ಬನ್ನೇರುಘಟ್ಟ : ಬೆಂಗಾಲ್ ಟೈಗರ್ v/s ವೈಟ್ ಟೈಗರ್ ಕಾದಾಟ
Recommended Video

ಬೆಂಗಳೂರು, ಸೆಪ್ಟೆಂಬರ್ 20 : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳ ಕಾದಾಟದಿಂದಾಗಿ ಬಿಳಿ ಹುಲಿಯೊಂದು ಗಂಭೀರವಾಗಿ ಗಾಯಗೊಂಡಿದೆ. ಜುಲೈ ತಿಂಗಳಿನಲ್ಲಿ ಜೀಬ್ರಾವೊಂದು ಉದ್ಯಾನವನದಲ್ಲಿ ಗುಂಡಿಗೆ ಬಿದ್ದು ಮೃತಪಟ್ಟಿತ್ತು.
ಮೂರು ಬೆಂಗಾಲ್ ಟೈಗರ್‌ಗಳು ಬಿಳಿ ಹುಲಿಯ ಜೊತೆ ನಿರಂತರವಾಗಿ ಕಾದಾಟ ನಡೆಸುತ್ತಿದ್ದವು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಬಾರಿ ಕಾದಾಟ ನಡೆದಾಗ ಬಿಳಿ ಹುಲಿ ಗಂಭೀರವಾಗಿ ಗಾಯಗೊಂಡು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.

ಹುಲಿಗಳ ಕಾಳಗದಿಂದಾಗಿ ಖೇಜ್ ನಿಂದ ಖೇಜ್ ಗೆ ಹುಲಿಗಳು ಸುಲಭವಾಗಿ ಹೋಗಲು ಸಾಧ್ಯವಾಗದಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಬಿಳಿ ಹುಲಿ ಖೇಜ್ ದಾಟಿ ಹೋದಾಗ ಬೆಂಗಾಲ್ ಟೈಗರ್ಸ್ ಜೊತೆ ಕಾದಾಟ ನಡೆದಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದ ಆರೋಪಿಸಲಾಗುತ್ತಿದೆ.
ಕಾದಾಟದಿಂದ ಬಿಳಿ ಹುಲಿಯ ಸ್ಪೈನಲ್ ಕಾರ್ಡ್ ಗೆ ಬಲವಾದ ಪೆಟ್ಟು ಬಿದ್ದಿದೆ. ಹುಲಿ ನಡೆದಾಡಲು ಸಾಧ್ಯವಾಗದೇ ಒಂದೇ ಕಡೆ ಮಲಗಿದೆ. ಬನ್ನೇರುಘಟ್ಟ ಆಸ್ಪತ್ರೆಯಲ್ಲಿ ಅದಕ್ಕೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಜುಲೈ ತಿಂಗಳಿನಲ್ಲಿ ಗುಂಡಿಯೊಂದಕ್ಕೆ ಬಿದ್ದು ಜಿಬ್ರಾ ಮೃತಪಟ್ಟಿತ್ತು. ಈ ಘಟನೆ ಮರೆಯುವ ಮುನ್ನವೇ ಬಿಳಿ ಹುಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.












Click it and Unblock the Notifications