ಬೆಂಗಳೂರಲ್ಲಿ ತೃತೀಯ ಲಿಂಗಿ ಹಕ್ಕುಗಳ ಬಿಲ್ ವಿರುದ್ಧ ಪ್ರತಿಭಟನೆ
ಬೆಂಗಳೂರು, ಡಿಸೆಂಬರ್ 19: ತೃತೀಯ ಲಿಂಗಿಗಳ ಹಕ್ಕುಗಳಿಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮಂಡಿಸಲಾಗಿರುವ ಬಿಲ್ ವಿರುದ್ಧ ತೃತೀಯ ಲಿಂಗಿಗಳ ಸಮುದಾಯದವರು ಬುಧವಾರ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದರು.
ಈ ಬಿಲ್ ಮಂಡಿಸುವ ಮುನ್ನ ತೃತೀಯ ಲಿಂಗಿಗಳ ಸಮುದಾಯದವರನ್ನು ಭೇಟಿ ಮಾಡಬೇಕಿತ್ತು, ಬಿಲ್ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸಬೇಕಿತ್ತು. ಈಗ ಮಂಡಿಸಲಾದ ಬಿಲ್‌ನಲ್ಲಿ ಉದ್ಯೋಗದಲ್ಲಿ ಮೀಸಲಾತಿ, ಶಿಕ್ಷಣ ಇನ್ನಿತರೆ ಪ್ರಮುಖ ವಿಷಯವನ್ನೇ ಕೈಬಿಡಲಾಗಿದೆ.
ಈ ಬಿಲ್ ಇನ್ನಷ್ಟು ಜನರನ್ನು ಭಿಕ್ಷುಕರನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ, ಉದ್ಯೋಗದಲ್ಲಿ ಮೀಸಲಾತಿ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೊಸ ಬಿಲ್ ಮಂಡನೆ ಮಾಡಬೇಕು ಎಂದು ಒತ್ತಾಯಿಸಿ ತೃತೀಯ ಲಿಂಗಿಗಳು ಪ್ರತಿಭಟನೆ ನಡೆಸಿದರು.

ಹಲವಾರು ವರ್ಷಗಳಿಂದ ತಮಗೆ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮೀಸಲಾತಿ ನೀಡಿ, ಆಗ ನಾವು ಸಮಾಜದಲ್ಲಿ ಎಲ್ಲರಂತೆ ಬದುಕಲು ಸಾಧ್ಯ, ಭಿಕ್ಷಾಟನೆ ಇನ್ನಿತರೆ ಸುಲಿಗೆ ಕೆಲಸವನ್ನು ಬಿಡಲು ಸಾಧ್ಯ ಎಂದು ಹೋರಾಟ ಮಾಡುತ್ತಾ ಬಂದಿದ್ದಾರೆ.
ಆದರೆ ಇದೀಗ ಬಿಲ್ ಪಾಸ್ ಮಾಡಿದ್ದರೂ ಕೂಡ ಇದರಿಂದ ತೃತೀಯ ಲಿಂಗಿಗಳಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುವುದು ಅವರ ಅಳಲಾಗಿದೆ.












Click it and Unblock the Notifications