ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕೊರೊನಾ ಲಸಿಕೆ ಪಡೆದವರೂ ಸೇರಿ 13 ಮಂದಿ ಬಿಎಂಸಿಆರ್‌ಐ ಆರೋಗ್ಯ ಸಿಬ್ಬಂದಿಗೆ ಸೋಂಕು

|
Google Oneindia Kannada News

ಬೆಂಗಳೂರು, ಏಪ್ರಿಲ್ 5: ಕೊರೊನಾ ಲಸಿಕೆ ಪಡೆದವರೂ ಸೇರಿ 13 ಮಂದಿ ಬಿಎಂಆರ್‌ಸಿಆರ್‌ಐ ಆರೋಗ್ಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.

ಪ್ರಸ್ತುತ ಸೋಂಕಿತರನ್ನು ಪ್ರತ್ಯೇಕ ಹಾಸ್ಟೆಲ್ ಕೋಣೆಗಳಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. ಇನ್ನು ಸೋಂಕಿಗೆ ತುತ್ತಾಗಿರುವ ಈ 13 ಮಂದಿ ಸಿಬ್ಬಂದಿಗಳಿಗೆ ಯಾವುದೇ ಪ್ರಯಾಣದ ಇತಿಹಾಸವಿಲ್ಲ ಬಿಎಂಸಿಆರ್ಐನ ಕೋವಿಡ್ -19 ನೋಡಲ್ ಅಧಿಕಾರಿ ಡಾ.ಸ್ಮಿತಾ ಸೆಗು ದೃಢ ಪಡಿಸಿದ್ದಾರೆ. ಅದಾಗ್ಯೂ ಸೋಂಕು ಹೇಗೆ ತಗುಲಿತು ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

ಅಮೆರಿಕದಲ್ಲಿ ಮೊದಲ 'ಭಾರತದ ರೂಪಾಂತರ' ವೈರಸ್ ಪ್ರಕರಣ ಪತ್ತೆ

ಕೋವಿಡ್ ಲಸಿಕೆ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆಯೇ ಹೊರತು ಸೋಂಕನ್ನು ತಡೆಯುವುದಿಲ್ಲ. ಆದರೆ ಲಸಿಕೆ ಪಡೆದ ಬಳಿಕ ಸೋಂಕಿಗೆ ತುತ್ತಾದರೆ ಅದರ ತೀವ್ರ ಕಡಿಮೆ ಇರುತ್ತದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಕೋವಿಡ್ 19 ಲಸಿಕೆ ಪಡೆದವರೂ ಇದ್ದಾರೆ

ಕೋವಿಡ್ 19 ಲಸಿಕೆ ಪಡೆದವರೂ ಇದ್ದಾರೆ

ಆಘಾತಕಾರಿ ವಿಚಾರ ಎಂದರೆ ಸೋಂಕಿಗೆ ತುತ್ತಾದವರ ಪೈಕಿ ಕೋವಿಡ್ ಲಸಿಕೆ ಪಡೆದವರೂ ಸೇರಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಸೋಂಕಿಗೆ ತುತ್ತಾದ 13 ಮಂದಿ ವೈದ್ಯಕೀಯ ಸಿಬ್ಬಂದಿಗಳಲ್ಲಿ ಬಹುತೇಕರು ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕಿನ ತೀವ್ರತೆ ಇಲ್ಲ

ಸೋಂಕಿನ ತೀವ್ರತೆ ಇಲ್ಲ

ಇತ್ತೀಚೆಗೆ, ಲಸಿಕೆ ಎರಡನೆಯ ಡೋಸ್ ಪಡೆದ ಶ್ರೀ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್‌ನ ಇಬ್ಬರು ವಿದ್ಯಾರ್ಥಿಗಳು ಕೂಡ ಸೋಂಕಿಗೆ ತುತ್ತಾಗಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆಯ ನಿರ್ದೇಶಕ ಡಾ ಸಿ ಎನ್ ಮಂಜುನಾಥ್ ಅವರು, '"ಸುಮಾರು 14 ದಿನಗಳ ಹಿಂದೆ, ಇಬ್ಬರು ದಾದಿಯರು ವ್ಯಾಕ್ಸಿನೇಷನ್ ಪಡೆದ ನಂತರವೂ ಸೋಂಕಿಗೆ ತುತ್ತಾಗಿದ್ದರು. ಆದರೆ ಅವರಲ್ಲಿ ಸೋಂಕಿನ ತೀವ್ರತೆ ಇರಲಿಲ್ಲ ಎಂದು ಹೇಳಿದರು.

ಬೇಜವಾಬ್ದಾರಿ ಪ್ರದರ್ಶಿಸಬೇಡಿ

ಬೇಜವಾಬ್ದಾರಿ ಪ್ರದರ್ಶಿಸಬೇಡಿ

ಇನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಲಸಿಕೆ ಪಡೆದ ಬಳಿಕ ಸೋಂಕಿಗೆ ತುತ್ತಾದ ಸೋಂಕಿತರ ಪ್ರಕರಣಗಳು ದಾಖಲಾಗುತ್ತಿವೆ. ಮೊದಲ ಡೋಸ್ ಅಥವಾ 2ನೇ ಡೋಸ್ ಲಸಿಕೆ ಪಡೆದ ಬಳಿಕ ಜನರು ತಮಗೆ ಸೋಂಕು ತಗುಲುವುದಿಲ್ಲ ಎಂದು ಧೈರ್ಯದಿಂದ ಬೇಜವಾಬ್ದಾರಿಯಾಗಿರುತ್ತಾರೆ.

ಇದರಿಂದ ಅವರಿಗೆ ಮತ್ತೆ ಸೋಂಕು ಒಕ್ಕರಿಸುತ್ತದೆ. ಆದರೆ ಕೋವಿಡ್ ಲಸಿಕೆ ಪಡೆದ ಹೊರತಾಗಿಯೂ ಪ್ರಾಥಮಿಕ ಕೋವಿಡ್ ಮಾರ್ಗದರ್ಶಿ ಸೂತ್ರಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮತ್ತು ಆಗಾಗ ಕೈಗಳನ್ನು ತೊಳೆಯುವುದನ್ನು ಮುಂದುವರೆಸಬೇಕು. ಅಲ್ಲದೆ ಸ್ಯಾನಿಟೈಸರ್ ಗಳ ಬಳಕೆ ಕೂಡ ಉತ್ತಮ ಎಂದು ಹೇಳಿದ್ದಾರೆ.

Recommended Video

ಕೇಂದ್ರದಿಂದ ರಾಜ್ಯಕ್ಕೆ 15 ಲಕ್ಷ ಡೋಸ್ ಲಸಿಕೆ ಬಂದಿದೆ-ಆರೋಗ್ಯ ಸಚಿವ ಡಾ.ಕೆ ಸುಧಾಕರ್ | Oneindia Kannada
ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು

ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು

ಬಿಎಂಸಿಆರ್ ಐ ನ ಕೆಲ ಎಂಬಿಬಿಎಸ್ ವಿದ್ಯಾರ್ಥಿಗಳಲ್ಲಿ ಮೊದಲು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು. ಬಳಿಕ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳನ್ನು ಸೋಂಕು ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ 13 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಈ 13 ಮಂದಿಯಲ್ಲಿ ಕೆಲವರು ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದಿದ್ದರು. ಲಸಿಕೆ ಪಡೆದವರಲ್ಲಿ ಸೋಂಕಿನ ತೀವ್ರತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
As many as 13 medical students of the Bengaluru Medical College and Research Institute (BMCRI) have been tested Covid positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X