ಕುಡಿದು ವಾಹನ ಚಲಾಯಿಸಿದರೆ ಎಂಜಿನ್ ಆಫ್: ಹೊಸ ಆವಿಷ್ಕಾರ

ಬೆಂಗಳೂರು, ಜನವರಿ 6: ಕುಡಿದು ವಾಹನ ಚಲಾಯಿಸಿದರೆ ಎಂಜಿನ್ ಆಫ್ ಆಗಲಿದೆ. ಹೀಗೊಂದು ಆವಿಷ್ಕಾರವನ್ನು ವಿಜ್ಞಾನ ಕಾಂಗ್ರೆಸ್‌ನಲ್ಲಿ ಪ್ರದರ್ಶಿಸಲಾಗಿದೆ.

ಹವಾನಿಯಂತ್ರಿತ ವಾಹನದ ಚಾಲಕ ಕುಡಿದು ವಾಹನ ಚಾಲನೆ ಮಾಡಿದರೆ ವಾಹನದ ಎಂಜಿನ್ ಏಕಾಏಕಿ ಆಫ್ ಆಗಿ ಸೈರನ್ ಕೂಡ ಬಾರಿಸುತ್ತದೆ. ವಾಹನದಲ್ಲಿ ಬೆಂಕಿ ಕಾಣಿಸಿಕೊಂಡರೆ ಏಕಾಏಕಿ ಆಫ್ ಆಗಿ ಸೈರನ್ ಸಹ ಬಾರಿಸುತ್ತದೆ.

ವಾಹನದಲ್ಲಿ ವೆಂಕಿ ಕಾಣಿಸಿಕೊಂಡರೆ ದ್ವಾರಗಳು ಸ್ವಯಂ ಚಾಲಿತವಾಗಿ ತೆರೆದುಕೊಳ್ಳಲಿವೆ. ಪೊಲೀಸರು , ಕಾರ್ಮಿಕರು ರೈತರು ಸವಾರರು ಧೂಳು ಹಾಗೂ ಹೊಗೆಯಿಂದ ಅನುಭವಿಸುವ ಕಿರಿಕಿರಿ ತಪ್ಪಿಸಲು ಮ್ಯಾನ್ ಫ್ರೆಂಡ್ಲಿ ಮಲ್ಪಿ ಹೆಲ್ಮೆಟ್ ಕೂಡ ಕಂಡುಹಿಡಿದಿದ್ದಾರೆ. ತೆಲಂಗಾಣದ ಚಂದನಪುರದ ಸರ್ಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಡಿ ಹರ್ಷಿತಾ ಮ್ಯಾನ್ ಫ್ರೆಂಡ್ಲಿ ಹೆಲ್ಮೆಟ್ ಆವಿಷ್ಕರಿಸಿ ಎಲ್ಲರ ಗಮನ ಸೆಳೆದಿದ್ದಾಳೆ.

Turn The Engine Off If Drunk

ತುಮಕೂರು ಜಿಲ್ಲೆಯ ಹುಳಿಯಾರು ಪಟ್ಟಣದ ವಿದ್ಯಾವಾರಿಧಿ ಇಂಟರ್‌ ನ್ಯಾಷನಲ್ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಆರ್‌ಕೆ ದರ್ಶಿನಿ, ಥರ್ಮಲ್ ಸೆನ್ಸರ್ ಮತ್ತು ಆಲ್ಕೋಹಾಲ್ ಸೆನ್ಸರ್ ಆಧಾರಿತ ತಂತ್ರಜ್ಞಾನ ಆವಿಷ್ಕರಿಸಿ ಸಾಧನೆ ಮಾಡಿದ್ದಾರೆ.

ಹವಾನಿಯಂತ್ರಿತ ವಾಹನಗಳಿಗೆ ಈ ಸೆನ್ಸರ್ ಅಳವಡಿಕೆ ಮಾಡಬಹುದು. ಚಾಲಕ ಪಾನಮತ್ತನಾಗಿ ವಾಹನ ಚಲಾಯಿಸಲು ಮುಂದಾದರೆ ವಾಹನದ ಎಂಜಿನ್ ಆಫ್ ಆಗುತ್ತದೆ. ತಕ್ಷಣ ಕೆಂಪು ದೀಪ್ ಆನ್ ಆಗಿ ವಾಹನ ಸೈರನ್ ಕೂಡ ಬಾರಿಸುತ್ತದೆ. ಈ ಮೂಲಕ ಪ್ರಯಾಣಿಕರನ್ನು ಎಚ್ಚರಗೊಳಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+