ಬೆಂಗಳೂರಿನ ಇಂದಿರಾನಗರದಲ್ಲಿ ರೋಬೋಟ್ ರೆಸ್ಟೋರೆಂಟ್ ಆರಂಭ
ಬೆಂಗಳೂರು, ಆಗಸ್ಟ್ 19: ಶಿವಮೊಗ್ಗದ ಹೋಟೆಲ್ ವೊಂದರಲ್ಲಿ ರೋಬೋಟ್ ಗಳನ್ನು ವೇಟರ್ ಗಳಲ್ಲಿ ಬಳಸಿದ ಪ್ರಯೋಗ ಯಶಸ್ವಿಯಾಗಿದ್ದು, ಈಗ ಬೆಂಗಳೂರಿನ ಇಂದಿರಾನಗರದಲ್ಲಿ ಮೊಟ್ಟ ಮೊದಲ ಪೂರ್ಣಪ್ರಮಾನದ ರೋಬೋಟ್ ರೆಸ್ಟೋರೆಂಟ್ ಆರಂಭವಾಗಲಿದೆ.
ಚೆನ್ನೈ, ಕೊಯಮತ್ತೂರು ಮತ್ತು ಹೈದರಾಬಾದ್‌ಗಳಲ್ಲಿ ಈಗಾಗಲೇ ರೋಬೋ ರೆಸ್ಟೋರೆಂಟ್ ಗಳು ಜನಪ್ರಿಯಗೊಳ್ಳುತ್ತಿವೆ. ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಆರಂಭವಾಗಲಿರುವ ಈ ವಿಶೇಷ ರೆಸ್ತೋರೆಂಟ್ ನಲ್ಲಿ ರೋಬೋಗಳು ವೇಟರ್ಸ್ ಹಾಗೂ ರಿಸೆಪ್ಷನಿಸ್ಟ್‌ಗಳಾಗಿ ಕಾರ್ಯನಿರ್ವಹಿಸಲಿವೆ.
ಇಂಡೋ-ಏಷ್ಯನ್ ಖಾದ್ಯಗಳ ಮೆನು, 50 ಮಂದಿಗೆ ಕುಳಿತುಕೊಳ್ಳುವ ಆಸನ ವ್ಯವಸ್ಥೆ ಇರಲಿದೆ. ಈ ರೆಸ್ಟೋರೆಂಟ್ ನಲ್ಲಿ ಒಟ್ಟು 6 ರೋಬೋಟ್ ಗಳು ಕಾರ್ಯ ನಿರ್ವಹಿಸಲಿದ್ದು, ಇದರಲ್ಲಿ 5 ಬೇರರ್ ಆಗಿ ಕಾಣಿಸಿಕೊಳ್ಳಲಿವೆ.

"ಇಂಗ್ಲಿಷ್ ಹಾಗೂ ತಮಿಳು ಮತ್ತು ತೆಲುಗಿನಲ್ಲಿ ಸಂವಹನ ನಡೆಸಬಲ್ಲ ರೋಬೋಗಳು ಬೇರೆಡೆ ಕಾರ್ಯ ನಿರ್ವಹಿಸಿವೆ. ಬೆಂಗಳೂರಿನ ರೆಸ್ಟೋರೆಂಟ್ ನಲ್ಲಿನ ರೋಬೋಗಳು ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಗ್ರಾಹಕರೊಡನೆ ಮಾತನಾಡಬಲ್ಲವು. ವಿಶೇಷ ಸಂದರ್ಭಗಳಲ್ಲಿ ಗ್ರಾಹಕರಿಗೆ ವಿಷ್ ಮಾಡುವುದು, ಬರ್ಥ್ ಡೇ ಸಾಂಗ್ ಹಾಡುವುದನ್ನು ಮಾಡಬಲ್ಲವು, ಬೆಂಗಳೂರಿನ ವೈವಿಧ್ಯತೆಗೆ ಇದು ಹೊಸ ಸೇರ್ಪಡೆ' ಎಂದು ರೆಸ್ಟೋರೆಂಟ್ ಮಾಲೀಕ ವೆಂಕಟೇಶ್ ರಾಜೇಂದ್ರನ್ ತಿಳಿಸಿದ್ದಾರೆ.
ಪ್ರತಿ ಟೇಬಲ್ ಮೇಲೆ ಆರ್ಡರ್ ಮಾಡಲು ಟ್ಯಾಬ್ಲೆಟ್ ಗಳಿರಲಿದ್ದು, ರೋಬೋಗಳಿಗೆ ಮೆನುವಿನಲ್ಲಿರುವ ಐಟಮ್ ಆರ್ಡರ್ ಮಾಡಿ, ಸರ್ವೀಸ್ ಪಡೆಯಬಹುದು.












Click it and Unblock the Notifications