Get Updates
Get notified of breaking news, exclusive insights, and must-see stories!

ಇದು ಭಾರತಕ್ಕೆ ದೊಡ್ಡ ಅವಮಾನ: ಇನ್ಫೋಸಿಸ್ ನಾರಾಯಣ ಮೂರ್ತಿ

ಬೆಂಗಳೂರು, ನವೆಂಬರ್‌ 16: ''ಭಾರತವು ಕೋವಿಡ್‌ ಉತ್ಪಾದಿಸುವ ಹಾಗೂ ದೇಶದ ಜನರಿಗೆ ಲಸಿಕೆ ಹಾಕುವ ಸಾಧನೆಯನ್ನು ಸಾಧಿಸಿದ್ದರೂ ಸಹ ಸಂಶೋಧನಾ ಕ್ಷೇತ್ರದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ'' ಎಂದು ಟೆಕ್‌ ದೈತ್ಯ ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರು ತಿಳಿಸಿದ್ದಾರೆ.

ಇನ್ಫೋಸಿಸ್‌ ಸೈನ್ಸ್‌ ಫೌಂಡೇಶನ್‌ ವತಿಯಿಂದ 6 ಮಂದಿ ಗಣ್ಯರಿಗೆ ಇನ್ಫೋಸಿಸ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಉತ್ಪಾದಿಸಿದ ಕೆಮ್ಮು ಸಿರಪ್‌ನಿಂದಾಗಿ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಸಾವನ್ನಪ್ಪಿದ್ದು, ಅದು ದೇಶಕ್ಕೆ ಆದ ದೊಡ್ಡ ಅವಮಾನ ಎಂದು ಹೇಳಿದ್ದಾರೆ.

100 ಕೋಟಿ ಕೋವಿಡ್‌ 19 ಲಸಿಕೆಗಳನ್ನು ತಯಾರಿಸಿದ ಮತ್ತು ಸರಬರಾಜು ಮಾಡಿದ ಕಂಪೆನಿಗಳನ್ನು ಶ್ಲಾಘಿಸಿದ ನಾರಾಯಣಮೂರ್ತಿ ಇದು ಅದ್ಭುತ ಸಾಧನೆಯಾಗಿದೆ. ಆದರೆ ಇಲ್ಲಿ ಉತ್ಪಾದಿಸಿದ ಕೆಮ್ಮು ಸಿರಪ್‌ನಿಂದ 66 ಮಕ್ಕಳು ಸಾವನ್ನಪ್ಪಿದ್ದು ಮಾತ್ರ ಖಂಡನೀಯ ಅವಮಾನ ಎಂದು ಹೇಳಿದರು.

ಪ್ರೊಫೆಸರ್‌ ಕಸ್ತೂರಿರಂಗನ್‌ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಹೊಸ ರಾಷ್ಟ್ರೀಯ ಶೀಕ್ಷಣ ನೀತಿಯನ್ನು ಹೊರತಂದಿರುವುದನ್ನು ನಾರಾಯಣಮೂರ್ತಿ ಶ್ಲಾಘಿಸಿದರು. ಅಲ್ಲದೆ ಪ್ರೊಫೆಸರ್‌ ಗಗನ್‌ದೀಪ್‌ ಕಾಂಗ್‌ ಹಾಗೂ ಇತರರು ಲಂಡನ್‌ನಲ್ಲಿರುವ ರಾಯಲ್ ಸೊಸೈಟಿ ಸಂಶೋಧಕರಾಗಿದ್ದಾರೆ. ಅಲ್ಲದೆ ಪ್ರೊಫೆಸರ್‌ ಅಶೋಕ್‌ ಸೇನ್‌ ಮಿಲೇನಿಯಂ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದೆಲ್ಲವೂ ನಮಗೆ ಪ್ರೇರಣೆ ಹಾಗೂ ಸಂತಸದ ಘಟನೆಗಳಾಗಿವೆ. ಭಾರತದ ಸಂಪೂರ್ಣವಾಗಿ ಈಗ ಬೆಳವಣಿಗೆ ಹಂತದಲ್ಲಿದೆ. ಆದರೆ ನಮಗೆ ಇನ್ನೂ ದೊಡ್ಡ ಸವಾಲುಗಳಿವೆ ಎಂದು ಹೇಳಿದರು.

ಡೆಂಗ್ಯೂ ಹಾಗೂ ಚಿಕನ್‌ಗುನ್ಯಾಕ್ಕೆ ಇನ್ನೂ ಮದ್ದಿಲ್ಲ

ಡೆಂಗ್ಯೂ ಹಾಗೂ ಚಿಕನ್‌ಗುನ್ಯಾಕ್ಕೆ ಇನ್ನೂ ಮದ್ದಿಲ್ಲ

2020ರಲ್ಲಿ ಘೋಷಿಸಲಾದ ವಿಶ್ವವಿದ್ಯಾನಿಲಯದ ಜಾಗತಿಕ ಶ್ರೇಯಾಂಕದ ಟಾಪ್‌ 250ರಲ್ಲಿ ಭಾರತದ ಉನ್ನತ ಶಿಕ್ಷಣ ಸಂಸ್ಥೆಯ ಒಂದೇ ಒಂದು ಸಂಸ್ಥೆಯೂ ಇಲ್ಲ. ನಾವು ತಯಾರಿಸಿದ ಲಸಿಕೆಗಳು ಮುಂದುವರಿದ ದೇಶಗಳ ತಂತ್ರಜ್ಞಾನವನ್ನು ಆಧರಿಸಿ ಅಥವಾ ಅಭಿವೃದ್ಧಿ ಹೊಂದಿದ ಸಂಶೋಧನೆಯ ಆಧಾರದ ಮೇಲೆ ಜಗತ್ತು ಉತ್ತೇಜನಗೊಂಡಿದೆ. ಆದರೆ ಕಳೆದ 70 ವರ್ಷಗಳಿಂದ ನಮ್ಮ ಜನರನ್ನು ಕಾಡುತ್ತಿರುವ ಡೆಂಗ್ಯೂ ಹಾಗೂ ಚಿಕನ್‌ಗುನ್ಯಾ ರೋಗಗಳಿಗೆ ಇನ್ನೂ ಲಸಿಕೆಯನ್ನು ಕಂಡುಹಿಡಿಯಲಾಗಿಲ್ಲ ಎಂದು ಅವರು ತಿಳಿಸಿದರು.

ಔಷಧೀಯ ನಿಯಂತ್ರಣ ಸಂಸ್ಥೆಯ ವಿಶ್ವಾಸಾರ್ಹತೆ ಕುಗ್ಗಿದೆ

ಔಷಧೀಯ ನಿಯಂತ್ರಣ ಸಂಸ್ಥೆಯ ವಿಶ್ವಾಸಾರ್ಹತೆ ಕುಗ್ಗಿದೆ

ಮುಂದುವರಿದು ಭಾರತದಲ್ಲಿ ಉತ್ಪಾದಿಸಿದ ಕೆಮ್ಮಿನ ಸಿರಪ್‌ನಿಂದಾಗಿ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು ನಮ್ಮ ದೇಶಕ್ಕೆ ಊಹಿಸಲಾಗದ ಅವಮಾನವನ್ನು ತಂದಿದೆ. ಇದರಿಂದ ನಮ್ಮ ದೇಶದ ಔಷಧೀಯ ನಿಯಂತ್ರಣ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಕುಗ್ಗಿಸಿದೆ. ಆದರೆ ಇದಕ್ಕೆ ಒಂದು ಪರಿಹಾರವಿದೆ. ಅದು ಕಷ್ಟಕರವಾಗಿದ್ದು, ಅದನ್ನು ದೇಶ ಆರಿಸಿಕೊಂಡಿದೆ ಎಂದರು.

ಅನುದಾನ, ವಿಳಂಬ ಧೋರಣೆಯೇ ಕಾರಣ

ಅನುದಾನ, ವಿಳಂಬ ಧೋರಣೆಯೇ ಕಾರಣ

ತಕ್ಷಣದ ಸಮಸ್ಯೆಗಳನ್ನು ಪರಿಹರಿಸಲು ಭಾರತದಲ್ಲಿ ಸಂಶೋಧನೆಯನ್ನು ಬಳಸಲು ಚಿಕ್ಕ ವಯಸ್ಸಿನಲ್ಲಿಯೇ ಕುತೂಹಲವನ್ನು ಹುಟ್ಟುಹಾಕುವ ಕೊರತೆ ಶುದ್ಧ ಮತ್ತು ಅನ್ವಯಿಕ ಸಂಶೋಧನೆಗಳ ನಡುವೆ ಸಂಪರ್ಕ ಕಡಿತ, ಉನ್ನತ ಶಿಕ್ಷಣ ಸಂಸ್ಥಗಳಲ್ಲಿ ಅಸಮರ್ಪಕ ಅತ್ಯಾಧುನಿಕ ಸಂಶೋಧನಾ ಮೂಲಸೌಕರ್ಯ ಕಾರಣ ಎಂದು ಅನೇಕ ತಜ್ಞರು ಭಾವಿಸುತ್ತಾರೆ. ಇದಕ್ಕೆ ಜಾಗತಿಕ ಸಂಶೋಧನಾ ಸಂಸ್ಥೆಗಳೊಂದಿಗೆ ಜ್ಞಾನ ಹಂಚಿಕೆಗಾಗಿ ಸಂಶೋಧನೆ ಮತ್ತು ಅಸಮರ್ಪಕ ವೇದಿಕೆಗಳನ್ನು ರಚಿಸುವಲ್ಲಿ ಸಾಕಷ್ಟು ಅನುದಾನಗಳು ಹಾಗೂ ವಿಳಂಬ ಧೋರಣೆಯೇ ಕಾರಣ ಎಂದು ಹೇಳಿದರು.

ಸಾಕ್ರೆಟಿಕ್ ಪ್ರಶ್ನೆಗಳ ಕಡೆಗೆ ಬೋಧಿಸಿ

ಸಾಕ್ರೆಟಿಕ್ ಪ್ರಶ್ನೆಗಳ ಕಡೆಗೆ ಬೋಧಿಸಿ

ಆವಿಷ್ಕಾರ ಅಥವಾ ನಾವೀನ್ಯತೆಯಲ್ಲಿ ಯಶಸ್ಸಿಗೆ ಹಣವು ಪ್ರಾಥಮಿಕ ಸಂಪನ್ಮೂಲವಲ್ಲ ಎಂದ ನಾರಾಯಾಣಮೂರ್ತಿ ಅವರು ಸಂಶೋಧನೆಗೆ ಯಶಸ್ಸಿಗೆ ಎರಡು ನಿರ್ಣಯಕ ಅಂಶಗಳಿವೆ. ಅದರಲ್ಲಿ ಮೊದಲನೆಯದು ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಸಾಕ್ರೆಟಿಕ್ ಪ್ರಶ್ನೆಗಳ ಕಡೆಗೆ ಹೊಸ ದಿಗ್ದರ್ಶನದ ಬೋಧನೆ ಹಾಗೂ ಅವರು ತರಗತಿಗಳಲ್ಲಿ ಕಲಿತದ್ದನ್ನು ಉತ್ತೀರ್ಣರಾಗುವ ಬದಲು ತಮ್ಮ ಸುತ್ತಲಿನ ನೈಜ ಪ್ರಪಂಚದ ಸಮಸ್ಯೆಗಳಿಗೆ ತಾಳೆ ಹಾಕಿ ನೋಡುವುದಾಗಿದೆ. ಎರಡನೇಯದಾಗಿ ಸಂಶೋಧಕರು ತಕ್ಷಣದ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸುವುದಾಗಿದೆ. ಅಂತಹ ಮನಸ್ಥಿತಿಯು ಅನಿವಾರ್ಯವಾಗಿ ದೊಡ್ಡ ಸವಾಲಗಳನ್ನು ಪರಿಹರಿಸಲು ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+