ದುರ್ಘಟನೆಗೆ ಹೇಳಿ ಮಾಡಿಸಿದಂತಿರುವ ಎಸಿ ಬೋಗಿ

ಬೆಂಗಳೂರು, ಡಿ. 28 : ತ್ರಿ-ಟಯರ್ ಎಸಿ ರೈಲಿನಲ್ಲಿ ಪಯಣಿಸುವವರು ಇನ್ನು ಮುಂದೆ ಪಯಣಿಸುವುದೋ ಬೇಡವೋ ಎಂದು ಹಿಂದೆಮುಂದೆ ನೋಡುವಂಥ ದುರ್ಘಟನೆಯೊಂದು ವರ್ಷದ ಕೊನೆಯಲ್ಲಿ ಸಂಭವಿಸಿಬಿಟ್ಟಿದೆ. ಏಕೆಂದರೆ, ತ್ರಿ-ಟಯರ್ ಎಸಿ ರೈಲಿನ ಬೋಗಿಯ ವಿನ್ಯಾಸವೇ ಆ ರೀತಿ ಇದೆ. ಬಾವಿ ತೋಡುವ ಮೊದಲೇ ಗಡ್ಡಕ್ಕೆ ಬೆಂಕಿ ಹತ್ತಿಬಿಟ್ಟಿದೆ.

ಬೆಂಗಳೂರು-ನಾಂದೇಡ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪಯಣಿಸುತ್ತಿದ್ದ 67 ಪ್ರಯಾಣಿಕರಲ್ಲಿ 26 ಜನರು ಸಜೀವವಾಗಿ ದಹಿಸಿಹೋಗಿದ್ದಾರೆ. ಶಾರ್ಟ್ ಸರ್ಕಿಟ್ ನಿಂದ ದುರ್ಘಟನೆ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅದೃಷ್ಟವಂತರು ಪಾರಾಗಿ ಬಂದಿದ್ದರೆ ದುರಾದೃಷ್ಟವಂತರು ಜವರಾಯನ ಪಾದ ಸೇರಿದ್ದಾರೆ.

ಮೇಲ್ ಮಧ್ಯಮ ವರ್ಗದವರ ಐಷಾರಾಮಿ ಪ್ರಯಾಣಕ್ಕೆ ತ್ರಿ-ಟಯರ್ ಎಸಿ ಬೋಗಿಗಳು ಹೇಳಿ ಮಾಡಿಸಿದಂತಿವೆ. ಆಕಡೆ ದ್ವಿತೀಯ ದರ್ಜೆಯಷ್ಟು ಕಡಿಮೆ(?)ಯೂ ಅಲ್ಲ, ಫಸ್ಟ್ ಕ್ಲಾಸ್ ಎಸಿ ರೈಲಿನ ಟಿಕೆಟಿನಷ್ಟು ದುಬಾರಿಯೂ ಅಲ್ಲ. ಇನ್ನು ಗರೀಬ್ ರಥ್ ರೈಲಿನಲ್ಲಿ ಬಡವರ್ಗದವರು ಕೂಡ ಸುಖಕರವಾಗಿ ಪ್ರಯಾಣಿಸಬಹುದು. ಆದರೆ...

ಈ ಬೋಗಿಗಳಲ್ಲಿ ಪಯಣಿಸಿದವರಿಗೆ ಅಲ್ಲಿಯ ಸಂಕಷ್ಟಗಳು ಗಮನಕ್ಕೆ ಬಂದಿರುತ್ತವೆ. ಎಸಿ ಬೋಗಿಯನ್ನು ಪ್ರವೇಶಿಸಲು ಇರುವ ದ್ವಾರ ಎಷ್ಟು ಕಿರಿದಾಗಿದೆಯೆಂದರೆ ನೂರು ಕೆಜಿ ತೂಕವಿರುವ ಮನುಷ್ಯರು ದಾಟುವುದು ಬಲುಕಷ್ಟ. ಆಕಡೆಯಿಂದೊಬ್ಬರು ಈಕಡೆಯಿಂದೊಬ್ಬರು ಬಂದರಂತೂ ಯಾರಿಗೆ ಯಾರು ದಾರಿ ಬಿಟ್ಟುಕೊಡಬೇಕು ಎಂಬುದು ತಿಳಿಯಲಾರದಷ್ಟು ಇಕ್ಕಟ್ಟು.

ಧಗಧಗನೆ ಉರಿದುಹೋಗಲು ಎಷ್ಟೊತ್ತು ಬೇಕು

ಧಗಧಗನೆ ಉರಿದುಹೋಗಲು ಎಷ್ಟೊತ್ತು ಬೇಕು

ಸೀಟುಗಳ ಮೇಲೆ ಯದ್ವಾತದ್ವಾ ಗುಡ್ಡೆಯಾಗಿ ಬಿದ್ದಿರುವ ರಗ್ಗುಗಳು, ಬೆಡ್ ಶೀಟುಗಳು, ತಲೆದಿಂಬುಗಳು. ಸಾಲದೆಂಬಂತೆ, ಒಂದು ಕಂಪಾರ್ಟ್ಮೆಂಟನ್ನು ಇನ್ನೊಂದರಿಂದ ಬೇರ್ಪಡಿಸುವ ಕರ್ಟನ್ನುಗಳು. ಬೆಂಕಿಯ ಕಿಡಿ ಹೊತ್ತಿಕೊಂಡು ಇಡೀ ಬೋಗಿ ಧಗಧಗನೆ ಉರಿದುಹೋಗಲು ಇನ್ನೇನು ಬೇಕು ಮತ್ತು ಎಷ್ಟೊತ್ತು ಬೇಕು?

ಸ್ವಚ್ಛಂದ ಇಲಿಗಳಿಗೆ ರಸದೌತಣ

ಸ್ವಚ್ಛಂದ ಇಲಿಗಳಿಗೆ ರಸದೌತಣ

ಕಿಟಕಿಗಳು ಮುಚ್ಚಿರುವುದರಿಂದ ರಾತ್ರಿ ಊಟ ಮಾಡಿದ ನಂತರ ಪೇಪರ್ ಪ್ಲೇಟನ್ನು ಬಿಸಾಕುವುದು ಅಸಾಧ್ಯ. ಪ್ರಯಾಣಿಕರ ನಿರ್ಲಕ್ಷ್ಯದಿಂದಾಗಿ ತಿಂಡಿತಿನಿಸುಗಳು ಅಲ್ಲಲ್ಲೇ ಚೆಲ್ಲಾಡಿದ್ದರಿಂದ ಕಂಡಕಂಡಲ್ಲಿ ಓಡಾಡುವ ಇಲಿಗಳಿಗೆ ರಸದೌತಣ. ಇಲಿಗಳು ವಿದ್ಯುತ್ ತಂತಿಗಳನ್ನು ಕಚ್ಚಿ ಕಿತ್ತಿಹಾಕಿದ್ದರೂ ಅಚ್ಚರಿಯಿಲ್ಲ. ಶಾರ್ಟ್ ಸರ್ಕಿಟ್ ಈ ಕಾರಣದಿಂದಲೇ ಆಗಿದ್ದಾ? ತನಿಖೆಯಿಂದ ಗೊತ್ತಗಬೇಕು.

ಆ ಗೋವಿಂದನೂ ಕಾಪಾಡಲಾರ

ಆ ಗೋವಿಂದನೂ ಕಾಪಾಡಲಾರ

ತೆರೆದ ಕಿಟಕಿಯಿರುವ ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಂಡರೆ ಭುಗಿಲೆದ್ದ ಹೊಗೆ ಹೊರಹೋಗಲು, ಜನರಿಗೆ ಉಸಿರಾಡಿಸಲು ತುಸುವಾದರೂ ಅವಕಾಶವಿರುತ್ತದೆ. ಎಸಿ ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಂಡರೆ ಆ ಗೋವಿಂದನೂ ಕಾಪಾಡಲಾರ. ಬೆಂಕಿಯಲ್ಲಿ ಬೆಂದು ಹೋಗುವುದಕ್ಕಿಂತ ಉಸಿರುಗಟ್ಟಿ ಸಾಯುವವರೇ ಹೆಚ್ಚು.

ಸತ್ತವರಿಗೆ ಸ್ವರ್ಗ, ಪಾರಾದವರಿಗೆ ಮರುಜನ್ಮ

ಸತ್ತವರಿಗೆ ಸ್ವರ್ಗ, ಪಾರಾದವರಿಗೆ ಮರುಜನ್ಮ

ರಾತ್ರಿ ಗಡದ್ ನಿದ್ದೆ ಮಾಡುತ್ತಿರುವ ಹೊತ್ತಿನಲ್ಲಿ ಬೆಂಕಿ ಹೊತ್ತಿಕೊಂಡರೆ ಎತ್ತ ತಪ್ಪಿಸಿಕೊಳ್ಳುವುದು? ಕ್ಷಣಮಾತ್ರದಲ್ಲಿ ಕರ್ಟನ್, ರಗ್, ಬೆಡ್ ಶೀಟ್ ಗಳು ಬೆಂಕಿಗೆ ಆಹುತಿಯಾಗಿಬಿಡುತ್ತವೆ, ಜೊತೆಗೆ ಅವನ್ನು ಹೊದ್ದು ಮಲಗಿದವರೂ. ಇದರಲ್ಲಿ ಸಿಲುಕಿ ಸತ್ತವರು ಸ್ವರ್ಗ ಸೇರುತ್ತಾರೆ, ಪಾರಾಗಿ ಬಂದವರು ಮರುಜನ್ಮ ಪಡೆದಿರುತ್ತಾರೆ.

ಪತ್ತೆಗಾಗಿ ಬೆಂಗಳೂರಿನಲ್ಲಿ ಡಿಎನ್ಎ ಪರೀಕ್ಷೆ

ಪತ್ತೆಗಾಗಿ ಬೆಂಗಳೂರಿನಲ್ಲಿ ಡಿಎನ್ಎ ಪರೀಕ್ಷೆ

ಸುಟ್ಟು ಕರಕಲಾದ ದೇಹಗಳನ್ನು ಪತ್ತೆಗಾಗಿ ಬೆಂಗಳೂರಿನಲ್ಲಿರುವ ವಿಕ್ಟೋರಿಯಾ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ತರಲಾಗಿದೆ. ಡಿಎನ್ಎ ಪರೀಕ್ಷೆ ನಡೆಸುವ ಮೂಲಕ ಪತ್ತೆ ಹಚ್ಚಲಾಗುತ್ತಿದೆ. ಡಿಎನ್ಎ ಪರೀಕ್ಷೆ ನಡೆಸಿ ಗುರುತು ಪತ್ತೆ ಹಚ್ಚಿದ ನಂತರ ಸಂಬಂಧಿಕರಿಗೆ ಮೃತರ ದೇಹಗಳನ್ನು ನೀಡಲು ನಿರ್ಧರಿಸಲಾಗಿದೆ.

ಗುರುತು ಸಿಕ್ಕವರ ವಿವರಗಳು

ಗುರುತು ಸಿಕ್ಕವರ ವಿವರಗಳು

ಡಿಎನ್ಎ ಪರೀಕ್ಷೆಯ ಮೂಲಕ ಕೆಲವರ ಗುರುತನ್ನು ಪತ್ತೆಹಚ್ಚಲಾಗಿದೆ. ಅವರಲ್ಲಿ ಬೆಂಗಳೂರಿನ ಮಧು, ರಾಮಪ್ರಸಾದ್, ಸಿಎನ್ ಲಲಿತಾ, ಸಿಎನ್ ಪದ್ಮಾವತಿ ಮತ್ತು ಆಂಧ್ರಪ್ರದೇಶದ ಆದೋನಿಯ ಸರ್ವಮಂಗಳಾ ಅವರಿದ್ದಾರೆ. ದುರ್ಘಟನೆಯಲ್ಲಿ ಮೃತರಾದ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ಘೋಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+