ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಸಗಿ ಶಾಲೆ ಆರಂಭಕ್ಕೆ ಡಿ. 5 ರವರೆಗೂ ಅರ್ಜಿ ಸಲ್ಲಿಸಿ

By Kiran B Hegde
|
Google Oneindia Kannada News

ಬೆಂಗಳೂರು, ನ. 29: ಖಾಸಗಿ ಅನುದಾನ ರಹಿತ ಒಂದರಿಂದ ಐದನೇ ತರಗತಿವರೆಗಿನ ಹೊಸ ಶಾಲೆ ಆರಂಭಕ್ಕೆ ಅರ್ಜಿ ಸಲ್ಲಿಸಲು ಡಿ. 5ರ ವರೆಗೆ ಕಾಲಾವಕಾಶ ನೀಡಲಾಗಿದೆ.

ಇಂಗ್ಲಿಷ್ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಎ.ಎಸ್. ಬೋಪಣ್ಣ ಅವರಿದ್ದ ಏಕ ಸದಸ್ಯ ಪೀಠ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಲು ಸರ್ಕಾರಕ್ಕೆ ಆದೇಶ ನೀಡಿದೆ. [ಆಂಗ್ಲ ಮಾಧ್ಯಮ ಅನುಮತಿಗೆ ಪಟ್ಟು]

ಅಲ್ಲದೆ, ಶಾಲೆ ಆರಂಭಿಸಲು ವಿಧಿಸಿರುವ ಷರತ್ತುಗಳನ್ನು ಪೂರೈಸಲು ಒತ್ತಡ ಹೇರಬಾರದು. ಷರತ್ತು ಪೂರೈಕೆ ವಿಚಾರ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. [ಕನ್ನಡ ಮಾಧ್ಯಮ ಕಡ್ಡಾಯವಲ್ಲ]

high

ಇಂಗ್ಲಿಷ್ ಮಾಧ್ಯಮಕ್ಕೆ ಅನುಮತಿ ಕೋರಿಕೆ: ಹೊಸ 1ರಿಂದ 5ನೇ ತರಗತಿವರೆಗಿನ ಕನ್ನಡ ಮಾಧ್ಯಮ ಖಾಸಗಿ ಅನುದಾನ ರಹಿತ ಶಾಲೆ ಆರಂಭಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇಲಾಖೆ ಅರ್ಜಿ ಆಹ್ವಾನಿಸಿತ್ತು. ಕೇವಲ ಕನ್ನಡ ಮಾಧ್ಯಮಕ್ಕೆ ಮಾತ್ರ ಅನುಮತಿ ನೀಡಲಾಗುತ್ತಿದೆ, ಇಂಗ್ಲಿಷ್ ಮಾಧ್ಯಮ ಶಾಲೆಗೆ ಅನುಮತಿ ನೀಡುತ್ತಿಲ್ಲ. ಇದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ತೀರ್ಪಿನ ಉಲ್ಲಂಘನೆ ಎಂದು ಇಂಗ್ಲಿಷ್ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ದೂರಿದ್ದರು. [ಭಾಷಾ ಮಾಧ್ಯಮ ತೀರ್ಪಿನ ವಿರುದ್ಧ ಮೇಲ್ಮನವಿ]

ಈ ಹಿನ್ನೆಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಲು ಅನುಮತಿ ನೀಡಬೇಕೆಂದು ಶಿಕ್ಷಣ ಇಲಾಖೆಗೆ ಹೈ ಕೋರ್ಟ್ ಸೂಚಿಸಿತ್ತು. ಆಗ ಅರ್ಜಿ ಸಲ್ಲಿಸಲು ನ. 30ರ ವರೆಗೆ ಮಾತ್ರ ಗಡುವು ನೀಡಲಾಗಿದೆ. ಈ ಕಾಲಾವಕಾಶ ಶುಲ್ಕ ಪಾವತಿಸಲು ಮತ್ತು ಷರತ್ತು ಪೂರೈಸಲು ಸಾಕಾಗುವುದಿಲ್ಲ ಎಂದು ಮತ್ತೆ ಅರ್ಜಿದಾರರು ಕೋರ್ಟ್ ಮೊರೆ ಹೋಗಿದ್ದರು. ಈ ಕಾರಣದಿಂದ ಅರ್ಜಿ ಸಲ್ಲಿಕೆ ದಿನಾಂಕವನ್ನು ಡಿ. 5ರ ವರೆಗೆ ವಿಸ್ತರಿಸಿ ಹೈ ಕೋರ್ಟ್ ಆದೇಶ ನೀಡಿದೆ. [ಮಾತೃಭಾಷೆ ಶಿಕ್ಷಣ ಎಂದರೇನು ವಿವರಿಸಿ: ಸುಪ್ರೀಂ]

English summary
High Court has directed education department to extend the time up to December 5 to apply for the start of the new school. Education department had invited the applications for the start of new Kannada medium schools only. This was questioned by the Alliance of English Medium School Managements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X