Shankar Nag: ಮೆಟ್ರೋ ನಿಲ್ದಾಣಕ್ಕೆ ನಟ ಶಂಕರ್‌ನಾಗ್ ಹೆಸರು ಈ ಕಾರಣಕ್ಕೆ ಬೇಕು: ನಟ ರಮೇಶ್ ಭಟ್
ಬೆಂಗಳೂರಿನ ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೈಂಟ್ ಮೇರಿ ಹೆಸರಿಡಲು ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದು. ಇದು ಭಾರೀ ವಿವಾದ ಮತ್ತು ವಿರೋಧಕ್ಕೆ ಕಾರಣವಾಗಿದೆ. ಇದರ ನಡುವೆ ಬೆಂಗಳೂರಿನ ಮೆಟ್ರೋ ಯೋಜನೆ ನಟ ದಿವಂಗತ ಶಂಕರ್‌ನಾಗ್ ಅವರ ಕನಸಿನ ಕೂಸು ಒಂದು ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರನ್ನು ಇರಿಸಬೇಕು ಎಂದು ರಮೇಶ್ ಭಟ್ ಅವರು ಆಗ್ರಹಿಸಿದ್ದಾರೆ. ಇದರೊಂದಿಗೆ ಕರ್ನಾಟಕದ ವಿವಿಧ ಮಹನೀಯರ ಹೆಸರನ್ನು ಇರಿಸಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನ ಮೆಟ್ರೋ ನಿಲ್ದಾಣಗಳಿಗೆ ಹೆಸರನ್ನು ಇರಿಸುವುದು ಇತ್ತೀಚಿನ ದಿನಗಳಲ್ಲಿ ವಿವಾದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣಗಳಿಗೆ ಕಂಪನಿಗಳ ಹೆಸರನ್ನು ಇರಿಸುತ್ತಿರುವುದು ವಿವಾದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈ ರೀತಿ ಇರುವಾಗ ಬೆಂಗಳೂರಿನ ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೈಂಟ್ ಮೇರಿ ಹೆಸರಿಡಲು ಸರ್ಕಾರ ಮುಂದಾಗಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಈ ನಡುವೆ ಸರ್ಕಾರ ನಟ ಶಂಕರ್ ನಾಗ್ ಅವರ ಹೆಸರನ್ನು ಬೆಂಗಳೂರಿನ ಮೆಟ್ರೋ ನಿಲ್ದಾಣವೊಂದಕ್ಕೆ ಇರಿಸದೆ ಇರುವ ಬಗ್ಗೆ ನಟ ರಮೇಶ್ ಭಟ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬಾಸ್ ಟಿವಿಯೊಂದಿಗೆ ಮಾತನಾಡಿರುವ ಅವರು, ಬೆಂಗಳೂರಿಗೆ ನಮ್ಮ ಮೆಟ್ರೋ ಶಂಕರ್‌ನಾಗ್ ಕಲ್ಪನೆ. 1986 ಮತ್ತು 1987ನೇ ವರ್ಷದಲ್ಲೇ ಶಂಕರ್‌ನಾಗ್ ತನ್ನ ಸ್ವಂತ ದುಡ್ಡು ಖರ್ಚು ಮಾಡಿ, ಸರ್ವೇ ಮಾಡಿಸಿದ್ದರು. ಬೆಂಗಳೂರಿನಲ್ಲಿ ಮರಗಳನ್ನು ಕಡಿಯುವುದಕ್ಕೆ ಅವರು ಹೇಳಿರಲಿಲ್ಲ. ಅಂಡರ್‌ಪಾಸ್‌ನಲ್ಲಿ ನಮ್ಮ ಮೆಟ್ರೋ ಅಭಿವೃದ್ಧಿ ಮಾಡುವ ಪರಿಕಲ್ಪನೆ ಅವರದ್ದಾಗಿತ್ತು ಎಂದು ಅವರು ಹೇಳಿದ್ದಾರೆ.
ಮುಂದುವರಿದು ಲಂಡನ್‌ನಲ್ಲಿ ನೋಡಿಕೊಂಡು ಬಂದಿದ್ದ ಅವರು, ಅಂದಿನ ಕಾಲದಲ್ಲೇ ಬೆಂಗಳೂರು ಮೆಟ್ರೋಗಾಗಿ 9 ರಿಂದ 10 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಅಂದಿನ ಕಾಲದಲ್ಲೇ ಅಷ್ಟೊಂದು ಹಣ - ಅಧ್ಯಯನ ಮಾಡಿ ಅವರು ವರದಿ ಕೊಟ್ಟಿದ್ದರು. ಅಂತವರ ಹೆಸರನ್ನು ಬೆಂಗಳೂರಿನ ಯಾವುದೋ ಒಂದು ಮೆಟ್ರೋ ನಿಲ್ದಾಣಕ್ಕೆ ಇರಿಸಲು ಸಾಧ್ಯವಿಲ್ಲ ಎಂದರೆ ಹೇಗೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಒಂದು ನಿಲ್ದಾಣಕ್ಕೆ ಅವರ ಹೆಸರನ್ನು ಇರಿಸುವ ಮನಸ್ಸು ಇಲ್ಲ ಎಂದಾದರೆ, ನಾವು ಏನು ಹೇಳಬೇಕು. ಮನಸ್ಸೂ ಇಲ್ಲ, ಕಿವಿನೂ ಇಲ್ಲ. ಇದು ನಮ್ಮ ದುರಾದೃಷ್ಟ ಇಂತಹ ದೊರೆಗಳು ನಮಗಿದ್ದಾರೆ (ಸರ್ಕಾರ) ನನಗೆ ಆವೇಶ ಬರುತ್ತದೆ ಈ ವಿಚಾರವನ್ನು ಮಾತನಾಡುವಾಗ, ಅವರು ಮಾಡಿದ್ದನ್ನು ಸಹಿಸಿಕೊಂಡು ಬದುಕುವುದಷ್ಟೇ ನಮಗೆ ಉಳಿದಿರುವ ಮಾರ್ಗ ಎಂದು ಅವರು ಅಸಹನೀಯ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಬೇರೆ.. ಬೇರೆ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಸಂಗೊಳ್ಳಿ ರಾಯಣ್ಣ ಅವರ ಹೆಸರು ರೈಲ್ವೆ ನಿಲ್ದಾಣಕ್ಕೆ ಇದೆ. ನಮ್ಮ ಮೆಟ್ರೋಗೆ ಬಸವಣ್ಣ ಅವರ ಹೆಸರು ಇಡಿ, ಇದು ನಮ್ಮ ಏಷ್ಟೋ ವರ್ಷದ ಬೇಡಿಕೆ. ಕೊನೆ ಪಕ್ಷ ಬಸವಣ್ಣನ ಹೆಸರು ಇಟ್ಟಿಲ್ಲ ಅಂದರೂ ಪರ್ವಾಗಿಲ್ಲ. ಯಾರಾದ್ರೂ ಕನ್ನಡಿಗ ಮಹನೀಯರ ಹೆಸರು ಇರಿಸಿ ಎಂದು ಕೆಲವರು ಆಗ್ರಹಿಸಿದ್ದಾರೆ.












Click it and Unblock the Notifications