ಏರೋ ಶೋನಲ್ಲಿ ಅಗ್ನಿ ಅವಘಡ, ಯಲಹಂಕದಲ್ಲಿ 2 ಕಿ.ಮೀ ಟ್ರಾಫಿಕ್ ಜಾಮ್
ಬೆಂಗಳೂರು, ಫೆಬ್ರವರಿ 23: ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋ ವೇಳೆ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಯಲಹಂದಿಂದ 2 ಕಿ.ಮೀ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಏರೋ ಇಂಡಿಯಾ ಶೋ ನಡೆಯುವ 5 ನೇ ಗೇಟ್ ಪಾರ್ಕಿಂಗ್ ಬಳಿ ಈ ಘಟನೆ ಸಂಭವಿಸಿದೆ ಘಟನೆಯಲ್ಲಿ 300ಕ್ಕೂ ಹೆಚ್ಚು ಕಾರುಗಳು ಸುಟ್ಟ ಭಸ್ಮವಾಗಿದ್ದು, ಹಲವು ಕಾರುಗಳು ಸ್ಪೋಟಗೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.

2 ಗಂಟೆಯ ಶೋಗೆ ಬರುವವರು ನಡೆಯುವ ಸ್ಥಳದ ಬಳಿ ಬಂದಿದ್ದರು, ಇನ್ನೂ ಇಲ್ಲಿಂದ ಹೊರಗೆ ತೆರಳುವವರು ಕೂಡ ಕೆಲವರು ತಮ್ಮ ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗುವ ಆತುರದಲ್ಲಿದ್ದರು. ಹೀಗಾಗಿ ಯಲಹಂಕದಿಂದ ಸುಮಾರು 2 ಕಿ.ಮೀ ದೂರದವರೆಗೂ ಕೂಡ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರಿತಪಿಸುವಂತಾಗಿದೆ.
ಒಣ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದ್ದ ಕಾರಣ ಗಾಳಿಯೂ ಇದ್ದುದರಿಂದ ಬೆಂಕಿ ಎಲ್ಲೆಡೆ ಹರಡಿದೆ.












Click it and Unblock the Notifications