ಮೊಹರಂ ಮೆರವಣಿಗೆ, ಸಂಚಾರ ಮಾರ್ಗ ಬದಲು
ಬೆಂಗಳೂರು, ನ.4 : ಮಂಗಳವಾರ ಮೊಹರಂ ಹಬ್ಬದ ಅಂಗವಾಗಿ ಮುಸ್ಲಿಂ ಭಾಂದವರು ಬೆಂಗಳೂರಿನ ಅಶೋಕನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸೂರು ರಸ್ತೆಯಲ್ಲಿ 'ಅಂಜುಮಾನ್ ಇ ಇಮಾಮಿಯಾ' (ರಿ) ಸಂಸ್ಥೆ ವತಿಯಿಂದ ಮೆರವಣಿಗೆ ಹಮ್ಮಿಕೊಂಡಿದ್ದಾರೆ.
ಹೊಸೂರು ರಸ್ತೆಯ ಜಾನ್ಸನ್ ಮಾರ್ಕೆಟ್‍ನಿಂದ ಎಲ್ಜಿನ್ ಅಪಾರ್ಟ್‍ಮೆಂಟ್ (ಸಿಯಾ ರುದ್ರ ಭೂಮಿ) ವರೆಗೆ ಈ ಮೆರವಣಿಗೆ ನಡೆಯಲಿದೆ. ಆದ್ದರಿಂದ ಈ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನ.4 ರ ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಿಷೇಧಿಸಲಾಗಿದೆ.

ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಿ ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಪರ್ಯಾಯ ಮಾರ್ಗಗಳು ಹೀಗಿವೆ.
* ಆಡುಗೋಡಿ, ಆನೇಪಾಳ್ಯ ಕಡೆಯಿಂದ ಬರುವ ವಾಹನ ಸವಾರರು ಸಿಮೆಂಟ್ರಿ ಕ್ರಾಸ್ ಬಳಿ ಕಡ್ಡಾಯವಾಗಿ ಎಡ ತಿರುವು ಪಡೆದುಕೊಂಡು ಬರ್ಲೀ ಸ್ಟ್ರೀಟ್ ಮಾರ್ಗವಾಗಿ ಮುಂದೆ ಸಂಚರಿಸಬೇಕು.
* ರಿಚ್‍ಮಂಡ್ ವೃತ್ತ, ನಂಜಪ್ಪ ವೃತ್ತದ ಕಡೆಯಿಂದ ಬರುವವರು ಸಿ.ಎಂ.ಪಿ. ಗೇಟ್ ಬಳಿ ಕಡ್ಡಾಯವಾಗಿ ಬಲ ತಿರುವು ಪಡೆದುಕೊಂಡು ಆನೇಪಾಳ್ಯ ಕಡೆಗೆ ಸಂಚರಿಸಬೇಕು.
* ಬ್ರಿಗೇಡ್ ರಸ್ತೆ, ಡಿಸೋಜಾ ವೃತ್ತದ ಕಡೆಯಿಂದ ಬಂದು ಹೊಸೂರು ರಸ್ತೆ ಮೂಲಕ ಆನೇಪಾಳ್ಯ ಕಡೆಗೆ ಹೋಗುವ ವಾಹನಗಳು ಕಡ್ಡಾಯವಾಗಿ ರಿಚ್‍ಮಂಡ್ ವೃತ್ತದ ಕಡೆಗೆ ಸಂಚರಿಸಿ ಮುಂದೆ ಸಾಗಬಹುದು.












Click it and Unblock the Notifications