Traffic Fine: ಸಿಎಂ ಸಿದ್ದರಾಮಯ್ಯ ಕಾರಿನ ಮೇಲೂ ಟ್ರಾಫಿಕ್ ಫೈನ್, ದಂಡ ಕಟ್ಟಿದ್ದೆಷ್ಟು?
ಸಂಚಾರ ನಿಯಮ ಉಲ್ಲಂಘನೆಗೆ ತಪ್ಪಿಸಲು ಬೆಂಗಳೂರು ಸಂಚಾರ ಪೊಲೀಸರು ಟೆಕ್ನಾಲಜಿಯಲ್ಲಿ ಮುಂದಿದ್ದಾರೆ. ಈಗೆಲ್ಲ ಎಲ್ಲೆಂದರಲ್ಲಿ ಕ್ಯಾಮರಾಗಳಿದ್ದು, ಯಾವುದೇ ಸಂಚಾರ ನಿಯಮ ಪಾಲಿಸದಿದ್ದರೆ ನಿಮ್ಮ ವಾಹನದ ಮೇಲೆ ಕ್ಷಣ ಮಾತ್ರದಲ್ಲೇ ಫೈನ್ ಬೀಳುವ ವ್ಯವಸ್ಥೆ ಇದೆ. ಇತ್ತೀಚೆಗೆ ವಾಹನಗಳ ಮೇಲಿನ ದಂಡ ಪಾವತಿಗೆ ಪೊಲೀಸರು ಶೇ 50ರಷ್ಟು ಡಿಸ್ಕೌಂಟ್ ಕೂಡ ಘೋಷಿಸಿದ್ದರು. ಅಚ್ಚರಿ ಅಂದ್ರೆ ಸಿಎಂ ಸಿದ್ದರಾಮಯ್ಯ ಅವರು ಓಡಾಡುವ ಕಾರಿನ ಮೇಲೂ ಫೈನ್ ಬಿದ್ದಿದ್ದು, ಕೊನೆಗೆ ದಂಡವೂ ಪಾವತಿಸಿ ಮಾದರಿಯಾಗಿದ್ದಾರೆ.
ಹೌದು, ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೂ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವ ಕೇಸ್‌ಗಳು ದಾಖಲಾಗಿದ್ದವು. ಈ ಸಂಬಂಧ ಸೋಷಿಯಕ್ ಮೀಡಿಯಾದಲ್ಲಿ ಭಾರೀ ಚರ್ಚೆಯಾದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಸಾರ್ವಜನಿಕರಂತೆ ದಂಡ ಪಾವತಿಸಿದ್ದಾರೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಬಳಸುವ ಫಾರ್ಚೂನರ್ ಕಾರಿನ ಮೇಲೆ ಏಳು ಕೇಸ್ ಇತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.

ಸಿಎಂ ಸಿದ್ದರಾಮಯ್ಯ ಅವರು ತಮ್ಮ ದಿನನಿತ್ಯದ ಪ್ರಯಾಣಕ್ಕೆ ಐಷಾರಾಮಿ ಫಾರ್ಚೂನರ್ ಕಾರನ್ನು ಬಳಸುತ್ತಿದ್ದು, 2024ರಿಂದ ಇಲ್ಲಿವರೆಗೆ 7 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಇದರಲ್ಲಿ ಆರು ಕೇಸ್‌ಗಳು ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದೇ ಇದ್ದ ಕಾರಣಕ್ಕೆ ದಾಖಲಾಗಿದ್ದವು. ಇದು ಸಂಚಾರ ನಿರ್ವಹಣಾ ವ್ಯವಸ್ಥೆಯಡಿ (ಐಟಿಎಂಎಸ್) ಅಳವಡಿಸಿದ್ದ ಆಧುನಿಕ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಜನಸಾಮಾನ್ಯರಿಗೆ ಒಂದು ನ್ಯಾಯ, ಜನಪ್ರತಿನಿಧಿಗಳಿಗೆ ಒಂದು ನ್ಯಾಯಾನಾ? ಹಲವರು ಈ ಬಗ್ಗೆ ಟೀಕಿಸಿದ್ದರು.
ಎಲ್ಲೆಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ?
ಪೊಲೀಸ್ ದಾಖಲೆಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರು ಹಳೇ ಏರ್ಪೋರ್ಟ್ ರಸ್ತೆಯ ಲೀಲಾ ಪ್ಯಾಲೇಸ್ ಜಂಕ್ಷನ್ ಬಳಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಮತ್ತೆ ಅದೇ ಜಂಕ್ಷನ್‌ನಲ್ಲಿ ಇನ್ನೆರಡು ಕೇಸ್‌ಗಳು ದಾಖಲಾಗಿದ್ದವು. ಚಂದ್ರಿಕಾ ಹೋಟೆಲ್ ಜಂಕ್ಷನ್, ಶಿವಾನಂದ ಸರ್ಕಲ್, ಡಾ.ರಾಜ್ಕುಮಾರ್ ಪ್ರತಿಮೆ ಜಂಕ್ಷನ್ಗಳ ಸಿಎಂ ಸಿದ್ದರಾಮಯ್ಯ ಅವರು ಸೀಟ್ ಬೆಲ್ಟ್ ಹಾಕದೆ ಪ್ರಯಾಣಿಸಿದ್ದರು. ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಕ್ಸ್ಪ್ರೆಸ್ ಕಾರಿಡಾರ್ನಲ್ಲಿ ಸಿಎಂ ಅವರಿದ್ದ ಕಾರು ಅತಿ ವೇಗವಾಗಿ ಸಂಚರಿಸಿ ನಿಯಮ ಉಲ್ಲಂಘಿಸಿತ್ತು. ಇದನ್ನು ಅಲ್ಲಿದ್ದ ಟ್ರಾಫಿಕ್ ಕ್ಯಾಮರಾಗಳು ಫೋಟೋ ಕ್ಲಿಕ್ಕಿಸಿದ್ದವು. ಹೀಗಾಗಿ ಸಿಎಂ ಕಾರಿನ ಮೇಲೂ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಪ್ರಕರಣಗಳು ದಾಖಲಾಯ್ತು.

ದಂಡ ಪಾವತಿಸಿದ್ದೆಷ್ಟು?
ಇತ್ತೀಚೆಗಷ್ಟೇ ಸಂಚಾರ ಪೊಲೀಸರು ಟ್ರಾಫಿಕ್ ದಂಡ ಪಾವತಿಸಲು ರಿಯಾಯಿತಿ ಘೋಷಿಸಿದ್ದರು. ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ರಾಜ್ಯ ಸರ್ಕಾರವೇ ಶೇ 50ರಷ್ಟು ಡಿಸ್ಕೌಂಟ್ ಆಫರ್ ನೀಡಿದ್ದು ಬಹುತೇಕರು ತಮ್ಮ ವಾಹನಗಳ ಮೇಲಿದದ್ದ ಫೈನ್ ಕ್ಲಿಯರ್ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಯಮ್ಮ ಅವರು ಕೂಡ ಇದೇ ಆಫರ್ನಲ್ಲಿ ದಂಡ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. ಸಿಎಂ ಸಿದ್ದರಾಮಯ್ಯ ಅವರ ಸಿಬ್ಬಂದಿ ಸುಮಾರು 2,500 ರೂಪಾಯಿ ದಂಡ ಪಾವತಿದ್ದು, ಅವರ ಕಾರಿನ ಮೇಲಿದ್ದ ಟ್ರಾಫಿಕ್ ಕೇಸ್ಗಳು ಈಗ ಕ್ಲಿಯರ್ ಆಗಿವೆ.












Click it and Unblock the Notifications