• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ದಂಪತಿ ಬರ್ಬರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌

|

ಬೆಂಗಳೂರು, ಮೇ 11:ನಗರದಲ್ಲಿ ಭಾನುವಾರ ರಾತ್ರಿ ನಡೆದ ದಂಪತಿ ಕೊಲೆಯಲ್ಲಿ ಮಗನ ಪಾತ್ರವಿಲ್ಲ ಎಂಬುದು ತಿಳಿದುಬಂದಿದೆ.

   3 ಸಾವಿರ ಆಹಾರ ಕಿಟ್ ಗಳನ್ನು ವಿತರಿಸಿದ ಜನಸ್ನೇಹಿ ಕಾರ್ಪೊರೇಟರ್ ಕೆ. ನಾಗಭೂಷಣ್ | Oneindia Kannada

   ಬೆಂಗಳೂರಿನ ಜೆಪಿ ನಗರದ ಆರ್‌ಬಿಐ ಲೇಔಟ್‌ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಗೋವಿಂದಪ್ಪ(65), ಶಾಂತಮ್ಮ(55) ಕೊಲೆಯಾದ ದಂಪತಿ. ಇವರ ಕೊಲೆಯ ಹಿಂದೆ ಮಗನ ಕೈವಾಡವಿತ್ತು ಎಂದು ಶಂಕಿಸಲಾಗಿತ್ತು.

   ಬೆಂಗಳೂರಲ್ಲಿ ಟೆಕ್ಕಿಯಿಂದ ತಂದೆ-ತಾಯಿ ಭೀಕರ ಹತ್ಯೆ?

   ಆದರೆ ಮಗ ಮನೆಗೆ ಬರುವುದರ ಒಳಗೆ ದುರ್ಘಟನೆ ನಡೆದೇ ಹೋಗಿತ್ತು ಎಂದು ದೂರಿನಲ್ಲಿ ಮಗ ಬರೆದಿದ್ದ.ಮಗ ನವೀನ್ 2008ರಲ್ಲಿ ಮದುವೆಯಾಗಿದ್ದ, ಅವರ ವೈವಾಹಿಕ ಸಂಬಂಧ ಅಷ್ಟು ಚೆನ್ನಾಗಿರಲಿಲ್ಲ. ಆಕೆ ತನ್ನ ತವರು ಮನೆಯಲ್ಲಿದ್ದಳು. ಆಕೆ ತವರಿಗೆ ಹೋಗಿದ್ದು ಆಕೆ ಸೋದರ ರಾಕೇಶ್‌ಗೆ ಇಷ್ಟವಿರಲಿಲ್ಲ.

   ಆಕೆಯನ್ನು ಮನೆಗೆ ಕಳುಹಿಸಿಕೊಡುವಂತೆ ನವೀನ್ ಕಾಲ್ ಮಾಡಿದ್ದ ಆಗ ರಾಕೇಶ್ ನಾನೇ ನಿಮ್ಮ ಮನೆಗೆ ಬಂದು ಆಕೆಯನ್ನು ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದ. ರಾತ್ರಿ 8.45ರವೇಳೆಗೆ ಮನೆಗೆ ಬಂದಿರುವ ರಾಕೇಶ್ ನವೀನ್ ತಂದೆ-ತಾಯಿಯ ಕೊಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿತ್ತು.

   ಕೊಲೆ ಮಾಡಿರುವುದು ದಂಪತಿ ಸೊಸೆಯ ಸಹೋದರ ರಾಕೇಶ್ ಎಂದಬುದನ್ನು ಖಚಿತಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಗೋವಿಂದಪ್ಪ ಅವರು ಆರ್ ಬಿಐ ನಿವೃತ್ತ ನೌಕರನಾಗಿದ್ದು, ಮಗ ನವೀನ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾನೆ.

   English summary
   Twist In A retired government employee and his wife were brutally murdered in their South Bengaluru home on Sunday evening. their Daughter in-laws Brother Rakesh Killes Them.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X