ಚಿಕ್ಕಪೇಟೆ ವ್ಯಾಪಾರಿಗಳಿಂದ ಸರ್ಕಾರಕ್ಕೆ ಹೊಸ ಬೇಡಿಕೆ
ಬೆಂಗಳೂರು, ಜುಲೈ 19 : ಬೆಂಗಳೂರು ನಗರದಲ್ಲಿ ಪ್ರಮುಖ ವ್ಯಾಪಾರ ವಹಿವಾಟು ನಡೆಯುವ ಸ್ಥಳಗಳಲ್ಲಿ ಚಿಕ್ಕಪೇಟೆಯೂ ಒಂದು. ಕೊರೊನಾ ಹರಡುವಿಕೆ ತಡೆಯಲು ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರು.
Recommended Video
ಈಗ ಚಿಕ್ಕಪೇಟೆಯ ವ್ಯಾಪಾರಿಗಳ ಸಂಘ ಕರ್ನಾಟಕದ ಸರ್ಕಾರದ ಮುಂದೆ ಹೊಸ ಬೇಡಿಕೆ ಇಟ್ಟಿದೆ. ಕೊರೊನಾ ಹರಡುವಿಕೆ ತಡೆಯಲು ಬೆಂಗಳೂರು ನಗರವನ್ನು ಲಾಕ್ ಡೌನ್ ಮಾಡಲಾಗಿದೆ. ಈಗ ಚಿಕ್ಕಪೇಟೆಯಲ್ಲಿ ಅನ್ ಲಾಕ್ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ.
ಲಾಕ್ ಡೌನ್‌ನಿಂದಾಗಿ ಚಿಕ್ಕಪೇಟೆಯ ಸುಮಾರು 15 ಸಾವಿರ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಲ್ಲಿ ಅನೇಕರು ಡೀಲರ್‌ಗಳಾಗಿದ್ದು, ನಗರದ ಇತರ ಪ್ರದೇಶಗಳಿಗೆ ವಸ್ತುಗಳನ್ನು ಸರಬರಾಜು ಮಾಡುವವರು ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಚಿಕ್ಕಪೇಟೆಯಲ್ಲಿ ಲಾಕ್ ಡೌನ್ ಮುಂದುವರೆಸಿದರೆ ವ್ಯಾಪಾರಿಗಳಿಗೆ ಮಾತ್ರ ನಷ್ಟವಾಗುವುದಿಲ್ಲ. ಸರ್ಕಾರಕ್ಕೂ ನಷ್ಟವಾಗಲಿದೆ, ಅತಿ ಹೆಚ್ಚು ತೆರಿಗೆಯನ್ನು ಪಾವತಿ ಮಾಡುವ ಪ್ರದೇಶವಿದಾಗಿದೆ. ಆದ್ದರಿಂದ, ವಿನಾಯಿತಿ ನೀಡಬೇಕು ಎಂದು ಮನವಿ ಮಾಡಲಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಜುಲೈ 22ರಿಂದ ಚಿಕ್ಕಪೇಟೆಗೆ ಲಾಕ್ ಡೌನ್‌ನಿಂದ ವಿನಾಯಿತಿ ನೀಡಬೇಕು. ಡೀಲರ್‌ಗಳು ಅಂಗಡಿ ಬಾಗಿಲು ಹಾಕಿಕೊಂಡರೆ ಉಳಿದ ಉದ್ಯಮಗಳಿಗೆ ವಸ್ತುಗಳು ಸರಬರಾಜು ಆಗುವುದಿಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಪ್ರಸ್ತುತ ಕರ್ನಾಟಕ ಸರ್ಕಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಘೋಷಣೆ ಮಾಡಿರುವ ಲಾಕ್ ಡೌನ್ ಜೂನ್ 22ರ ಬುಧವಾರದ ತನಕ ಇದೆ. ಬಳಿಕ ಲಾಕ್ ಡೌನ್ ವಿಸ್ತರಣೆ ಮಾಡುವುದಿಲ್ಲ ಎಂದು ಸಚಿವ ಆರ್. ಅಶೋಕ ಹೇಳಿದ್ದಾರೆ.











Click it and Unblock the Notifications