ಕ್ರೀಡಾಳುಗಳಿಗೆ ವಿಶೇಷ ರೀತಿಯ ಚಿಕಿತ್ಸೆ ನೀಡಿ: ಅಂಜುಬಾಬಿ ಜಾರ್ಜ್ ಮನವಿ
ಬೆಂಗಳೂರು ಮಾರ್ಚ್ 04: ಕ್ರೀಡಾಳುಗಳಿಗೆ ವಿಶೇಷ ರೀತಿಯ ಚಿಕಿತ್ಸೆ ಅಗತ್ಯವಿದ್ದು, ವೈದ್ಯರು ವಿಶೇಷ ರೀತಿಯಲ್ಲಿ ಅವರನ್ನು ನೋಡಿಕೊಳ್ಳಬೇಕು ಎಂದು ಪದ್ಮಶ್ರೀ ಮತ್ತು ಅರ್ಜನ ಪ್ರಶಸ್ತಿ ವಿಜೇತ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಅಭಿಪ್ರಾಯಪಟ್ಟರು.
ಇಂದು ಬೆಂಗಳೂರು ನಗರದಲ್ಲಿ ಟ್ರಸ್ಟ್‌ವೆಲ್ ಆಸ್ಪತ್ರೆಯಲ್ಲಿ ಅಸ್ಥಿ ಮತ್ತು ಮೂಳೆ ಚಿಕಿತ್ಸೆಗೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಟ್ರಸ್ಟ್ ವೆಲ್ ಇನ್ಸಿಟ್ಯೂಟ್ ಫಾರ್ ಮುಸ್ಕಲೋ ಸ್ಕೇಲಿಟಲ್ ಸೈನ್ಸಸ್ (TWIMS) ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿಕಿತ್ಸಾ ಕೇಂದ್ರದ ಉದ್ಘಾಟನೆಯನ್ನು ಎಡಿಜಿಪಿ ಡಾ. ಎಂ.ಎ. ಸಲೀಮ್ - ಐಪಿಎಸ್, ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ವಿಜೇತೆ ಶ್ರೀಮತಿ ಅಂಜು ಬಾಬಿ ಜಾರ್ಜ್ ನಡೆಸಿಕೊಟ್ಟರು.

ನಂತರ ಮಾತನಾಡಿದ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ವಿಜೇತೆ ಅಂಜು ಬಾಬಿ ಜಾರ್ಜ್ ನಾನು ನನ್ನ ಕ್ರೀಡಾ ಜೀವನದ ಪ್ರಮುಖ ಘಟ್ಟದಲ್ಲಿ ಇದ್ದಾಗ ಆದ ಅವಘಡದಿಂದ ಒಂದು ವರ್ಷ ಪರಿತಪಿಸಬೇಕಾಯಿತು. ವೈದ್ಯರು ನಾನು ಮತ್ತೊಮ್ಮೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಒಂದು ವರ್ಷದ ನಂತರ ಛಲ ಬಿಡದೆ ನೋವಿನಲ್ಲೂ ಅಭ್ಯಾಸ ಮುಂದುವರೆಸಿದೆ. ಆ ಸಂಧರ್ಭದಲ್ಲಿ ಸ್ಪೋರ್ಟ್ಸ್ ಇಂಜುರಿ ರಿಹ್ಯಾಬಲಿಟಿ ಮ್ಯಾನೇಜ್‌ಮೆಂಟ್ ಮಾಡುವ ವೈದ್ಯರು ಬೆಂಗಳೂರಿನಲ್ಲಿ ಇರಲಿಲ್ಲ. ಈಗ ಬೆಂಗಳೂರಿನಲ್ಲಿ ಟ್ರಸ್ಟ್‌ವೆಲ್ ನಂತಹ ಆಸ್ಪತ್ರೆಗಳು ಸ್ಪೋರ್ಟ್ಸ್ ಇಂಜರಿ ಮ್ಯಾನೇಜ್‌ಮೆಂಟ್ ಮಾಡುತ್ತಿರುವುದು ಬಹಳ ಸಂತಸದ ವಿಷಯವಾಗಿದೆ. ವೈದ್ಯರುಗಳೂ ಕೂಡಾ ಕ್ರೀಡಾ ಪಟುಗಳನ್ನು ಜನಸಾಮಾನ್ಯರಂತೆ ಚಿಕಿತ್ಸೆ ಮಾಡದೇ ಸ್ವಲ್ಪ ವಿಶೇಷ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಟ್ವಿಮ್ಸ್ ಚಿಕಿತ್ಸಾ ಕೇಂದ್ರದ ನಿರ್ದೇಶಕರಾದ ಡಾ ಚಂದ್ರಶೇಖರ್ ಚಿಕ್ಕಮುನಿಯಪ್ಪ ಮಾತನಾಡಿ, ರೋಗಿಗಳ ಚಿಕಿತ್ಸಾ ಕ್ರಮದಲ್ಲಿ ಹೆಚ್ಚುತ್ತಿರುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಅತ್ಯುತ್ತಮ ಚಿಕಿತ್ಸೆಯನ್ನು ನೀಡಬೇಕು ಎನ್ನುವ ಗುರಿಯನ್ನು ನಾವು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಇಂದು ಪ್ರಾರಂಭವಾಗುತ್ತಿರುವ ಟ್ವಿಮ್ಸ್ ಚಿಕಿತ್ಸಾ ಕೇಂದ್ರದಲ್ಲಿ ಅಸ್ಥಿ ಮತ್ತು ಮೂಳೆ ರೋಗಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ನೀಡುವ ಅತ್ಯಾಧುನಿಕ ಕೇಂದ್ರವಾಗಿದೆ. ಜಾಯಿಂಟ್ ರಿಪ್ಲೇಸ್‌ಮೆಂಟ್ಸ್, ಅತ್ಯಂತ ಕ್ಲಿಷ್ಟಕರ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗಳು, ಪ್ಲಾಸ್ಟಿಕ್ ಹಾಗೂ ಏಸ್ಥೆಟಿಕ್ ಮತ್ತು ರಿಕಂಸ್ಟ್ರಕ್ಟೀವ್ ಸರ್ಜರಿಗಳು ಹಾಗೂ ಶಸ್ತ್ರಚಿಕಿತ್ಸೆಯ ನಂತರದ ಚೇತರಿಕೆಗೆ ಬೇಕಾದಂತಹ ಅತ್ಯಾಧುನಿಕ ಹಾಗೂ ವಿಶ್ವಗುಣಮಟ್ಟದ ಚಿಕಿತ್ಸಾ ಕ್ರಮಗಳನ್ನು ಈ ಕೇಂದ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಲ್ಲದೆ ಈ ಕೇಂದ್ರದಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ಡಯಾಗ್ನೋಸ್ಟಿಕ್ ಉಪಕರಣಗಳು, ಅತ್ಯಾಧುನಿಕ ಆಪರೇಶನ್ ಥಿಯೇಟರ್ ಗಳು ಲಭ್ಯವಿವೆ. ದೇಶ ಹಾಗೂ ವಿದೇಶಗಳಲ್ಲಿ ಚಿಕಿತ್ಸೆಯನ್ನು ನೀಡುವಲ್ಲಿ ದಶಕಗಳ ಪರಿಣಿತಿಯನ್ನು ಹೊಂದಿರುವ ಪರಿಣಿತ ವೈದ್ಯರ ತಂಡ ಇಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
Recommended Video
ಟ್ರಸ್ಟ್‌ವೆಲ್ ಹಾಸ್ಪಿಟಲ್ ನ ಸಿಎಂಡಿ ಡಾ. ಹೆಚ್ ವಿ ಮಧುಸೂಧನ್ ಮಾತನಾಡಿ, ಬೆಂಗಳೂರು ನಗರದ ಜೆಸಿ ರಸ್ತೆಯಲ್ಲಿರುವ ಟ್ರಸ್ಟ್ ವೆಲ್ ಆಸ್ಪತ್ರೆ 250 ಬೆಡ್‌ಗಳನ್ನು ಹೊಂದಿರುವ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಆಧುನಿಕ ಮೂಲಭೂತ ಸೌಕರ್ಯಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದ್ದು, ನ್ಯೂರೋಸೈನ್ಸ್‌ಸ್, ಆರ್ಥೋಪಿಡಿಕ್ಸ್, ಯುರಾಲಜಿ, ಇಎನ್‌ಟಿ, ಕಾರ್ಡಿಯಾಲಜಿ, ಮೆಡಿಕಲ್ & ಸರ್ಜಿಕಲ್ ಗ್ಯಾಸ್ಟ್ರೋಎಂಟ್ರೋಲಾಜಿ ಮತ್ತು ಎಮರ್ಜೆನ್ಸಿ ಕೇರ್ ಸೌಲಭ್ಯ ಸೇರಿದಂಥೆ 28 ಕ್ಕೂ ಹೆಚ್ಚು ಮಲ್ಟಿಸ್ಪೇಷಾಲಿಟಿ ಚಿಕಿತ್ಸೆಗಳ ಇಲ್ಲಿ ಲಭ್ಯವಿದೆ ಎಂದು ಹೇಳಿದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications