ವಿಜಯ ಮಲ್ಯನೂ ಅಲ್ಲ, ಅಜೀಂ ಪ್ರೇಮ್ಜಿಯೂ ಅಲ್ಲ: ಬೆಂಗಳೂರಿನ ಈ ಕ್ಷೌರಿಕನ ಬಳಿ ಇವೆ 400 ಇಂಪೊರ್ಟೆಡ್ ಕಾರುಗಳು
ಭಾರೀ ಮಹತ್ವಾಕಾಂಕ್ಷೆಯನ್ನು ಹೊಂದಿರುವ ವ್ಯಕ್ತಿಗಳು ಉತ್ತಮ ಯಶಸ್ಸನ್ನು ಸಾಧಿಸಲು ಅಚಲವಾದ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಸದಾ ಮುನ್ನುಗ್ಗುತ್ತಿರುತ್ತಾರೆ. ಇದಕ್ಕೆ ಪ್ರಮುಖ ಉದಾಹರಣೆಯೆಂದರೆ ಬೆಂಗಳೂರಿನ ಕೋಟ್ಯಾಧಿಪತಿ ಕ್ಷೌರಿಕ ರಮೇಶ್ ಬಾಬು ಅವರು. ಇವರು 400ಕ್ಕೂ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಹಾಗಾದರೆ ಇವರ ಹಿನ್ನೆಲೆ ಏನು ಎಂದು ಇಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಯಶಸ್ಸು ಅನ್ನುವುದು ಸುಮ್ಮನೆ ಬುರುವುದಿಲ್ಲ, ಶ್ರಮ ಹಾಕಿದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎನ್ನುವುದಕ್ಕೆ ಕ್ಷೌರಿಕ ರಮೇಶ್ ಅವರೇ ಉತ್ತಮ ಸಾಕ್ಷಿ ಆಗಿದ್ದಾರೆ. ನಿಧಾನಗತಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನುಗುತ್ತಾ ಬಂದ ಬೆಂಗಳೂರಿನ ಕ್ಷೌರಿಕ ರಮೇಶ್ ಬಾಬು ಅವರು ಬಿಲಿಯನೇರ್ ಕ್ಷೌರಿಕ ಎಂದು ಪ್ರಖ್ಯಾತಿ ಹೊಂದಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಐಷಾರಾಮಿ ಕಾರುಗಳ ಮಾಲೀಕರಾಗಿರುವ ರಮೇಶ್ ಬಾಬು ಅವರು ರೋಲ್ಸ್ ರಾಯ್ಸ್, ಮರ್ಸಿಡಿಸ್ ಮೇಬ್ಯಾಚ್, ರೇಂಜ್ ರೋವರ್ಸ್ ಮತ್ತು ಬೆಂಟ್ಲೀಸ್ ಸೇರಿದಂತೆ ಸುಮಾರು 400ಕ್ಕೂ ಅಧಿಕ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ.
ರಮೇಶ್ ಬಾಬು ಅವರ ಪ್ರಯಾಣವು ಸವಾಲಿನ ಹಾದಿಯ ಮೂಲಕ ಪ್ರಾರಂಭವಾಯಿತು. ಅವರ ತಂದೆಯ ಮರಣದ ನಂತರ, ಅವರ ತಾಯಿ ಮನೆಕೆಲಸಗಾರರಾಗಿ ಕೆಲಸ ಮಾಡುವ ಕುಟುಂಬದ ಪ್ರಮುಖ ಆಧಾರ ಸ್ತಂಭವಾದರು. ಇನ್ನು ಮಗ ರಮೇಶ್ ಚಿಕ್ಕವನಿದ್ದಾಗ ತನ್ನ ತಾಯಿಗೆ ಸಹಾಯ ಮಾಡಲು ವಿವಿಧ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದನು.
ರಮೇಶ್ ಹತ್ತನೇ ತರಗತಿ ಮುಗಿಸಿದ ನಂತರ, ಅವರು ತನ್ನ ತಂದೆಯ ಅಂಗಡಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡನು. ನಂತರ ಹಗಲಿರುಳೆನ್ನದೆ ದುಡಿದ, ಅವರ ಅಚಲ ಬದ್ಧತೆ ಮತ್ತು ಸಮರ್ಪಣೆ ವಿನಮ್ರ ಕ್ಷೌರಿಕನ ಅಂಗಡಿಯನ್ನು ಟ್ರೆಂಡಿ ಮತ್ತು ಸ್ಟೈಲಿಶ್ ಹೇರ್ ಸಲೂನ್ ಆಗಿ ಪರಿವರ್ತಿಸಲು ಕಾರಣವಾಯಿತು.
ರಮೇಶ್ ಬಾಬು ಅವರು 7 ವರ್ಷ ವಯಸ್ಸಿರುವಾಗಲೇ ಅವರ ತಂದೆ ನಿಧನರಾದರು. ರಮೇಶ್ ತಂದೆ ಕ್ಷೌರಿಕರಾಗಿದ್ದರು. ರಮೇಶ್ ಬಾಬು ತನ್ನ ತಂದೆಯು ಅನಿರೀಕ್ಷಿತವಾಗಿ ಮೃತಪಟ್ಟಾಗ, ತಾಯಿಯು ಅನಿವಾರ್ಯವಾಗಿ 5 ರೂಪಾಯಿಗೆ ಸಲೂನ್ ಅನ್ನು ಅಂಕಲ್‌ಗೆ ಅಡವಿರಿಸಬೇಕಾಗಿ ಬಂತು. ಪ್ರತೀ ದಿನ 5 ರೂಪಾಯಿ ಕೊಡುವ ಒಪ್ಪಂದದಂತೆ ಅವರ ಅಂಗಡಿಯನ್ನು ಚಿಕ್ಕಪ್ಪನವರು ವಹಿಸಿಕೊಳ್ಳುತ್ತಾರೆ.
ಅವರು ಕೊಡುವ 5 ರೂಪಾಯಿಗಳಲ್ಲಿ ರಮೇಶ್ ಅವರ ತಾಯಿ, ಸಹೋದರ ಮತ್ತು ಸಹೋದರಿಯರ ಪ್ರತಿನಿತ್ಯದ ಅವಶ್ಯಕತೆಗಳು ಮತ್ತು ವಿದ್ಯಾಭ್ಯಾಸಕ್ಕೆ ಸಾಲುತ್ತಿರಲಿಲ್ಲ. ಆದ್ದರಿಂದ ಅವರ ತಾಯಿ ನಾಲ್ಕಾರು ಮನೆಗಳಲ್ಲಿ ಮನೆಗೆಲಸ ಮಾಡಬೇಕಾಗಿ ಬಂತು. ಬಳಿಕ ರಮೇಶ್ ಬಾಬು ಕುಟುಂಬದ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಪತ್ರಿಕೆ ಮಾರಾಟ ಸೇರಿದಂತೆ ಹಲವಾರು ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು.
ಈ ವೇಳೆ ರಮೇಶ್ ಬಾಬು ಕುಟುಂಬಸ್ಥರಿಗೆ ಒಂದೊತ್ತಿನ ಊಟಕ್ಕೂ ಹಣವಿಲ್ಲದೇ, ಹಸಿವಿನಿಂದಲೇ ಪರದಾಡುವ ಪರಿಸ್ಥಿತಿ ಇತ್ತು. ಕೆಲವೊಮ್ಮೆ ಹಸಿವಿನಿಂದ ಉಪವಾಸ ಮಲಗಬೇಕಾಗುತ್ತಿತ್ತು. ಆದರೆ ರಮೇಶ್ ಬಾಬು ನಂತರ 1990ರ ದಶಕದಲ್ಲಿ ಸಲೂನ್ ಉದ್ಯಮವನ್ನು ಪ್ರಾರಂಭಿಸಿದ್ದು, ಈ ಉದ್ಯಮದಲ್ಲೇ ರಮೇಶ್ ಬಾಬು ಉತ್ತಮ ಹಣ ಸಂಪಾದನೆ ಮಾಡಲು ಆರಂಭಿಸಿದರು.
ಬಳಿಕ ಈ ಮೂಲಕ ಅವರು ಹಣ ಉಳಿತಾಯ ಮಾಡಿ ಮಾರುತಿ ಓಮ್ನಿ ಕಾರನ್ನು ಪಡೆದು ಬಾಡಿಗೆ ನೀಡಲು ಪ್ರಾರಂಭಿಸಿದರು. ನಂತರ ರಮೇಶ್ ಬಾಬು ಅವರು "ರಮೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್" ಎಂಬ ಕಾರು ಬಾಡಿಗೆ ಹಾಗೂ ಸೆಲ್ಫ್ ಡ್ರೈವ್ ವೆಂಚರ್ ಅನ್ನು ಆರಂಭ ಮಾಡಿದರು. ಹೀಗೆ ದಿನಗಳೆದಂತೆ ಮರ್ಸಿಡಿಸ್ ಇ ಕ್ಲಾಸ್ ಸೆಡಾನ್ ಖರೀಸುವ ಮೂಲಕ ಬೆಂಗಳೂರಿನಲ್ಲಿ ಐಷಾರಾಮಿ ಕಾರುಗಳನ್ನು ಬಾಡಿಗೆ ನೀಡುವ ಮೊದಲ ವ್ಯಕ್ತಿ ಎಂಬ ಪ್ರಖ್ಯಾತಿಯನ್ನು ಹೊಂದಿದರು.
ಇಷ್ಟಕ್ಕೆ ರಮೇಶ್ ಅವರು ಸುಮ್ಮನೆ ಕೂರದೇ, 3 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಖರೀದಿ ಮಾಡಿದರು. ಜೊತೆಗೆ ಬಿಎಂಡಬ್ಲ್ಯೂ, ಜಾಗ್ವಾರ್, ಬೆಂಟ್ಲಿ ಲಕ್ಸುರಿ ಸೆಡಾನ್ಸ್‌ನಂತಹ ಐಷಾರಾಮಿ ಕಾರುಗಳನ್ನು ಬಾಡಿಗೆ ನೀಡಲು ಪ್ರಾರಂಭ ಮಾಡಿದರು. 2017ರಲ್ಲಿ ರಮೇಶ್ ಬಾಬು ಅವರು 2.6 ಕೋಟಿಯ ರೂಪಾಯಿ ಮೌಲ್ಯದ ಮೇಬ್ಯಾಚ್ S600 ಕಾರು ಖರೀದಿಸುವ ಮೂಲಕ ಗಮನ ಸೆಳೆದಿದ್ದರು.
ಹೀಗೆ ಕಾಲ ಬದಲಾದಂತೆ ರಮೇಶ್ ಬಾಬು ಅವರ ಬಾಡಿಗೆ ಕಾರುಗಳ ಸೇವೆಯನ್ನು ಖ್ಯಾತ ತಾರೆಯರಾದ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್, ಅಮೀರ್ ಖಾನ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಬಳಕೆ ಮಾಡಲು ಪ್ರಾರಂಭಿಸಿದರು. ಬಿಲಿಯನೇರ್ ಅದರೂ ಕೂಡ ರಮೇಶ್ ತಮ್ಮ ದಿನದ ಕಾಲು ಭಾಗವನ್ನು ತಮ್ಮ ಸಲೂನ್‌ನಲ್ಲಿಯೇ ಕಳೆಯುತ್ತಾರೆ ಎಂಬುದು ವಿಶೇಷವಾಗಿದೆ.












Click it and Unblock the Notifications