ಬೆಂಗಳೂರು ಸಂಚಾರ ದಟ್ಟಣೆ ಬಗ್ಗೆ ಬಂತು ಹೊಸ ವರದಿ

Recommended Video

      ಬೆಂಗಳೂರು ಟ್ರಾಫಿಕ್ ಬಗ್ಗೆ ಬಂತು ಹೊಸ ವರದಿ | Oneindia Kannada

      ಬೆಂಗಳೂರು, ಆಗಸ್ಟ್ 30 : ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರದಲ್ಲಿ ಕಚೇರಿಗೆ ಸಂಚಾರ ನಡೆಸುವ ವೇಗ ಗಂಟೆಗೆ 18.7 ಕಿ. ಮೀ. ಎಂದು ಅಧ್ಯಯನ ವರದಿ ಹೇಳಿದೆ.

      2019ರ ಮೊದಲ ಹಂತದ ಟ್ರಾವೆಲ್ ಟೈಮ್ ವರದಿ ಬಿಡುಗಡೆಯಾಗಿದ್ದು ವಿವಿಧ ನಗರಗಳ ಸಂಚಾರ ದಟ್ಟಣೆ ಮಾಹಿತಿ ಬಹಿರಂಗವಾಗಿದೆ. ದೇಶದ ವಿವಿಧ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರ 6ನೇ ಸ್ಥಾನದಲ್ಲಿದೆ.

      ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚಾರ ನಡೆಸುವ ಅವಧಿಯ ಲೆಕ್ಕಾಚಾರವನ್ನು ಹಾಕಿ ವರದಿಯನ್ನು ತಯಾರಿಸಲಾಗಿದೆ. ಚೆನ್ನೈ ನಗರದ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಪ್ರಯಾಣದ ಅವಧಿ ಗಂಟೆಗೆ 25.7 ಕಿ.ಮೀ. ಇದೆ.

      Travel Time Report : Bengaluru Average Speed Of 18.7 KMPH

      ವರದಿಯ ಪ್ರಕಾರ ಹೈದರಾಬಾದ್ 21.2, ದೆಹಲಿ (ಎನ್‌ಸಿಆರ್) 20.6, ಪುಣೆ 19.9, ಮುಂಬೈ 18.5 ಮತ್ತು ಬೆಂಗಳೂರು 18.7 ಕಿ.ಮೀ. ಪ್ರಯಾಣದ ವೇಗವನ್ನು ಹೊಂದಿದೆ. ಭಾರತದ ನಗರಗಳಲ್ಲಿ ಜನರು ಶೇ 7ರಷ್ಟು ಸಮಯವನ್ನು ಪ್ರಯಾಣಕ್ಕಾಗಿಯೇ ಕಳೆಯುತ್ತಾರೆ ಎಂದು ವರದಿ ಹೇಳಿದೆ.

      ಈ ಆರು ನಗರಗಳ ಸಮೀಕ್ಷೆಗಳಲ್ಲಿ ಒಂದು ಅಂಶದಲ್ಲಿ ಸಾಮ್ಯತೆ ಇದೆ. ಎಲ್ಲಾ ನಗರದಲ್ಲಿಯೂ ಸೋಮವಾರ ಸಂಚಾರ ದಟ್ಟಣೆ ಹೆಚ್ಚಿದೆ. ಮಂಗಳವಾರ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಇರುತ್ತದೆ. ಸಂಜೆ 6 ಗಂಟೆಗೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

      ಹಬ್ಬದ ದಿನಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಇರುತ್ತದೆ. ಯುಗಾದಿ ಸಮಯದಲ್ಲಿ ಶೇ 22ರಷ್ಟು, ದೀಪಾವಳಿ ಸಮಯದಲ್ಲಿ ಶೇ 14ರಷ್ಟು ದಟ್ಟಣೆ ಕಡಿಮೆಯಾಗುತ್ತದೆ ಎಂದು ವರದಿ ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+