Traffic Alert: ಬೆಂಗಳೂರು ಹೊರ ವರ್ತುಲ ಸವಾರರೇ ಗಮನಿಸಿ, ರಸ್ತೆ ಸಂಚಾರ ನಿರ್ಬಂಧ
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮದಿಂದ ಹೊರ ವರ್ತುಲ ರಸ್ತೆ ವ್ಯಾಪ್ತಿಯಲ್ಲಿ ನೀಲಿ ಮಾರ್ಗದ ಕಾಮಗಾರಿ ಬರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ವರ್ತೂರು ಮುಖ್ಯ ರಸ್ತೆ ಮಾರತ್ತಹಳ್ಳಿ ಸೇತುವೆಯಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಮೂರು ಗಂಟೆಗಳ ಕಾಲ ವಾಹನಗಳಿಗೆ ತಾತ್ಕಾಲಿಕ ಸಂಚಾರ ನಿರ್ಬಂಧ ವಿಧಿಸಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಇದರಿಂದ ಈ ಭಾಗದಲ್ಲಿ ನಿತ್ಯ ಸಂಚಾರ ಮಾಡುತ್ತಿದ್ದ ಐಟಿ ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟು ಮಾಡಿದೆ.
ಎಚ್ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಇದೇ ಮಾರ್ಚ್ 27 ರಿಂದ ಮಾರ್ಚ್ 29 ರವರೆಗೆ ಬೆಳಗ್ಗೆ 12 ರಿಂದ ಬೆಳಗ್ಗೆ 3 ರವರೆಗೆ ಮೂರು ದಿನಗಳವರೆಗೆ ವಾಹನ ಸಂಚಾರವನ್ನು ಈ ಭಾಗದ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ವಾಹನ ಸವಾರರು ಮಾರತ್ತಹಳ್ಳಿ ಸೇತುವೆ ಮೂಲಕ ಎಚ್ಎಎಲ್ ಮತ್ತು ವರ್ತೂರು/ವೈಟ್ಫೀಲ್ಡ್ ನಡುವೆ ಪ್ರಯಾಣಿಸುವ ಎಲ್ಲಾ ವಾಹನಗಳಿಗೆ ಅವಕಾಶ ಇರುವುದಿಲ್ಲ. ಆದ್ದರಿಂದ ಸಂಚಾರಿ ಪೊಲೀಸರು ನೀಡಿರುವ ಪರ್ಯಾಯ ಮಾರ್ಗಗಳನ್ನು ಗಮನಿಸಿ ಓಡಾಡುವಂತೆ ಕೋರಲಾಗಿದೆ.

ಪರ್ಯಾಯ ಮಾರ್ಗಗಳು
ಎಚ್ಎಎಲ್ನಿಂದ ವರ್ತೂರು/ವೈಟ್ಫೀಲ್ಡ್ ಕಡೆಗೆ ಹೋಗುವ ವಾಹನಗಳು ದೊಡ್ಡನೆಕುಂಡಿ ಜಂಕ್ಷನ್, ಕಾರ್ತಿಕ್ ನಗರ ಜಂಕ್ಷನ್ ಮತ್ತು ಹೊರ ವರ್ತುಲ ರಸ್ತೆ ಮೂಲಕ ಸಾಗಬೇಕು. ಅಲ್ಲಿಂದ ಮುಂದೆ ಕುಂದಲಹಳ್ಳಿ ಹಾಗೂ ಗ್ರಾಫೈಟ್ ರಸ್ತೆ ಮೂಲಕ ಮತ್ತೆ ಮುಖ್ಯ ರಸ್ತೆಗೆ ಸಂಪರ್ಕಿಸಲಾಗುತ್ತದೆ. ವರ್ತೂರು/ವೈಟ್ಫೀಲ್ಡ್ನಿಂದ ಎಚ್ಎಎಲ್ ಕಡೆಗೆ ಹೋಗುವವರು ಕುಂದಲಹಳ್ಳಿ, ಆಲ್ಫೈನ್ ಇಕೋ ರಸ್ತೆ ಮತ್ತು ದೊಡ್ಡನೆಕ್ಕುಂಡಿ ಮೂಲಕ ತಿರುಗಿಸಲಾಗಿದೆ.
ಎಚ್ಎಎಲ್ ಕಡೆಗೆ ಹೋಗುವ ವಾಹನ ಸವಾರರಿಗೆ ವಿಬ್ಗಯಾರ್ ಜಂಕ್ಷನ್, ಬಳಗೆರೆ ಮುಖ್ಯ ರಸ್ತೆ ಮತ್ತು ಕಾಡುಬೀಸನಹಳ್ಳಿ ಜಂಕ್ಷನ್ ಮೂಲಕ ಹೆಚ್ಚುವರಿ ಮಾರ್ಗ ಬದಲಾವಣೆ ಮೂಲಕ ವಾಹನ ಸವಾರರು ಸಾಗಬೇಕೆಂದು ಎಚ್ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಸೋಮವಾರ ಅಥವಾ ಮಂಗಳವಾರದಿಂದ ಎಂದಿನಂತೆ ಮಾರತ್ತಹಳ್ಳಿ, ಕಾಡು ಬೀಸನಹಳ್ಳಿ ವ್ಯಾಪ್ತಿಯಲ್ಲಿ ಸಂಚಾರ ಸುಗಮವಾಗಲಿದೆ ಎಂಬ ಭರವಸೆ ಇದೆ.
ಮುಂದಿನ ವರ್ಷ ORR ಕಿರಿಕಿರಿ ಮುಕ್ತ
ಬೆಂಗಳೂರು ಮೆಟ್ರೋ ರೈಲು ನಿಗಮ ವತಿಯಿಂದ ಸಿಲ್ಕ್ಬೋರ್ಡ್ನಿಂದ ಕೆ.ಆರ್.ಪುರಂವರೆಗೆ ಮೆಟ್ರೋ ಲೈನ್ ಕೆಲಸ ಹಗಲು ರಾತ್ರಿ ನಡೆಯುತ್ತಿದೆ. ಇದರಿಂದ ಹೊರ ವರ್ತುಲ ರಸ್ತೆ ಮುಖೇನ ಸಾಗುವ ವಾಹನ ಸವಾರರಿಗೆ ಆಗಾಗ ತೊಂದರೆ ಆಗುತ್ತಲೇ ಇದೆ. ಇನ್ನೊಂದು ವರ್ಷದವದಲ್ಲಿ ಯೋಜನೆ ಪೂರ್ಣಗೊಳ್ಳಲಿದ್ದು, ಆಗ ಇಂತಹ ಕಿರಿಕಿರಿ ದಟ್ಟಣೆ ಇರುವುದಿಲ್ಲ.
-
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Bengaluru Metro: ORR ರಸ್ತೆಯ ನೀಲಿ ಮಾರ್ಗದಲ್ಲಿ ಸಂಯೋಜಿತ ಗರ್ಡರ್ ಸ್ಥಾಪನೆ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
RCB: ಆರ್ ಸಿಬಿ ತಂಡದ ಅಧಿಕೃತ ಪೇಮೆಂಟ್ಸ್ ಪಾಲುದಾರ ನವಿ ಯುಪಿಐ, ಫ್ಯಾನ್ಸ್ ಗಮನಿಸಿ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ













Click it and Unblock the Notifications