ಏರೋ ಇಂಡಿಯಾ: ಬಳ್ಳಾರಿ ರಸ್ತೆ ಸಂಚಾರದಲ್ಲಿ ಬದಲಾವಣೆ

ಬೆಂಗಳೂರು, ಫೆ.15: ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ಪ್ರದರ್ಶನ ನಡೆಯಲಿರುವ ಹಿನ್ನೆಲೆಯಲ್ಲಿ 18ರಿಂದ 22ರವರೆಗೆ ವಾಹನ ಸಂಚಾರದ ಮಾರ್ಗದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

ಮೇಖ್ರಿ ವೃತ್ತದಿಂದ ಬಳ್ಳಾರಿ ರಸ್ತೆಯಲ್ಲಿ ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದ್ದುನ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ಇದು ಚಾಲ್ತಿಯಲ್ಲಿರುತ್ತದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಈ ವೇಳೆ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. [ಏರೋ ಇಂಡಿಯಾಕ್ಕೆ 3 ಲಕ್ಷ ಜನರ ನಿರೀಕ್ಷೆ]

india

ಭಾರೀ ವಾಹನಗಳು ದೇವನಹಳ್ಳಿ ಕಡೆಗೆ ತೆರಳಲು ಹೆಬ್ಟಾಳ ಮೇಲ್ಸೇತುವೆ ಅಥವಾ ಕೆಳ ರಸ್ತೆ ಮಾರ್ಗವಾಗಿ ವೀರಣ್ಣನ ಪಾಳ್ಯ ಜಂಕ್ಷನ್‌, ಹೆಣ್ಣೂರು ಕ್ರಾಸ್‌ ಎಡತಿರುವ ಪಡೆದು ಹೆಣ್ಣೂರು ಮುಖ್ಯ ರಸ್ತೆ ಮೂಲಕ ಗೆದ್ದಲಹಳ್ಳಿ ರೈಲ್ವೆ ಸೇತುವೆ, ಕೆ.ನಾರಾಯಣಪುರ ಕ್ರಾಸ್‌, ಭೈರತಿ ಕ್ರಾಸ್‌, ಕೊತ್ತನೂರು, ಗುಬ್ಬಿ ಕ್ರಾಸ್‌, ಭೈರತಿ ಬಂಡೆ, ಕಣ್ಣೂರು, ಹೊಸೂರು ಬಂಡೆ, ಬಾಗಲೂರು, ರಜಾಕ್‌ಪಾಳ್ಯ ಕ್ರಾಸ್‌ ಮೂಲಕ ಉತ್ತನಹಳ್ಳಿ, ವಿದ್ಯಾನಗರ ಕ್ರಾಸ್‌ ತಲುಪಿ ಅಲ್ಲಿಂದ ದೇವನಹಳ್ಳಿಗೆ ತೆರಳಬಹುದಾಗಿದೆ.

ಬಾಗಲೂರು ಮೂಲಕ ಬರುವ ವಾಹನಗಳು ರಜಾಕ್‌ ಕ್ರಾಸ್‌ನಿಂದ ಬಂಡಿಕೊಡಿಗೇಹಳ್ಳಿ, ಮೈಲನಹಳ್ಳಿ ಕ್ರಾಸ್‌ನಲ್ಲಿ ಎಡ ತಿರುವು ಪಡೆದು ಚಿಕ್ಕನಹಳ್ಳಿ, ಬೇಗೂರು, ಕೆಇಬಿ ಪ್ಲಾಂಟ್‌ ಕ್ರಾಸ್‌, ಮುತ್ತಗದಹಳ್ಳಿ ಕ್ರಾಸ್‌, ಯರ್ತಿಗಾನಹಳ್ಳಿ ರೈಲ್ವೇ ಕ್ರಾಸ್‌, ಕನ್ನಮಂಗಲಗೇಟ್‌ ಮೂಲಕವೂ ದೇವನಹಳ್ಳಿ ಕಡೆಗೆ ಸಂಚರಿಸಲು ಅನುವು ಮಾಡಿಕೊಡಲಾಗಿದೆ.[ಏರೋ ಇಂಡಿಯಾದಲ್ಲಿ ಎಚ್ಎಎಲ್ ಯುದ್ಧ ವಿಮಾನಗಳ ಶಕ್ತಿ ಪ್ರದರ್ಶನ]

ಕೆ.ಆರ್‌.ಪುರದಿಂದ ದೇವನಹಳ್ಳಿಗೆ ಭಾರಿ ವಾಹನಗಳು ಹೋಗಬೇಕಾದರೆ ಹೆಣ್ಣೂರು ಕ್ರಾಸ್‌ನಲ್ಲಿ ಬಲ ತಿರುವು ಪಡೆದು ಹೆಣ್ಣೂರು ಮುಖ್ಯರಸ್ತೆ ಮೂಲಕ ಗೆದ್ದಲಹಳ್ಳಿ ರೈಲ್ವೆ ಸೇತುವೆ, ಕೆ.ನಾರಾಯಣಪುರ ಕ್ರಾಸ್‌, ಭೈರತಿ ಕ್ರಾಸ್‌, ಕೊತ್ತನೂರು, ಗುಬ್ಬಿ ಕ್ರಾಸ್‌, ಭೈರತಿ ಬಂಡೆ, ಕಣ್ಣೂರು, ಹೊಸೂರು ಬಂಡೆ, ಬಾಗಲೂರು, ರಜಾಕ್‌ಪಾಳ್ಯ ಕ್ರಾಸ್‌ ಮೂಲಕ ಉತ್ತನಹಳ್ಳಿ, ವಿದ್ಯಾನಗರ ಕ್ರಾಸ್‌ ಮೂಲಕ ಹೋಗಬೇಕಿದೆ.

ಬೆಂಗಳೂರಿಗೆ ಆಗಮನ ಹೇಗೆ?
ದೇವನಹಳ್ಳಿಯಿಂದ ಬೆಂಗಳೂರಿಗೆ ಬರಬೇಕಾದರೆ ಕನ್ನಮಂಗಲ ಗೇಟ್‌, ಯರ್ತಿಗಾನಹಳ್ಳಿ ರೈಲ್ವೆ ಗೇಟ್‌, ಮುತ್ತಗದಹಳ್ಳಿ ಕ್ರಾಸ್‌, ರಜಾಕ್‌ಪಾಳ್ಯ ಕ್ರಾಸ್‌, ಬಾಗಲೂರು, ಹೊಸೂರು ಬಂಡೆ, ಕಣ್ಣೂರು, ಭೈರತಿ ಕ್ರಾಸ್‌, ಗೆದ್ದಲಹಳ್ಳಿ ರೈಲ್ವೆ ಸೇತುವೆ, ಹೆಣ್ಣೂರು ಮುಖ್ಯರಸ್ತೆ ಮಾರ್ಗವಾಗಿ ರಿಂಗ್‌ ರಸ್ತೆ ಮೂಲಕ ಆಗಮಿಸಬೇಕು. ಅದರೊಂದಿಗೆ ಚಿಕ್ಕಜಾಲ ಮೂಲಕ ವಿದ್ಯಾನಗರ ಕ್ರಾಸ್‌ ತಲುಪಿ ಉತ್ತನಹಳ್ಳಿ, ರಜಾಕ್‌ಪಾಳ್ಯ, ಬಾಗಲೂರು, ಹೊಸೂರು ಬಂಡೆ, ಭೈರತಿ ಬಂಡೆ, ಗುಬ್ಬಿ ಕ್ರಾಸ್‌, ಕೊತ್ತನೂರು, ಗೆದ್ದಲಹಳ್ಳಿ ರೈಲ್ವೆ ಬ್ರಿಡ್ಜ್, ಹೆಣ್ಣೂರು ಕ್ರಾಸ್‌ ಮೂಲಕ ರಿಂಗ್‌ ರಸ್ತೆ ತಲುಪಬಹುದೆಂದು ಪೊಲೀಸರು ತಿಳಿಸಿದ್ದಾರೆ.

ಇತರೆ ವಾಹನಗಳು ಬಳ್ಳಾರಿ ರಸ್ತೆ ಸರ್ವೀಸ್‌ ರಸ್ತೆಯಲ್ಲಿರುವ ಆಂಬಿಯನ್ಸ್‌ ಡಾಬಾ ಕ್ರಾಸ್‌ನಿಂದ ಗಂಟಿಗಾನ ಹಳ್ಳಿ ಮುಖ್ಯವೃತ್ತದವರೆಗೆ ಬೆಳಗ್ಗೆ 6ರಿಂದ ಸಂಜೆ 4ರವರೆಗೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಎಪಿಟಿಎಸ್‌ ಕ್ರಾಸ್‌ನಿಂದ ಗಂಟಿಗಾನಹಳ್ಳಿ ಮೂಲಕ ದೊಡ್ಡಬಳ್ಳಾಪುರ ರಸ್ತೆಯ ನಾಗೇನಹಳ್ಳಿ ಕ್ರಾಸ್‌ ಸೇರುವ ರಸ್ತೆಯ ಎರಡೂ ಬದಿ ಸಂಚಾರ ನಿಷೇಧಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನಗಳು ಮೇಲ್ಸೇತುವೆ ಮೂಲಕ ಸಂಚರಿಸಬೇಕಿದೆ.

ವಾಹನ ನಿಲುಗಡೆ ಎಲ್ಲೆಲ್ಲಿ?
ಏರ್‌ ಶೋಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳಲ್ಲಿ 8, 8ಎ, 9 ಮತ್ತು 9ಎ ದ್ವಾರಗಳ ಮೂಲಕ ಪ್ರವೇಶಿಸಿ ಎಡಿವಿಎ ಪ್ರದೇಶದಲ್ಲಿ ನಿಲ್ಲಿಸಬಹುದಾಗಿದೆ. ಏರ್‌ ಶೋ ವಸ್ತು ಪ್ರದರ್ಶನ ವೀಕ್ಷಿಸಲು ಬರುವವರು ಹುಣಸಮಾರನಹಳ್ಳಿ ಬಳಿ ತಿರುವು ಪಡೆದು 5ನೇ ದ್ವಾರದ ಮೂಲಕ ಪ್ರವೇಶಸಿ ಡೊಮೆಸ್ಟಿಕ್‌ ಏರಿಯಾದಲ್ಲಿ ವಾಹನ ನಿಲುಗಡೆ ಮಾಡಬೇಕಿದೆ.

bmtc

ವಿಶೇಷ ಬಸ್ ಗಳು

ಏರ್‌ ಶೋಗೆ ತೆರಳಲು ಬಿಎಂಟಿಸಿ ಹೆಚ್ಚುವರಿ ಬಸ್ ಗಳನ್ನು ಬಿಡಲಿದೆ. ಜನರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್‌ಗಳು 8, 8ಎ, 9 ಮತ್ತು 9ಎ ದ್ವಾರಗಳ ಬಳಿಯೇ ನಿಲ್ಲಲ್ಲಿವೆ. ಅಲ್ಲದೇ ಪ್ರದರ್ಶನದ ದಿನಗಳಲ್ಲಿ ಬೀದಿ ಬದಿಯ ವ್ಯಾಪಾರ ಮತ್ತು ಬಳ್ಳಾರಿ ರಸ್ತೆಯಲ್ಲಿ ವಾಃನ ನಿಲುಗಡೆಯನ್ನು ನಿಷೇಧಿಸಲಾಗಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+