯಾ ಫೇಕ್ ಅಕೌಂಟ್ ಪಾಠಕ್ಕೆ ಸಾಮಾಜಿಕ ಮಾಧ್ಯಮ ಏನನ್ನುತ್ತೆ?

|
Google Oneindia Kannada News

Recommended Video

ರಮ್ಯಾರ ನಕಲಿ ಅಕೌಂಟ್ ಬಗೆಗಿನ ಪಾಠಕ್ಕೆ ಟ್ವಿಟ್ಟರ್ ನಲ್ಲಿ ಛೀಮಾರಿ | Oneindia Kannada

ಬೆಂಗಳೂರು, ಫೆಬ್ರವರಿ 07: 'ನಕಲಿ ಖಾತೆ ಹೊಂದುವುದು ತಪ್ಪಲ್ಲವೇ?' ಬೇನಾಮಿ ವ್ಯಕ್ತಿಯೊಬ್ಬ ಕೇಳಿದ ಪ್ರಶ್ನೆಗೆ, 'ಅದರಲ್ಲೇನಿದೆ ತಪ್ಪು? ಇನ್ಫ್ಯಾಕ್ಟ್ ನಂದೂ ಒಂದು ನಕಲಿ ಖಾತೆ ಇದೆ' ಎಂದು ರಾಜಾರೋಷವಾಗಿ ಹೇಳಿದ್ದು ಬೇರೆ ಯಾರೂ ಅಲ್ಲ ರಮ್ಯ! ಹೌದು, ರಮ್ಯ ಅಲಿಯಾಸ್ ದಿವ್ಯಸ್ಪಂದನ.

ನಕಲಿ ಖಾತೆ ತೆರೆಯೋದು ಹೇಗೆ? ರಮ್ಯಾ ಮೇಡಂ ಪಾಠ ಕೇಳಿ..!ನಕಲಿ ಖಾತೆ ತೆರೆಯೋದು ಹೇಗೆ? ರಮ್ಯಾ ಮೇಡಂ ಪಾಠ ಕೇಳಿ..!

ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಅವರು ಕೆಲವು ಕಾರ್ಯಕರ್ತರಿಗೆ, ಅನುಯಾಯಿಗಳಿಗೆ ನಕಲಿ ಖಾತೆ ತಯಾರಿಸುವ ಕುರಿತು ಪಾಠ ಮಾಡುತ್ತಿರುವ ವಿಡಿಯೋವೊಂದು ಇದೀಗ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದ್ದು ಸಾಕಷ್ಟು ವಿವಾದ ಸೃಷ್ಟಿಸಿದೆ.

"ನೀವು ಇವತ್ತು ಒಬ್ಬೊಬ್ಬರೂ 3 ಖಾತೆ ತಯಾರು ಮಾಡಿ" ಎಂದು ರಮ್ಯಾ ಅವರು ಪಾಠ ಮಾಡುತ್ತಿರುವ ದೃಶ್ಯವೂ ಸೆರೆಯಾಗಿದೆ. ಈ ವಿಡಿಯೋಕ್ಕೆ ಸಾಕಷ್ಟು ಜನ ಕಮೆಂಟ್ ಮಾಡಿದ್ದು, ರಮ್ಯಾ ಅವರ ಜನ್ಮ ಜಾಲಾಡಿದ್ದಾರೆ!

ಇದರಲ್ಲಿ ತಪ್ಪೇನಿದೆ?

ಅವರು ಹೇಳುತ್ತಿರುವುದು ನಕಲಿ ಖಾತೆಯಲ್ಲ, ಒಬ್ಬೊಬ್ಬರೂ ಒಂದಕ್ಕಿಂತ ಹೆಚ್ಚು ಖಾತೆಯನ್ನು ತೆರೆಯಿರಿ ಅಂತ. ಅದರಲ್ಲಿ ತಪ್ಪೇನಿದೆ? ಅವರು ಹೇಳಿದ್ದನ್ನು ನಕಲಿ ಖಾತೆ ಎಂದು ನೀವೇ ಹಾದಿತಪ್ಪಿಸುತ್ತಿದ್ದೀರಾ ಎಂದಜು ರಮ್ಯಾ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ ಅರುಣ್ ಕುಮಾರ್ ಎಂಬುವವರು.

ರಮ್ಯಾ ಟ್ವೀಟ್ ಗೆ ಮೌನ ಮುರಿದು ಉತ್ತರಿಸಿದ ರಾಜೀವ್ ಚಂದ್ರಶೇಖರ್ರಮ್ಯಾ ಟ್ವೀಟ್ ಗೆ ಮೌನ ಮುರಿದು ಉತ್ತರಿಸಿದ ರಾಜೀವ್ ಚಂದ್ರಶೇಖರ್

ಹೌದು ತಪ್ಪೇನು..?!

ಹೌದು, ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದರೆ ತಪ್ಪೇನು? ಬಹುಶಃ ಇದಕ್ಕೇ ಇರಬೇಕು ಇತ್ತೀಚೆಗೆ ರಾಹುಲ್ ಗಾಂಧಿ ಅವರ ಟ್ವೀಟ್ ಗಳಿಗೆ ಸಾಕಷ್ಟು ಲೈಕ್ಸ್ ಬರುತ್ತಿದ್ದುದು! ಸದ್ಯ ಈಗ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರ! ಎಂದು ಲೇವಡಿ ಮಾಡಿದ್ದಾರೆ ಪ್ರತೀಕ್ ಎಂಬುವವರು.

ಸ್ವಿಸ್ ಬ್ಯಾಕಿನಲ್ಲೂ ನಕಲಿ ಖಾತೆಯಿಲ್ಲವೇ?

ಕಳೆದ 60 ವರ್ಷಗಳಿಂದ ನಕಲಿ ಖಾತೆ ಸೃಷ್ಟಿಸುವಲ್ಲಿ ಪರಿಣಿತಿ ಪಡೆದ ಪಕ್ಷದಿಂದಲೇ ತಾನೇ ಆಕೆ ಬಂದಿದ್ದು?! ಅವರೆಲ್ಲ ಸ್ವಿಸ್ ಬ್ಯಾಂಕಿನಲ್ಲಿ ನಕಲಿ ಖಾತೆ ಹೊಂದುವುದು ಹೇಗೆ ಎಂಬ ಬಗ್ಗೆ ಪರಿಣಿತಿ ಪಡೆದವರು ಎಂದು ಮಹರ್ಷಿ ಮಗಂತಿ ಎಮಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ರಮ್ಯಾ ಕರ್ನಾಟಕದಲ್ಲೂ ಟ್ವಿಟ್ಟರ್ ವಾರ ಆರಂಭಿಸುತ್ತಾರೆ

ರಮ್ಯಾ ಅವರ ಟ್ವಿಟ್ಟರ್ ಪಾಠ ಕೇಳಿದ ನಂತರ ನನಗೆ ಅನ್ನಿಸುತ್ತಿದೆ, ಅವರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಖಂಡಿತ ಟ್ಚಿಟ್ಟರ್ ವಾರ್ ಶುರುಮಾಡುತ್ತಾರೆ. ಅವರು ಸೃಷ್ಟಿಸುವ ವಿವಾದಗಳು ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಟ್ವೀಟ್ ಮಾಡಿದ್ದಾರೆ ಹಾಸನ್ ಸ್ವಾಮಿ.

ಪ್ರಬುದ್ಧತೆಯ ಕೊರತೆ!

ದಿವ್ಯಸ್ಪಂದನ ಅವರು ಪದೇ ಪದೇ ಇಂಥ ಬಾಲಿಶ ಕೆಲಸ ಮಾಡುತ್ತಿದ್ದರೂ ಯಾಕಿನ್ನೂ ಅವರು ಆ ಸ್ಥಾನದಲ್ಲೇ ಇದ್ದಾರೆ? ಅವರಿಗೆ ನಿಜಕ್ಕೂ ಪ್ರಬುದ್ಧತೆಯ ಕೊರತೆಯಿದೆ ಎಂದಿದ್ದಾರೆ ರವಿಪ್ರಸಾದ್.

English summary
Congress Social media chief Divya Spandana alias Ramya in a video teaching people on how to create fake accounts in social media. And she also said, there is nothing wrong in having many accounts. Here are twitter reactions on her video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X