ಏಕಾಏಕಿ ಟೊಮ್ಯಾಟೊ ಬೆಲೆ ಭಾರೀ ಏರಿಕೆ: ಪ್ರತಿ ಕೆ.ಜಿಗೆ ಎಷ್ಟಿದೆ ಇಲ್ಲಿದೆ ಮಾಹಿತಿ!
Tomato Prices: ದೇಶದಾದ್ಯಂತ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಟೊಮ್ಯಾಟೊ ಬೆಲೆ ಭಾರೀ ಏರಿಕೆ ಕಂಡಿದೆ. ರಾಜ್ಯದಲ್ಲಿ ಕಳೆದ ವರ್ಷ ಟೊಮ್ಯಾಟೊ ಬೆಲೆ ಭಾರೀ ಏರಿಕೆ ಕಂಡಿತ್ತು. ಇದೀಗ ಮತ್ತೆ ಬೆಂಗಳೂರು ಸೇರಿದಂತೆ ವಿವಿಧ ಭಾಗದಲ್ಲಿ ಟೊಮ್ಯಾಟೊ ಬೆಲೆ ಮತ್ತೆ ಹೆಚ್ಚಳವಾಗಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಭಾರೀ ಹೆಚ್ಚಳವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಉತ್ತರ ಭಾರತದ ವಿವಿಧ ಭಾಗದಲ್ಲಿ ಟೊಮ್ಯಾಟೋಗೆ ಬೇಡಿಕೆ ಹೆಚ್ಚಾಗಿದೆ. ಹವಾಮಾನ ವೈಪರೀತ್ಯದಿಂದ ಟೊಮ್ಯಾಟೊ ಇಳುವರಿ ಕಡಿಮೆಯಾಗಿದ್ದು ಇದರಿಂದ ಕರ್ನಾಟಕದ ಟೊಮ್ಯಾಟೊಗೆ ಡಿಮ್ಯಾಂಡ್ ಹೆಚ್ಚಳವಾಗಿದೆ. ಕಳೆದ ಒಂದು ವಾರ ಹತ್ತು ದಿನಗಳಿಂದ ಸಾಧಾರಣ ಬೆಲೆ ಹೊಂದಿದ್ದ 15 ಕೆ.ಜೆ ಟೊಮ್ಯಾಟೊ ಇದೀಗ ಪ್ರತಿ ಬಾಕ್ಸ್‌ಗೆ ಬರೋಬ್ಬರಿ 700 ರೂಪಾಯಿಯಿಂದ 800 ರೂಪಾಯಿಗೆ ಹೆಚ್ಚಳವಾಗಿದೆ. ಇದೀಗ ರೈತರಿಗೆ ಟೊಮ್ಯಾಟೊ ಬೆಲೆ ಹೆಚ್ಚಳವು ಹೊಸ ಉತ್ಸಾಹವನ್ನು ಮೂಡಿಸಿದೆ. ಟೊಮ್ಯಾಟೊ ಬೆಲೆ ಹೆಚ್ಚಳದಿಂದಾಗಿ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದೆ.

ಟೊಮ್ಯಾಟೊ ಬೆಲೆ ಕಳೆದ ವರ್ಷ 100 ರೂಪಾಯಿ ಗಡಿದಾಟಿತ್ತು. ಇದೀಗ ಮತ್ತೆ ಜುಲೈ ತಿಂಗಳ ಅಂತ್ಯದಲ್ಲಿ ಕಳೆದ ವರ್ಷದಂತೆಯೇ ಟೊಮ್ಯಾಟೊ ಬೆಲೆ ಏರಿಕೆ ಕಂಡಿದೆ. ದೇಶದಾದ್ಯಂತ ಮುಂಗಾರು ಮಳೆ ಚುರುಕು ಪಡೆದುಕೊಂಡಿದ್ದು. ವಾಯುಭಾರ ಕುಸಿತವೂ ಸೇರಿದಂತೆ ಹಲವು ಕಾರಣಕ್ಕೆ ಭಾರೀ ಮಳೆ ಆಗುತ್ತಿದೆ. ಇದರಿಂದ ಪರೋಕ್ಷವಾಗಿ ಟೊಮ್ಯಾಟೊ ಬೆಲೆ ಹೆಚ್ಚಳವಾಗಿದೆ. ಉತ್ತರ ಭಾರತದ ವಿವಿಧ ರಾಜ್ಯದಲ್ಲಿ ಮಳೆ ಆಗುತ್ತಿದೆ. ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಹಲವೆಡೆ ಭಾರೀ ಮಳೆ ಆಗುತ್ತಿದೆ. ಇದರಿಂದ ಕರ್ನಾಟಕದ ರೈತರಿಗೆ ಲಾಭವಾಗಿದೆ ಎಂದು Tv9 ವರದಿ ಮಾಡಿದೆ.
ಟೊಮ್ಯಾಟೊ ಬೆಲೆ ಹೆಚ್ಚಳ ಸಾಧ್ಯತೆ: ಮುಂದಿನ ದಿನಗಳಲ್ಲಿ ಟೊಮ್ಯಾಟೊ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಬಾಕ್ಸ್‌ಗೆ ಮುಂದಿನ ಎರಡು ವಾರದ ಅವಧಿಯಲ್ಲಿ 1,000 ಸಾವಿರ ರೂಪಾಯಿ ಗಡಿದಾಟುವ ಸಾಧ್ಯತೆ ಇದೆ. ಟೊಮ್ಯಾಟೊ ಬೆಲೆ ಹೆಚ್ಚಳವಾಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆಯಾದರೂ. ಗ್ರಾಹಕರಿಗೆ ಇನ್ನಷ್ಟು ಬೆಲೆ ಹೆಚ್ಚಳವಾಗಲಿದೆಯೇ ಎನ್ನುವ ಆತಂಕ ಶುರುವಾಗಿದೆ. ಈಗಾಗಲೇ ಕೆಲವು ಭಾಗದಲ್ಲಿ ಪ್ರತಿ ಕೆ.ಜಿ ಟೊಮೊಟೊ ಬೆಲೆ 100 ರೂಪಾಯಿ ಗಡಿ ದಾಟಿದೆ.
ಹವಾಮಾನ ವೈರೀತ್ಯ ಕಾರಣ: ಹವಾಮಾನ ವೈಪರೀತ್ಯದಿಂದ ಟೊಮೊಟೊ ಸೇರಿದಂತೆ ವಿವಿಧ ತರಕಾರಿಗಳ ಬೆಲೆ ಗಗನಮುಖಿಯಾಗಿದೆ. ಕರ್ನಾಟಕದ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆಯಾದರೂ. ಬೆಂಗಳೂರಿನಲ್ಲಿ ಸಾಧಾರಣ ಮಳೆ ಆಗುತ್ತಿದೆ.












Click it and Unblock the Notifications