ಬೆಂಗಳೂರು ಗ್ರಾಮಾಂತರ; ಒಟ್ಟು, ಯುವ ಮತದಾರರು

ಬೆಂಗಳೂರು, ಮೇ 01; ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನಕ್ಕೆ 9 ದಿನಗಳು ಬಾಕಿ ಇದೆ. ಚುನಾವಣಾ ಆಯೋಗ ಮೇ 10ರಂದು ನಡೆಯುವ ಮತದಾನಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತವು ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ಜಿಲ್ಲೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್. ಲತಾ ಚುನಾವಣಾ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಹೊಸಕೋಟೆ, ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಿವೆ. ಚುನಾವಣಾ ಕಣದಲ್ಲಿ ಒಟ್ಟು 56 ಅಭ್ಯರ್ಥಿಗಳಿದ್ದಾರೆ. ಇವರಲ್ಲಿ 50 ಪುರುಷರು ಹಾಗೂ 6 ಮಹಿಳೆಯರು. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 23, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 11, ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ 12, ನೆಲಮಂಗಲದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Total Voters And Youth Voters In Bengaluru Rural

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು ಮತದಾರರು 8,77,890. ಇವರಲ್ಲಿ 4,35,835 ಪುರುಷ ಮತದಾರರು, 4,41,907 ಮಹಿಳಾ ಮತದಾರರು ಹಾಗೂ 148 ಇತರೆ ಮತದಾರರು. ಜಿಲ್ಲೆಯಲ್ಲಿ ಒಟ್ಟು 24713 ಯುವ ಮತದಾರರು ಇದ್ದಾರೆ. 13126 ಪುರುಷರು, 11584 ಮಹಿಳೆಯರು ಹಾಗೂ ಮೂವರು ಇತರರು. ಒಟ್ಟು 130 ಸೇವಾ ಮತದಾರರು. 124 ಪುರುಷ ಮತದಾರರು ಹಾಗೂ 6 ಮಹಿಳೆಯರು.

ಕ್ಷೇತ್ರವಾರು ಮತದಾರರ ಮಾಹಿತಿ; ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 1,16,252 ಪುರುಷ ಮತದಾರರು, 1,17,805 ಮಹಿಳಾ ಮತದಾರರು ಹಾಗೂ 22 ಇತರೆ ಮತದಾರರು ಸೇರಿ ಒಟ್ಟು 2,34,079 ಮತದಾರರು ಇದ್ದಾರೆ. 4304 ಪುರುಷ ಹಾಗೂ 3920 ಮಹಿಳಾ ಯುವ ಮತದಾರರು.

Total Voters And Youth Voters In Bengaluru Rural

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 1,05,520 ಪುರುಷ ಮತದಾರರು, 1,06,646 ಮಹಿಳಾ ಮತದಾರರು ಹಾಗೂ 19 ಇತರೆ ಮತದಾರರು ಸೇರಿದಂತೆ ಒಟ್ಟು 2,12,185 ಮತದಾರರು. 2872 ಪುರುಷ, 2450 ಮಹಿಳೆ ಹಾಗೂ ಒಬ್ಬರು ಇತರೆ ಯುವ ಮತದಾರರಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ 1,06,621 ಪುರುಷ ಮತದಾರರು, 1,07,559 ಮಹಿಳಾ ಮತದಾರರು ಹಾಗೂ 2 ಇತರೆ ಮತದಾರರು ಸೇರಿದಂತೆ ಒಟ್ಟು 2,14,182, ಮತದಾರರು ಇದ್ದಾರೆ. 3269 ಪುರುಷ ಹಾಗೂ 2828 ಮಹಿಳಾ ಯುವ ಮತದಾರರು.

ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 1,07,442 ಪುರುಷ ಮತದಾರರು, 1,09,897 ಮಹಿಳಾ ಮತದಾರರು ಹಾಗೂ 105 ಇತರೆ ಮತದಾರರು ಸೇರಿದಂತೆ ಒಟ್ಟು 2,17,444 ಮತದಾರರು ಇದ್ದಾರೆ. 2681 ಪುರುಷ , 2386 ಮಹಿಳೆ ಹಾಗೂ ಇಬ್ಬರು ಇತರೆ ಯುವ ಮತದಾರರಿದ್ದಾರೆ.

ಮತಗಟ್ಟೆಗಳು; ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟಾರೆ 1137 ಮತಗಟ್ಟೆಗಳಿವೆ. ನಗರ ಪ್ರದೇಶದಲ್ಲಿ 879 ಹಾಗೂ ಗ್ರಾಮೀಣ ಪ್ರದೇಶದಲ್ಲಿ 258 ಮತಗಟ್ಟೆಗಳು. ಹೊಸಕೋಟೆ ಕ್ಷೇತ್ರದ ವ್ಯಾಪ್ತಿಯಲ್ಲಿ 293, ದೇವನಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿ 292, ದೊಡ್ಡಬಳ್ಳಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿ 276 ಮತಗಟ್ಟೆ, ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 276 ಮತಗಟ್ಟೆಗಳಿವೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ರಂತೆ 20 ಮಹಿಳಾ (ಸಖಿ) ಮತಗಟ್ಟೆಗಳು, 4 ವಿಕಲಚೇತನ ಮತಗಟ್ಟೆ, 4 ಯುವ ನೌಕರರ ಮತಗಟ್ಟೆ, 4 ಸಾಂಪ್ರದಾಯಿಕ ಮತಗಟ್ಟೆ ಹಾಗೂ 8 ಮಾದರಿ ಮತಗಟ್ಟೆಗಳಿವೆ. ಜಿಲ್ಲೆಯ 1137 ಮತಗಟ್ಟೆಗಳಿಗೆ 1470 ಪಿಆರ್‌ಓ, 1499 ಎಪಿಆರ್‌ಓ, 2929 ಹಾಗೂ 285 ಮೈಕ್ರೋ ಅಬ್ಸರ್ವರ್ಸ್‌ಗಳನ್ನು ನೇಮಿಸಲಾಗಿದೆ.

ಮೇ 10 ರಂದು ಮತದಾನ ಪ್ರಕ್ರಿಯೆ ಮುಗಿದ ನಂತರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭದ್ರತಾ ಕೊಠಡಿಗಳನ್ನು ಹಾಗೂ ಮತ ಎಣಿಕಾ ಕೊಠಡಿಗಳನ್ನು ದೇವನಹಳ್ಳಿ ತಾಲ್ಲೂಕಿನ ಪ್ರಸನ್ನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ನಿಗದಿಪಡಿಸಲಾಗಿದೆ.

ಮತ ಎಣಿಕಾ ಕೇಂದ್ರದಲ್ಲಿ ಮತ ಎಣಿಕಾ ಕೊಠಡಿಗಳು ಹಾಗೂ ಭದ್ರತಾ ಕೊಠಡಿಗಳನ್ನು ಸಿದ್ಧಪಡಿಸುವಿಕೆಯ ಕಾರ್ಯ ಪ್ರಗತಿಯಲ್ಲಿದೆ. ಮತದಾನ ಮುಗಿದ ನಂತರ ವಿಧಾನಸಭಾ ಕ್ಷೇತ್ರದಿಂದ ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕಾ ಕೇಂದ್ರದಲ್ಲಿ ಮತದಾನ ಆಗಿರುವ ಇವಿಎಂ ಹಾಗೂ ವಿವಿ ಪ್ಯಾಟ್‌ಗಳನ್ನು ಆಯಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ವಿಧಾನಸಭಾ ಕ್ಷೇತ್ರವಾರು ನಿಗದಿಪಡಿಸಿರುವ ಭದ್ರತಾ ಕೊಠಡಿಯಲ್ಲಿ ಇಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+