ತಂದೆಯ ಕಣ್ಣುದುರೇ ಹೆಣ್ಣುಮಕ್ಕಳಿಬ್ಬರ ಮೇಲೆ ಹರಿಯಿತು ಟ್ರಕ್
ದೊಡ್ಡಬಳ್ಳಾಪುರ, ಫೆಬ್ರವರಿ 27: ತಂದೆಯ ಕಣ್ಣೆದುರೇ ಇಬ್ಬರು ಹೆಣ್ಣುಮಕ್ಕಳು ಟ್ರಕ್‌ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿರುವ ಹೃದಯ ವಿದ್ರಾವಕರ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಸಹೋದರಿಯರಿಬ್ಬರು ಸ್ಕೂಟರ್‌ನಲ್ಲಿ ಹೋಗುತ್ತಿರುವಾಗ ವೇಗವಾಗಿ ಬಂದ ಟ್ರಕ್ ಒಂದು ಗುದ್ದಿದೆ. ಕೆಆರ್ ಮಹಾಲಕ್ಷ್ಮೀ, ಕೆಆರ್ ಪಲ್ಲವಿ ಮೃತಪಟ್ಟಿದ್ದಾರೆ. ಅವರು ಕಾರೇನಹಳ್ಳಿಯ ನಿವಾಸಿಗಳಾಗಿದ್ದಾರೆ. ದೇವಸ್ಥಾನದಿಂದ ಹಿಂದಿರುಗುವಾಗ ದೊಡ್ಡಬಳ್ಳಾಪುರ-ನೆಲಮಂಗಲ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ.
ಮಹಾಲಕ್ಷ್ಮೀ ಸ್ಥಳದಲ್ಲೇ ಮೃತಪಟ್ಟಿದ್ದರೆ, ಪಲ್ಲವಿ ಆಸ್ಪತ್ರೆಗೆ ತೆರಳುವಾಗ ಮೃತಪಟ್ಟಿದ್ದಾರೆ. ಮಕ್ಕಳು ಸ್ಕೂಟರ್‌ನಲ್ಲಿ ಹೋಗುತ್ತಿರುವುದನ್ನು ನೋಡುತ್ತಿದ್ದೆ ಆ ವೇಳೆ ವೇಗವಾಗಿ ಬಂದ ಟ್ರಕ್ ಒಂದು ಬೈಕ್ ಮೇಲೆ ಹರಿಯಿತು ಮಕ್ಕಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.