Traffic Advisory: ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ ಇರಲ್ಲ!
Traffic Advisory: ಗೌರಿ - ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಹಾಗೂ ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ಹೀಗಾಗಿ ಇಂದು - ನಾಳೆ ನೀವು ಈ ಮಾರ್ಗಗಳಲ್ಲಿ ಪ್ರಯಾಣಿಸುವುದಿದ್ದರೆ, ಮೊದಲೇ ನೋಡಿಕೊಳ್ಳಿ. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ಗಣೇಶ ಮೂರ್ತಿ ವಿಸರ್ಜನೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಸಂಚಾರ ಮಾರ್ಗ ಬದಲಾವಣೆಯ ಜೊತೆಗೆ ನಗರದ ಪ್ರಮುಖ ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯಲ್ಲೂ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಹಲಸೂರು ಕೆರೆಯ ಮುಖ್ಯದ್ವಾರ, ಕೆನ್ಸಿಂಗ್‌ಟನ್ ರಸ್ತೆ, ಅಣ್ಣಸ್ವಾಮಿ ಮೊದಲಿಯಾರ್ ರಸ್ತೆ ಹಾಗೂ ಟ್ಯಾಂಕ್ ರಸ್ತೆಗಳಲ್ಲಿ ಸೆಪ್ಟೆಂಬರ್ 7ರಿಂದ ಸೆಪ್ಟೆಂಬರ್ 9 ವರೆಗೆ ಪಾರ್ಕಿಂಗ್ ನಿಷೇಧಿಸಲಾಗಿದೆ. ಅಲ್ಲದೇ ಈ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವುದಾಗಿ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಈ ಮಾರ್ಗದಲ್ಲಿ ಸಂಚಾರ ನಿರ್ಬಂಧ
Traffic diversion in Bengaluru: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಇರಲಿದೆ. ಅದರಲ್ಲಿ ಮುಖ್ಯವಾಗಿ ಕೆನ್ಸಿಂಗ್‌ಟನ್ ಮತ್ತು ಮರ್ಫೀ ರಸ್ತೆ ಜಂಕ್ಷನ್ ಮಾರ್ಗವಾಗಿ ಎಂ.ಇ.ಜಿಯಿಂದ - ಹಲಸೂರು ಕೆರೆಯ ಕಡೆಗೆ ಹಾಗೂ ಕೆನ್ಸಿಂಗ್‌ಟನ್ ರಸ್ತೆಗಳಲ್ಲಿ ದ್ವಿಮುಖ ಟ್ರಾಫಿಕ್ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಹೀಗಾಗಿ, ಎಂಇಜಿ ಮಾರ್ಗವಾಗಿ ಕನ್ನಿಂಗ್‌ಟನ್-ಮರ್ಫೀ ರಸ್ತೆ ಜಂಕ್ಷನ್ ಕಡೆಗೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಇರಲಿದೆ.
ತಿರುವಳ್ಳವರ್ ಪ್ರತಿಮೆ ಜಂಕ್ಷನ್-ಅಣ್ಣಸ್ವಾಮಿ ಮೊದಲಿಯಾರ್ ರಸ್ತೆ ಮಾರ್ಗವಾಗಿ ಆರ್.ಬಿ.ಐ ಜಂಕ್ಷನ್ ಮೂಲಕ ಹಲಸೂರು ಲೇಕ್ ಕಡೆಗೆ ಅಣ್ಣಸ್ವಾಮಿ ಮೊದಲಿಯಾರ್ ರಸ್ತೆ ಮಾರ್ಗದಲ್ಲಿ ದ್ವಿಮುಖ ಪ್ರಯಾಣವನ್ನು (ಸಂಚಾರ) ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಹಲಸೂರು ಕೆರೆಯ ಮಾರ್ಗವಾಗಿ ತಿರುವಳ್ಳವರ್ ಪ್ರತಿಮೆ ಜಂಕ್ಷನ್ ಕಡೆಗೆ ವಿಮುಖ ಸಂಚಾರಕ್ಕೆ ಅವಕಾಶ ಇರಲಿದೆ.
ಈ ರಸ್ತೆಗಳಲ್ಲಿ ಮಾರ್ಗ ಬದಲಾವಣೆ
ಬೆಂಗಳೂರಿನ ಪ್ರಮುಖ ಭಾಗದಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿರುವುದಾಗಿ ಟ್ರಾಫಿಕ್ ಪೊಲೀಸರು ಸೋಷಿಯಲ್ ಮೀಡಿಯಾ ಎಕ್ಸ್‌ನ ಮೂಲಕ ತಿಳಿಸಿದ್ದಾರೆ. ಕೆನ್ಸಿಂಗ್‌ಟನ್ ರಸ್ತೆ ಮಾರ್ಗವಾಗಿ ಎಂ.ಇ.ಜಿ ಮೂಲಕ-ಹಲಸೂರು ಕೆರೆಯ ಕಡೆಗೆ ಹೋಗುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರ ಬದಲಾಗಿ ಕೆನ್ಸಿಂಗ್‌ಟನ್‌ನಿಂದ ಗುರದ್ವಾರ ಜಂಕ್ಷನ್ ಬಲ ತಿರುವು - ಗಂಗಾಧರ ಚೆಟ್ಟಿ ರಸ್ತೆ ಡಿಕನ್‌ಸನ್ ರಸ್ತೆ ಬಲ ತಿರುವು- ಸೆಂಟ್ ಜಾನ್ಸ್ ರಸ್ತೆ - ಶ್ರೀ ಸರ್ಕಲ್ ಲಾವಣ್ಯ ಚಿತ್ರಮಂದಿರ ಜಂಕ್ಷನ್- ನಾಗಾ ಜಂಕ್ಷನ್ ಮೂಲಕ ಪುಲಕೇಶಿನಗರ - ಪ್ರಾಮಿನೇಡ್ ರಸ್ತೆ-ವೀರ ರಸ್ತೆ ಇಲ್ಲವೇ ಹಲಸೂರು ಕೆರೆ ಮಾರ್ಗವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
#ಸಂಚಾರಸಲಹೆ#TrafficAdvisory @DgpKarnataka @KarnatakaCops @CPBlr @Jointcptraffic @BlrCityPolice @blrcitytraffic @acpeasttraffic @acpwfieldtrf @DCPTrNorthBCP @DCPTrWestBCP @ftowntrfps @kghallitrfps @bwaditrafficps @snagartrps pic.twitter.com/ObtW1AnwW5
— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP) September 5, 2024
ಇನ್ನು ತಿರುವಳ್ಳವರ್ ಪ್ರತಿಮೆ ಜಂಕ್ಷನ್-ಅಣ್ಣಸ್ವಾಮಿ ಮೊದಾಲಿಯಾರ್ ರಸ್ತೆ ಮಾರ್ಗವಾಗಿ ಹಲಸೂರು ಲೇಕ್ ಮಾರ್ಗವಾಗಿ ಸಂಚಾರ ಮಾಡುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಮಾರ್ಗವಾಗಿ ಸಾಗುವ ವಾಹನಗಳು ಗಂಗಾಧರ್ ಚೆಟ್ಟಿ ರಸ್ತೆಯ ಮಾರ್ಗವಾಗಿ ಸಾಗಿ ಮುಂದೆ ಆರ್.ಬಿ.ಎನ್.ಎಂ.ಎಸ್ ಬಳಿ ಎಡತಿರುವು ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ಡಿಕೆ ರಸ್ತೆಯ ಮೂಲಕ ಸೇಂಟ್ ಜಾನ್ಸ್ ರಸ್ತೆ ತಲುಪಿ ಸೇಟ್ ಚಾನ್ಸ್ ರಸ್ತೆ - ಶ್ರೀ ಸರ್ಕಲ್ - ಲಾವಣ್ಯ ಚಿತ್ರಮಂದಿರ ಜಂಕ್ಷನ್- ನಾಗಾ ಜಂಕ್ಷನ್ ಮಾರ್ಗವಾಗಿ ಪುಲಕೇಶಿನಗರ, ಮಿಲ್ಲರ ರಸ್ತೆ ಮಾರ್ಗ ಇಲ್ಲವೇ ಹಲಸೂರು ಕೆರೆ ಡೈವರ್ಶನ್ ತೆಗೆದುಕೊಳ್ಳಬಹುದಾಗಿದೆ.
40 ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿ ವಿಸರ್ಜನೆ
ಪುಲಕೇಶಿನಗರದ ಹಲಸೂರು ಕೆರೆಯ ಕಲ್ಯಾಣಿಯಲ್ಲಿ ಸೆಪ್ಟೆಂಬರ್ 7ರಿಂದ ಸೆಪ್ಟೆಂಬರ್ 9ರ ವರೆಗೆ ಬೆಂಗಳೂರಿನ ವಿವಿಧ ಭಾಗದಲ್ಲಿ ಅಂದಾಜು 40,000 ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗುತ್ತದೆ. ಹೀಗಾಗಿ, ಈ ಭಾಗದಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಹಲಸೂರು ಕೆರೆಯ ಸುತ್ತಮುತ್ತ ಸಂಜೆ 4 ಗಂಟೆಯಿಂದ ಮುಂದಿನ ದಿನದ ಮುಂಜಾನೆ 4 ಗಂಟೆಯವರೆಗೆ ಸಂಚಾರ ನಿರ್ಬಂಧಿಸಲಾಗಿರುತ್ತದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications