ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆ.4ರಿಂದ 6ರವರೆಗೆ ವಿದ್ಯುತ್ ವ್ಯತ್ಯಯ
ಬೆಂಗಳೂರು, ಫೆಬ್ರವರಿ 3: ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಗೆ, ವಿಪರೀತ ಚಳಿ ಹಾಗೂ ಶೀತಗಾಳಿಗೆ ಹೈರಾಣಾಗಿ ಹೋಗಿದ್ದಾರೆ. ಇದರ ನಡುವೆ ನಗರದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಕಾಮಗಾರಿಗಳ ಹೆಸರಿನಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದೆ.
ಈಗ ಮತ್ತೆ ಫೆಬ್ರವರಿ 4(ಶುಕ್ರವಾರ) ರಿಂದ ಫೆಬ್ರವರಿ 6(ಭಾನುವಾರ)ರವರೆಗೆ ಬೆಂಗಳೂರಿನಾದ್ಯಂತ ಹಲವಾರು ಪ್ರದೇಶಗಳು ವಿದ್ಯುತ್ ವ್ಯತ್ಯಯವನ್ನು ಎದುರಿಸಲಿವೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ನಿರ್ವಹಣೆ ಮತ್ತು ಇತರ ಉನ್ನತೀಕರಣ ಕಾರ್ಯಗಳಿಂದಾಗಿ ವಿದ್ಯುತ್ ಕಡಿತ ಉಂಟಾಗುತ್ತದೆ. ಹೀಗಾಗಿ ನಗರದ ಯಾವ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಇರಲಿದೆ ಎಂಬ ಮಾಹಿತಿ ಇಲ್ಲಿದೆ.
ಫೆಬ್ರವರಿ 4ರಂದು ವಿದ್ಯುತ್ ವ್ಯತ್ಯಯದ ಪ್ರದೇಶಗಳು
ಬೆಂಗಳೂರಿನ ದಕ್ಷಿಣ ವಲಯದಲ್ಲಿ ಶುಕ್ರವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಜಯನಗರ 4ನೇ ಬ್ಲಾಕ್, ವಿನಾಯಕನಗರ, ನಂಜಪ್ಪ ಸರ್ಕಲ್, ಗೌಡನಪಾಳ್ಯ, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಬ ನಗರ, ಕುವೆಂಪು ನಗರ ಮುಖ್ಯರಸ್ತೆ, ವಸಂತಪುರ, ಜೆಪಿ ನಗರ 6ನೇ ಹಂತ, ಪುಟ್ಟೇನಹಳ್ಳಿ ಭಾಗಗಳು, ಬನಶಂಕರಿ 2ನೇ ಹಂತ, ಜೆಪಿ ನಗರ 2ನೇ ಹಂತ, ಜೆ.ಪಿ. ನಗರ 3ನೇ ಹಂತ, ಜೆಪಿ ನಗರ 4ನೇ ಹಂತ, ಜೆಪಿ ನಗರ 5ನೇ ಹಂತ, ಡಾಲರ್ಸ್ ಲೇಔಟ್, ಇಟ್ಟಮಡು, ಬನಶಂಕರಿ 5ನೇ ಹಂತ, ವಿವೇಕ್ ನಗರ, ನಾಗಸಂದ್ರ, ಕೆಇಬಿ ಲೇಔಟ್, ಕುಂದಲಹಳ್ಳಿ ಗ್ರಾಮ, ಐಟಿಪಿಎಲ್ ಮುಖ್ಯ ರಸ್ತೆ, ದೊಡ್ಡ ನೆಕುಂದಿ, ಅಂಬೇಡ್ಕರ್ ನಗರ, ಮಲ್ಲಸಂಧ್ರಪುರ ರಸ್ತೆ, ಬಿಡಿಎ 9ನೇ ಹಂತ, ರಾಘವನಪಾಳ್ಯ, ವಸಂತ ವಲ್ಲಭ ನಗರ ಮತ್ತು ಪರಪ್ಪನ ಅಗ್ರಹಾರ ಮುಖ್ಯರಸ್ತೆಗಳಲ್ಲಿ ಪವರ್ ಕಟ್ ಆಗಲಿದೆ.

ಉತ್ತರ ವಲಯದಲ್ಲಿ ಶುಕ್ರವಾರ ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗಾಯತ್ರಿನಗರ, ಓಕಳಿಪುರಂ 2ನೇ ಹಂತ, ನಾಗಪ್ಪ ಬ್ಲಾಕ್, ಮುನೇಶ್ವರ ಬ್ಲಾಕ್, ಸದಾಶಿವನಗರ, ತ್ರಿವೇಣಿ ರಸ್ತೆ, ನ್ಯೂ ಬಿಇಎಲ್ ರಸ್ತೆ, ಪ್ರಕಾಶ್ ನಗರದ ಕೆಲವು ಭಾಗಗಳು, ಕಾವೇರಿ ಲೇಔಟ್, ಲಕ್ಷ್ಮೀಪುರ ಗ್ರಾಮ, ಸಂಪಿಗೆ ರಸ್ತೆ, ಟಾಟಾನಗರ, ದೇವಿ ನಗರ, ಲೊಟ್ಟೆಗೋಳಹಳ್ಳಿ, ಸಾಯಿನಗರ 2ನೇ ಹಂತ, ಸಂಪಿಗೆಹಳ್ಳಿ, ಹಾರೋಹಳ್ಳಿ, ಕೆಂಚನಹಳ್ಳಿ, ನಾಗದೇಸನಹಳ್ಳಿ, ಗೆಂಟಗಾನಹಳ್ಳಿ, ಮೂಡನಹಳ್ಳಿ, ಕೆಎಚ್‌ಬಿ ಕ್ವಾರ್ಟರ್ಸ್, ರಂಕಾ ನಗರ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ, ಟಿ. ದಾಸರಹಳ್ಳಿ, ಮಹಾಲಕ್ಷ್ಮಿ ಪುರಂ ಮತ್ತು ಮೋದಿ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸ್ವಾಮಿ ವಿವೇಕಾನಂದ ರಸ್ತೆ, ದೊಮ್ಮಲೂರು ಗ್ರಾಮ, ಹೊಯ್ಸಳ ನಗರ ರಸ್ತೆ, ಮುಕುಂದ ಥಿಯೇಟರ್ ಹತ್ತಿರ, ಉಮರ್ ನಗರ, ಚಾಣಕ್ಯ ಲೇಔಟ್, ನಾಗವಾರ, ಗೆದ್ದಲಹಳ್ಳಿ ಮತ್ತು ಚನ್ನಸಂದ್ರ ಸೇರಿವೆ.
ಇನ್ನು ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಹಂಪಿನಗರ, ವಿಎಚ್‌ಬಿಸಿಎಸ್ ಲೇಔಟ್, ಎಲ್‌ಐಸಿ ಕಾಲೋನಿ, ಕಿರ್ಲೋಸ್ಕರ್ ಕಾಲೋನಿ 2ನೇ ಹಂತ, ಕೆಎಚ್‌ಬಿ ಕಾಲೋನಿ, ಬಸವೇಶ್ವರ ನಗರದ ಕೆಲವು ಭಾಗಗಳು, ಶಾರದ ಕಾಲೋನಿ, ಹೆಗ್ಗನಹಳ್ಳಿ ಕ್ರಾಸ್, ಕಾಮಾಕ್ಷಿಪಾಳ್ಯ, ರಾಜೀವ್ ಗಾಂಧಿ ನಗರ, ಬೈರವೇಶ್ವರ ನಗರ, ಪ್ರಶಾಂತ ನಗರ, ಮೂಡಲಪಾಳ್ಯದ ಭಾಗಗಳು, ಬಸವನಗುಡಿ, ವಿದ್ಯಾಪೀಠ, ಅನ್ನಪೂರ್ಣೇಶ್ವರಿ ಲೇಔಟ್, ಟಿಜಿ ಪಾಳ್ಯ, ವಿದ್ಯಾಮಾನ ನಗರ, ಕೆಂಗೇರಿ ಮುಖ್ಯ ರಸ್ತೆ, ಬಿಡಿಎ ಏರಿಯಾ ಬ್ಲಾಕ್ -1, ಉತ್ತರಹಳ್ಳಿ ರಸ್ತೆ, ಕೋಡಿಪಾಳ್ಯ, ಕುವೆಂಪು ಮುಖ್ಯರಸ್ತೆ, ಗಂಗಾನಗರ, ಬಿಇಎಲ್ 1ನೇ ಹಂತ ಮತ್ತು ಬಿಇಎಲ್ 2ನೇ ಹಂತಗಳಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ.

ಫೆಬ್ರವರಿ 5ರಂದು ವಿದ್ಯುತ್ ವ್ಯತ್ಯಯದ ಪ್ರದೇಶಗಳು
ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಕೆ.ಆರ್. ರಸ್ತೆ, 8ನೇ ಬ್ಲಾಕ್ ಜಯನಗರ, ವಿನಾಯಕನಗರ, ಟೌನ್‌ಹಾಲ್, ರವೀಂದ್ರ ಕಲಾಕ್ಷೇತ್ರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಜೆಪಿ ನಗರ 1ನೇ ಹಂತ, ಸಾರಕ್ಕಿ ಮಾರುಕಟ್ಟೆ, ತ್ಯಾಗರಾಜನಗರ ಮುಖ್ಯರಸ್ತೆ, ಪಾಪಯ್ಯ ಗಾರ್ಡನ್, ಬನಶಂಕರಿ 3ನೇ ಬಡಾವಣೆ, ಬನಶಂಕರಿ 3ನೇ ಬ್ಲಾಕ್ ಪೀಡಿತ ಪ್ರದೇಶಗಳು. ಅಚ್ಚುಕಟ್ಟು, ಕತ್ರಿಗುಪ್ಪೆ, ಕಾಕತಿಯನಗರ, ಮಾರತಹಳ್ಳಿ, ಹೊಂಗಸಂದ್ರ, ಬೊಮ್ಮನಹಳ್ಳಿ, ಸಂತೃಪ್ತಿ ನಗರ, ನೃಪತುಂಗನನಗರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ ಮತ್ತು ದೊಡ್ಡತೋಗೂರುಗಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಪ್ರಕಾಶನಗರ, ರಾಮಮೋಹನಪುರ, ವೈಯಾಲಿಕಾವಲ್, ಯಶವಂತಪುರ, ಮಾಡೆಲ್ ಕಾಲೋನಿ, ಗುರುಮೂರ್ತಿ ರೆಡ್ಡಿ ಕಾಲೋನಿ, ಅಂಬೇಡ್ಕರ್ ನಗರ, ಪೈಪ್‌ಲೈನ್ ರಸ್ತೆ, ನ್ಯೂ ಬಿಇಎಲ್ ರಸ್ತೆ, ಆದಿತ್ಯ ನಗರ, ಎಂಎಸ್ ಪಾಳ್ಯ, ಅಕ್ಷಯನಗರ, ದೊಡ್ಡಬೆಟಹಳ್ಳಿ, ತಿಂಡ್ಲು ಮುಖ್ಯರಸ್ತೆ, ರಾಘವೇಂದ್ರ ಬಿ ಕಾಲೋನಿ, ಕೆ.ಈ.ಡ.ಬಿ. ನಗರ, ಜಕ್ಕೂರು ಮುಖ್ಯ ರಸ್ತೆಗಳು ಸೇರಿವೆ.
ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಕಸ್ತೂರಿ ನಗರ, ಟಿಸಿ ಪಾಳ್ಯ ರಸ್ತೆ, ಆರ್‌ಕೆ ಮಠದ ರಸ್ತೆ, ಹಲಸೂರು ಮೆಟ್ರೋ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಬೆಳ್ಳಾಳಿ ಗ್ರಾಮ, ಕಾಫಿ ಬೋರ್ಡ್ ಲೇಔಟ್, ಅಂಬೇಡ್ಕರ್ ನಗರ ಗುಟ್ಟ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಗುಂಜೂರು, ಗುಂಜೂರು ಮುಖ್ಯರಸ್ತೆ, ಅಯ್ಯಪ್ಪನಗರ, ಗೋಕುಲ ವಿಸ್ತರಣೆ ರಸ್ತೆ ಮತ್ತು ಹೂಡಿ ಸೇರಿವೆ.

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5.30 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸುಬ್ಬಣ್ಣ ಗಾರ್ಡನ್, ವಿಎಚ್‌ಬಿಸಿಎಸ್, ಕೆನರಾ ಬ್ಯಾಂಕ್ ಕಾಲೋನಿ, ಅನುಭವ ನಗರ, ಕಿರ್ಲೋಸ್ಕರ್ ಕಾಲೋನಿ 1ನೇ ಹಂತ, ಹಾವನೂರು ವೃತ್ತ, ಮಂಜುನಾಥನಗರ, ಶಾರದ ಕಾಲೋನಿ, ಮೀನಾಕ್ಷಿನಗರ, ಸುಂಕದಕಟ್ಟೆ, ರಾಜೀವ್ ಗಾಂಧಿ ನಗರ, ಬೈರವೇಶ್ವರ ನಗರ, ಪ್ರಶಾಂತ ನಗರ, ಮೂಡಲಪಾಳ್ಯ, ಉಳ್ಳಾಲ ನಗರ, ದೊಡ್ಡ ಬಸ್ತಿ ಮುಖ್ಯರಸ್ತೆ, ಮಲ್ಲತ್ತಳ್ಳಿ ಲೇಔಟ್, ದ್ವಾರಕಾ ರಸ್ತೆ ಮತ್ತು ಭವಾನಿನಗರಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ.
ಫೆಬ್ರವರಿ 6ರಂದು ವಿದ್ಯುತ್ ವ್ಯತ್ಯಯದ ಪ್ರದೇಶಗಳು
ದಕ್ಷಿಣ ವಲಯದಲ್ಲಿ ಜೆಸಿ ಇಂಡಸ್ಟ್ರಿಯಲ್ ಲೇಔಟ್‌ನಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ದೊಡ್ಡತೋಗೂರು ಬೆಳಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಇನ್ನು ಉತ್ತರ ವಲಯದ ಅಬ್ಬಿಗೆರೆಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.
ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸುಬ್ಬಣ್ಣ ಗಾರ್ಡನ್, ವಿಎಚ್‌ಬಿಸಿಎಸ್ ಲೇಔಟ್, ಕೆನರಾ ಬ್ಯಾಂಕ್ ಕಾಲೋನಿ, ಅನುಭವ ನಗರ, ಕಿರ್ಲೋಸ್ಕರ್ ಕಾಲೋನಿ 1 ನೇ ಹಂತ, ಹಾವನೂರು ವೃತ್ತ, ಮಂಜುನಾಥ ನಗರದ ಕೆಲವು ಭಾಗಗಳು, ಬಸವೇಶ್ವರ ನಗರದ ಕೆಲವು ಭಾಗಗಳು, ಶಾರದ ಕಾಲೋನಿ, ಮೀನಾಕ್ಷಿನಗರ, ಸುಂಕದಕಟ್ಟೆ, ರಾಜೀವ್ ನಗರ, ಬೈರವೇಶ್ವರ ನಗರ, ಬೈರವೇಶ್ವರ ನಗರ, ಟಿ.ಜಿ.ಪಾಳ್ಯ, ವಿಘ್ನೇಶ್ವರ ನಗರ ಮತ್ತು ವೀರಭದ್ರೇಶ್ವರ ನಗರಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರಲಿದ್ದು, ಜನರಿಗೆ ಬೆಸ್ಕಾಂ ಸಹಕರಿಸುವಂತೆ ಮನವಿ ಮಾಡಿದೆ.
ಬೆಂಗಳೂರಿನ ಜನರಿಗೆ ವಿದ್ಯುತ್ ಕಡಿತ ಸಮಸ್ಯೆ ಹೊಸದಲ್ಲ. ಕಳೆದ ಹಲವಾರು ತಿಂಗಳಿನಿಂದ, ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ. ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ (ವರ್ಕ್ ಫ್ರಂ ಹೋಮ್) ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.
ದಿನದಲ್ಲಿ ಒಂದೆರೆಡು ಗಂಟೆಗಳಾದರೆ ಅಷ್ಟೊಂದು ಕಷ್ಟವೆನಿಸದು. ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ. ಅಲ್ಲದೇ ಕೇವಲ ಒಂದು ದಿನ ಮಾತ್ರವಾಗಿದ್ದರೂ ಹೇಗೋ ಸಾಧ್ಯವಿತ್ತು. ಆದರೆ ಕಳೆದ ಕೆಲವು ತಿಗಳುಗಳಿಂದ ವಿದ್ಯುತ್ ಕಡಿತ ಸಮಸ್ಯೆಯಾಗಿದ್ದು, ಬೆಸ್ಕಾಂನ ಈ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications