• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru Traffic Police: ವಾಹನ ತಪಾಸಣೆಗೆ 24X7 ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಶೀಘ್ರ ಜಾರಿ

|
Google Oneindia Kannada News

ಬೆಂಗಳೂರು, ನವೆಂಬರ್ 24: ಬೆಂಗಳೂರಿನ ವಾಹನ ಸವಾರರಿಗೆ ಬೆಂಗಳೂರು ನಗರ ಸಂಚಾರಿ ಪೊಲೀಸರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಆದಷ್ಟು ಶೀಘ್ರವೇ ನಗರ ವ್ಯಾಪ್ತಿಯಲ್ಲಿ ವಾಹನ ಸವಾರರನ್ನು ಪೊಲೀಸರು ರಸ್ತೆಯಲ್ಲೇ ನಿಂತು ದಾಖಲೆಗಳಿಗೆ ಅಡ್ಡಿಪಡಿಸುವ ವಿಧಾನಕ್ಕೆ ಕೊನೆಯಾಗಲಿದೆ.

ಹೌದು, ಸಂಚಾರ ಪೊಲೀಸರು ರಸ್ತೆಯಲ್ಲಿ ನಿಂತು ವಾಹನ ಚಾಲಕರ ತಪಾಸಣೆ, ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಇಲ್ಲಿ ನಾಲ್ಕೈದು ಸಂಚಾರಿ ಪೊಲೀಸರು ರಸ್ತೆ ಬದಿ ನಿಲ್ಲಬೇಕಿದೆ. ಅಲ್ಲದೇ ಇದರಿಂದ ಸವಾರರು ಸಹ ಕಿರಿಕಿರಿ ಅನುಭವಿಸುತ್ತಾರೆ. ಇದನ್ನು ತಪ್ಪಿಸಲು ಬೆಂಗಳೂರು ನಗರ ಸಂಚಾರಿ ಪೊಲೀಸರು ನೂತನ ಚಿಂತನೆ ನಡೆಸಿದ್ದಾರೆ.

ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಹಲ್ಲೆ ಆರೋಪ ತಳ್ಳಿ ಹಾಕಿದ ಪೊಲೀಸರು ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಹಲ್ಲೆ ಆರೋಪ ತಳ್ಳಿ ಹಾಕಿದ ಪೊಲೀಸರು

ನಗರಾದ್ಯಂತ ದಿನದ 24X7 ಕಣ್ಗಾವಲು ಕ್ಯಾಮೆರಾಗಳ ಜಾಲದ ಮೂಲಕ ಸಂಚಾರ ನಿಯಮ ಉಲ್ಲಂಘನೆ, ವಾಹನ ಚಾಲಕರನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆ ತರಲಾಗುವುದು. ಒಂದು ವೇಳೆ ನಿಯಮ ಉಲ್ಲಂಘಿಸುವುದು ಗೊತ್ತಾದರೆ ಕ್ಯಾಮರಾಗಳ ಸಹಾಯದಿಂದ ಸವಾರರ ಮನೆಗೆ ದಂಡದ ನೋಟಿಸ್ ಕಳುಹಿಸಲಾಗುವುದು ಎಂದು ನೂತನ ವಿಶೇಷ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರು ಮಾಹಿತಿ ನೀಡಿದ್ದಾರೆ.

ಪ್ರತಿನಿತ್ಯ 35,000 ವಾಹನಗಳಿಂದ ನಿಯಮ ಉಲ್ಲಂಘನೆ

ಪ್ರತಿನಿತ್ಯ 35,000 ವಾಹನಗಳಿಂದ ನಿಯಮ ಉಲ್ಲಂಘನೆ

ಪ್ರಸ್ತುತದಲ್ಲಿ ಬೆಂಗಳೂರು ಟ್ರಾಫಿಕ್ ಪೋಲಿಸ್ (BTP) ಸಿಬ್ಬಂದಿ ಪ್ರತಿದಿನ 35,000 ನಿಯಮ ಉಲ್ಲಂಘನೆ ಚಲನ್‌ಗಳನ್ನು ಸಂಚಾರ ನಿಯಮ ಉಲ್ಲಂಘಿಸಿದ ಸವಾರರಿಗೆ ಕಳುಹಿಸುತ್ತಿ್ದಾರೆ. ಸಂಚಾರ ನಿಯಮ ಪದೇ ಪದೇ ಉಲ್ಲಂಘನೆ ಮಾಡಿ, ಬಿಟಿಪಿ ನೋಟಿಸ್‌ಗೆ ಸ್ಪಂದಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅದರಲ್ಲಿ ಹಳದಿ-ಬೋರ್ಡ್‌ ಗಳ ಫಿಟ್‌ನೆಸ್ ಪ್ರಮಾಣಪತ್ರ ಹಾಗೂ ಬಿಳಿ ‌ಬೋರ್ಡ್ ವಾಹನಗಳಿಗೆ ವಾಹನ ವಿಮೆಯ ವಾರ್ಷಿಕ ನವೀಕರಣಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿದರು.

2023ರಿಂದ ಐಟಿಎಂಎಸ್ ಅಳವಡಿಕೆ

2023ರಿಂದ ಐಟಿಎಂಎಸ್ ಅಳವಡಿಕೆ

ಒಂದು ವೇಳೆ ಕಾನೂನು ಉಲ್ಲಂಘಿಸಿ ಸಿಕ್ಕಿಬಿದ್ದರೆ ಮಾತ್ರ ವಾಹನಗಳ ದಾಖಲೆಗಳನ್ನು ಪರಿಶೀಲಿಸಲಾಗುವುದು. ಹೀಗಿದ್ದರು ನಗರದ ಅನೇಕ ಪ್ರದೇಶಗಳಲ್ಲಿ ವಾಹನ ಚಾಲಕರನ್ನು ತಡೆದು ನಿಲ್ಲಿಸಿ ಪರಿಶೀಲನೆ ಮಾಡುವ ಪರಿಪಾಠ ಮುಂದುವರೆದಿದೆ.

2023ರ ಜನವರಿ ವೇಳೆಗೆ ನಗರದ ರಸ್ತೆಗಳಲ್ಲಿ ಇಂಟೆಲಿಜೆನ್ಸ್ ಟ್ರಾನ್ಸ್‌ಪೋರ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಅಳವಡಿಕೆ ಆಗುವ ಸಾಧ್ಯತೆ ಇದೆ. ನಂತರ ಬಿಟಿಪಿ ಅಧಿಕಾರಿಗಳು ಸ್ಮಾರ್ಟ್ ಕಣ್ಗಾವಲು ಮತ್ತು ವಾಹನ ಚಾಲಕರ ಸೂಚನೆಗಳ ಅನುಸರಣೆಗೆ ಬಗ್ಗೆ ಹೆಚ್ಚಿನ ಗಮನ ಹರಿಸಲಿದ್ದಾರೆ.

ಆರ್‌ಟಿಓ ಜೊತೆ ಮಾಹಿತಿ ಹಂಚಿಕೆ

ಆರ್‌ಟಿಓ ಜೊತೆ ಮಾಹಿತಿ ಹಂಚಿಕೆ

ಯಾವುದೇ ವಾಣಿಜ್ಯ ವಾಹನದ ಫಿಟ್‌ನೆಸ್ ಪ್ರಮಾಣಪತ್ರವನ್ನು ಪ್ರತಿ ವರ್ಷ ನವೀಕರಿಸಬೇಕು. ಎಲ್ಲಾ ವೈಟ್‌ಬೋರ್ಡ್ ವಾಹನಗಳು ತಮ್ಮ ವಾರ್ಷಿಕ ಮೋಟಾರು ವಿಮೆಯನ್ನು ನವೀಕರಿಸಬೇಕಿದೆ. ಈ ಮಧ್ಯೆ ನಾವು ಹೊಸ ವ್ಯವಸ್ಥೆಯಿಂದಾಗಿ ಮನೆಗೆ ನೋಟಿಸ್ ಕಳುಹಿಸಿದರೂ ಸ್ಪಂದಿಸದ ವಾಹನ ಚಾಲಕರ ಮಾಹಿತಿಯನ್ನು ಪ್ರಾದೇಶಿಕ ಸಾರಿಗೆ ಕಚೇರಿ (RTO)ಯಿಂದ ಪಡೆದು ತಪ್ಪತಸ್ಥರ ವಿರುದ್ಧ ಕ್ರಮ ವಹಿಸಲಿದ್ದೇವೆ ಎಂದು ಎಂ.ಎ.ಸಲೀಂ ಅವರು ತಿಳಿಸಿದರು.

ವಾಹನಗಳ ವಿಮಾ ನವೀಕರಣಕ್ಕೆ ಬ್ರೇಕ್

ವಾಹನಗಳ ವಿಮಾ ನವೀಕರಣಕ್ಕೆ ಬ್ರೇಕ್

ಆರ್‌ಟಿಓ ಅಧಿಕಾರಿಗಳಿಗೆ ವಾಹನವು ಈವರೆಗೆ ಉಲ್ಲಂಘಿಸಿದ ಪ್ರಕರಣಗಳ ಮಾಹಿತಿ ನೀಡಿ ವಿಮೆ ನವೀಕರಣ, ಫಿಟ್‌ನೆಸ್‌ ಪ್ರಮಾಣ ಪತ್ರ ನೀಡದಂತೆ ಸೂಚಿಸಲಾಗುವುದು. ಜೊತೆಗೆ ನಿಯಮ ಉಲ್ಲಂಘಿಸಿದ ಸವಾರರು ಬಿಟಿಪಿ ಹಾಕಿದ ದಂಡದ ಮೊತ್ತ ಕಟ್ಟಬೇಕು. ಇಲ್ಲವಾದರೆ ಅಂತವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಿದ್ದೇವೆ. ಈ ಮೂಲಕ ಸಂಚಾರ ಕಟ್ಟುನಿಯಮ ಜಾರಿಯಾಗುವಂತೆ ಮಾಡಲಾಗುವುದು ಎಂದು ವಿವರಿಸಿದರು.

ಮುಖ್ಯವಾಗಿ ವಾಹನಗಳ ವಿಮಾ ಸಂಸ್ಥೆಗಳೊಂದಿಗೂ ಬಿಟಿಪಿ ಮಾತುಕತೆ ನಡೆಸುತ್ತಿದೆ. ಹೊಸ ವ್ಯವಸ್ಥೆ ಅವರು ಸಹಕಾರ ನೀಡದಿದ್ದರೆ ಕಂಪನಿಗಳನ್ನು ನಿಯಂತ್ರಿಸಲು ಮೋಟರ್‌ ವೆಹಿಕಲ್ (ಎಂವಿ) ಕಾಯಿದೆಗೆ ತಿದ್ದುಪಡಿ ಮಾಡುವ ಚಿಂತನೆಯಲ್ಲಿದ್ದೇವೆ. ಎಲ್ಲವೂ ಅಂದುಕೊಂಡಂತೆ ಆದರೆ ಆದಷ್ಟು ಶೀಘ್ರವೇ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.

English summary
Bengaluru Traffic Police: Vehicle checking in 24x7 surveillance Camera in future days at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X