ಸ್ಟಾರ್ಟ್ ಅಪ್ ಶುರು ಮಾಡಬೇಕು ಅಂದ್ರೆ ಟೈರ್ 1 ಕಾಲೇಜ್‌ನಲ್ಲೇ ಓದೋದು ಬೇಡ, ಇವರ ಯಶೋಗಾಥೆ ಕೇಳಿ

ಸ್ಟಾರ್ಟ್ ಅಪ್ ಶುರು ಮಾಡಬೇಕು ಅಂದ್ರೆ ಅಥವಾ ಐಟಿ ರಂಗದಲ್ಲಿ ದೊಡ್ಡ ಸಾಧನೆ ಮಾಡಬೇಕು ಅಂದ್ರೆ ಟೈರ್ 1 (Tier-1) ಕಾಲೇಜ್‌ನಲ್ಲೇ ಓದಬೇಕು ಎಂದೇನಿಲ್ಲ. ತುಂಬಾ ಮಾರ್ಕ್ಸ್ ತೆಗೆಯಬೇಕು, ಒಳ್ಳೆಯ ಕಾಲೇಜಿನಲ್ಲಿ ಸೀಟ್ ಸಿಗದಿದ್ದರೆ ಡೊನೇಷನ್ ಕೊಟ್ಟು ಸೀಟ್ ತೆಗೆದುಕೊಳ್ಳುವ ಪೋಷಕರು ಹಾಗೂ ವಿದ್ಯಾರ್ಥಿಗಳು ಒಮ್ಮೆ ಈ ಸ್ಟೋರಿ ಓದಲೇಬೇಕು.

ನಾವು ಓದುವ ಕಾಲೇಜು, ತೆಗೆಯುವ ಮಾರ್ಕ್ಸ್ ಯಾವುದಕ್ಕೂ ಉಪಯೋಗಕ್ಕೆ ಬರೋಲ್ಲ ಅಂತ ಈ ಟೆಕ್ಕಿ ಪ್ರೂವ್ ಮಾಡಿದ್ದಾರೆ. ನಿಮ್ಮ ಸ್ಕಿಲ್, ಹಾರ್ಡ್ ವರ್ಕ್ ಹಾಗೂ ಕನ್ಸಿಸ್ಟೆನ್ಸಿ ಮಾತ್ರ ನಿಮಗೆ ಯಶಸ್ಸು ತಂದುಕೊಡುತ್ತದೆ. ನೀವು ಕೈತುಂಬಾ ದುಡಿಯುವ ಹಾಗೆ ಮಾಡುತ್ತದೆ. ಅಷ್ಟೇ ಅಲ್ಲ, ನೀವೇ ನಾಲ್ಕು ಜನರಿಗೆ ಕೆಲಸ ಬೇಕಾದ್ರೂ ಕೊಡಬಹುದು ಎಂಬುದಕ್ಕೆ ಈ ಯುವಕನ ಕಥೆಯೇ ಸಾಕ್ಷಿ.

Techie

ಪುಣೆಯ ಟೈರ್-3 ಕಾಲೇಜಿನಲ್ಲಿ ಓದಿದ ಈ ಯುವಕ, ವರ್ಷಕ್ಕೆ ಕೇವಲ 3.5 ಲಕ್ಷ ರೂಪಾಯಿ (LPA) ಪ್ಯಾಕೇಜ್‌ನಿಂದ 27 ಲಕ್ಷ ರೂ. ಪ್ಯಾಕೇಜ್‌ಗೆ ಹೋಗಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎನ್ನಬಹುದು. '3.5 ರಿಂದ 27 ಲಕ್ಷದವರೆಗೆ ಫ್ಲಟರ್ ಡೆವಲಪರ್ (Flutter Developer) ಆಗಿ ನಾನು ಬೆಳೆದಿದ್ದು ಹೇಗೆ?' ಎಂಬ ಶೀರ್ಷಿಕೆಯಡಿ ರೆಡಿಟ್ ಖಾತೆಯಲ್ಲಿ ತಮ್ಮ ವೃತ್ತಿಜೀವನದ ಏಳುಬೀಳುಗಳನ್ನು ಹಂಚಿಕೊಂಡಿದ್ದಾರೆ.

2020ರಲ್ಲಿ ಪದವಿ ಮುಗಿಸಿದ ಇವರು, ಆರಂಭದಲ್ಲಿ 30 ರಿಂದ 35 ಕಂಪೆನಿಗಳ ಸಂದರ್ಶನಗಳಲ್ಲಿ ವಿಫಲರಾಗಿದ್ದರು. ನಿರಂತರವಾಗಿ ಅನುಭವಿಸಿದ ರಿಜೆಕ್ಷನ್‌ಗಳಿಂದಾಗಿ ಅವರ ಆತ್ಮವಿಶ್ವಾಸವೇ ಕುಗ್ಗಿಹೋಗಿತ್ತು.

"ನನಗೆ ಕೋಡಿಂಗ್ ಎಂದರೆ ತುಂಬಾ ಇಷ್ಟವಿತ್ತು. ಕೊನೆಗೆ ನನಗೆ ಕ್ಯಾಪ್‌ಜೆಮಿನಿ ಕಂಪನಿಯಿಂದ 3.5 ಲಕ್ಷ ರೂ. ಪ್ಯಾಕೇಜ್‌ನ ಆಫರ್ ಸಿಕ್ಕಿತು. ಆದರೆ ಕೋವಿಡ್ ಕಾರಣದಿಂದಾಗಿ ಜಾಯಿನಿಂಗ್ ವಿಳಂಬವಾಯಿತು. ಆರಂಭದ 6 ತಿಂಗಳು ಕೇವಲ 20 ಸಾವಿರ ರೂ. ಸಂಬಳವಿತ್ತು" ಎಂದು ಅವರು ಬರೆದುಕೊಂಡಿದ್ದಾರೆ.

ಕುಟುಂಬದ ಜವಾಬ್ದಾರಿ ಇದ್ದಿದ್ದರಿಂದ, ನಂತರ ಇವರು ತಮ್ಮ ಸ್ನೇಹಿತನ ಸ್ಟಾರ್ಟ್‌ಅಪ್‌ಗೆ ತಿಂಗಳಿಗೆ 45,000 ರೂ. ಸಂಬಳಕ್ಕೆ ಸೇರಿಕೊಂಡರು. ಅಲ್ಲಿ ಕೇವಲ ಕೋಡ್ ಬರೆಯುವುದಷ್ಟೇ ಅಲ್ಲದೆ, ಕ್ಲೈಂಟ್‌ಗಳೊಂದಿಗೆ ಮಾತನಾಡುವುದು ಮತ್ತು ಒಂದು ಪ್ರಾಡಕ್ಟ್ ಅನ್ನು ಮೊದಲಿನಿಂದ ಕಟ್ಟುವುದನ್ನು ಕಲಿತರು. ಇದು ಅವರ ಜೀವನದ ದೊಡ್ಡ ಟರ್ನಿಂಗ್ ಪಾಯಿಂಟ್ ಆಯಿತು.

ಅಲ್ಲಿಂದ ಮತ್ತೆ ಬೇರೆ ಕಂಪನಿಗೆ ಬದಲಾಗಲು ನಿರ್ಧರಿಸಿದ ಅವರು, ಈ ಬಾರಿ ಕಠಿಣ ಸಿದ್ಧತೆಗಳನ್ನಾ ಮಾಡಿಕೊಂಡಿದ್ದರು. ಆತ್ಮವಿಶ್ವಾಸದ ಕೊರತೆಯಿಂದಾಗಿ 12-13 ಲಕ್ಷ ರೂ. ಆಫರ್ ನೀಡುತ್ತಿದ್ದ ಕಂಪನಿಗಳಿಂದಲೂ ರಿಜೆಕ್ಟ್ ಆದರು. ಆದರೆ ಎದೆಗುಂದದೆ, ತಮ್ಮ ಸ್ಕಿಲ್ಸ್‌ಗಳನ್ನು ಮತ್ತಷ್ಟು ಸುಧಾರಿಸಿಕೊಂಡು 10-15 ಸಂದರ್ಶನಗಳನ್ನು ಎದುರಿಸಿದರು. ಪರಿಣಾಮವಾಗಿ, ಸುಮಾರು 15 ಲಕ್ಷ ರೂ. ಪ್ಯಾಕೇಜ್‌ನ ಮೂರು ಆಫರ್‌ಗಳು ಅವರನ್ನು ಹುಡುಕಿಕೊಂಡು ಬಂದವು. ಇದೇ ಸಮಯದಲ್ಲಿ ಲಿಂಕ್ಡ್‌ಇನ್ ಮೂಲಕ ಕಂಪನಿಯೊಂದರ ಫೌಂಡರ್ ನೇರವಾಗಿ ಇವರನ್ನು ಸಂಪರ್ಕಿಸಿ, ಹಲವು ಸುತ್ತಿನ ಸಂದರ್ಶನಗಳ ನಂತರ ಬರೋಬ್ಬರಿ 27 ಲಕ್ಷ ರೂ. ಪ್ಯಾಕೇಜ್‌ನ ಬಂಪರ್ ಆಫರ್ ನೀಡಿದರು.

ಆಪ್ಟಿಟ್ಯೂಡ್ ರೌಂಡ್ ಪಾಸ್ ಮಾಡಲು ಪರದಾಡುತ್ತಿದ್ದ ಯುವಕನಿಗೆ ಇಂದು ಕಂಪನಿಯ ಫೌಂಡರ್‌ಗಳೇ ನೇರವಾಗಿ ಆಫರ್ ನೀಡುವ ಮಟ್ಟಿಗೆ ಬೆಳೆದಿದ್ದಾರೆ ಎಂದರೆ ಅದಕ್ಕೆ ಅವರ ಪರಿಶ್ರಮವೇ ಕಾರಣ. "ನಿಮ್ಮ ಸುತ್ತಮುತ್ತಲಿನ ವಾತಾವರಣ ಎಷ್ಟೇ ನಿರಾಶಾದಾಯಕವಾಗಿದ್ದರೂ, ನಿಮ್ಮ ಮೇಲೆ ನೀವು ನಂಬಿಕೆ ಇಡಿ. ಆಗ ಕೇವಲ ಕೆಲವೇ ವರ್ಷಗಳಲ್ಲಿ ಬಹಳಷ್ಟು ಬದಲಾಗಬಹುದು" ಎನ್ನುತ್ತಾರೆ ಈ ಟೆಕ್ಕಿ. ಇವರ ಈ ಯಶೋಗಾಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾನ್-ಪ್ರೀಮಿಯರ್ ಕಾಲೇಜುಗಳ ಸಾವಿರಾರು ಯುವಕರಿಗೆ ದೊಡ್ಡ ಸ್ಫೂರ್ತಿಯಾಗಿದೆ. ನಿರಂತರ ಪ್ರಯತ್ನ, ಕೌಶಲ್ಯವಿದ್ದರೆ ಯಶಸ್ಸು ಖಂಡಿತ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+