ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಿಲ್ಲಿಯಿಂದ ಬೆಂಗಳೂರಿಗೆ ಕಳ್ಳತನ ಮಾಡೋಕೆ ವಿಮಾನದಲ್ಲಿ ಬರುತ್ತಿದ್ದ!

|
Google Oneindia Kannada News

Recommended Video

ಖತರ್ನಾಕ್ ಕಳ್ಳನನ್ನು ಬಂದಿಸಿದ ಬೆಂಗಳೂರು ಪೊಲೀಸರು | Oneindia Kannada

ಬೆಂಗಳೂರು, ಸೆಪ್ಟೆಂಬರ್ 17: ಕಳ್ಳತನ ಮಾಡಲು ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುತ್ತಿದ್ದ ಕಳ್ಳನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಆತನಿಂದ ಸುಮಾರು 45 ಲಕ್ಷ ರೂ, ಮೌಲ್ಯದ ಒಂದೂವರೆ ಕೆಜಿಯಷ್ಟು ಚಿನ್ನಾಭರಣ, 2 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ದೆಹಲಿ ನಿವಾಸಿ ಹರ್ಮಾನ್ ಖಾನ್(26) ಬಂಧಿತ.
ಈತ ಹರಿಯಾಣ ಪಂಜಾಬ್ ನಲ್ಲಿ ಒಂದು ಗ್ಯಾಂಗ್ ತಯಾರು ಮಾಡಿದ್ದ, ಗ್ಯಾಂಗ್ ನಲ್ಲಿರುವ ಸದಸ್ಯರನ್ನು ಬೇರೆ ಬೇರೆ ಕಡೆಗೆ ಕಳುಹಿಸುತ್ತಿದ್ದ, ಬೀಗ ಹಾಕಿರುವ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ, ಬೆಂಗಳೂರಿಗೆ ಮೂರು ತಿಂಗಳಿಗೊಮ್ಮೆ ದೆಹಲಿಯಿಂದ ಬಂದು ಕಳ್ಳತನ ಮಾಡುತ್ತಿದ್ದ ಎನ್ನುವುದು ವಿಚಾರಣೆ ಬಳಿಕ ಬೆಳಕಿಗೆ ಬಂದಿದೆ.

ಬೆಂಗಳೂರು: ಕಳ್ಳನ ಕಿರುಬೆರಳ ಸಮೇತ ಠಾಣೆಗೆ ಬಂದು ದೂರು ನೀಡಿದ ಮಹಿಳೆ! ಬೆಂಗಳೂರು: ಕಳ್ಳನ ಕಿರುಬೆರಳ ಸಮೇತ ಠಾಣೆಗೆ ಬಂದು ದೂರು ನೀಡಿದ ಮಹಿಳೆ!

ದೆಹಲಿ ಮತ್ತು ಮುಂಬೈನಿಂದ ವಿಮಾನ ಹತ್ತಿದರೆ ಚೆನ್ನೈಗೆ ಬಂದು ಇಳಿದುಕೊಳ್ಳುತ್ತಿದ್ದ, ನಗರದ ಐಷಾರಾಮಿ ಹೋಟೆಲ್ ಗಳಲ್ಲಿ ಉಳಿಯುತ್ತಿದ್ದ, ಹೋಟೆಲ್ ನಿಂದ ಬರುವಾಗ ಕ್ಯಾಬ್ ಗಳನ್ನು ಬುಕ್ ಮಾಡುತ್ತಿದ್ದ, ಮೊದಲೇ ನಿರ್ಧರಿಸಿಕೊಂಡ ಪ್ರದೇಶಕ್ಕೆ ಕ್ಯಾಬ್ ನಲ್ಲಿ ಬರುತ್ತಿದ್ದ ಈತ ನಂತರ ದ್ವಿಚಕ್ರ ವಾಹನದಲ್ಲಿ ಖಾಲಿ ಮನೆಗಳನ್ನು ಗುರುತು ಹಿಡಿಯಲು ತೆರಳುತ್ತಿದ್ದ ಎನ್ನಲಾಗಿದೆ.

Thief travels from Delhi to Bengaluru-in flight!

ಕೃತ್ಯ ಎಸಗಿದ ನಂತರ ಒಂದಷ್ಟು ಚಿನ್ನಾಭರಣಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ, ಉಳಿದಿದ್ದನ್ನು ತನ್ನದೇ ಆಭರಣ ಎನ್ನುವಂತೆ ಧರಿಸಿ ವಿಮಾನದಲ್ಲಿ ತೆರಳುತ್ತಿದ್ದ, ಉಳಿದವುಗಳನ್ನು ತನ್ನ ಗೆಳತಿ ಅಥವಾ ಕುಟುಂಬ ಸದಸ್ಯರನ್ನು ಕರೆಸಿ ರೈಲಿನ ಮೂಲಕ ದೆಹಲಿಗೆ ರವಾನಿಸುತ್ತಿದ್ದ ಎಂದು ತಿಳಿದು ಬಂದಿದೆ.

ಹೈದರಾಬಾದ್ ನಿಜಾಮರ ಕದ್ದ ಟಿಫನ್ ಬಾಕ್ಸ್ ನಲ್ಲೇ ಊಟ ಮಾಡ್ತಿದ್ದ ಕಳ್ಳ ಹೈದರಾಬಾದ್ ನಿಜಾಮರ ಕದ್ದ ಟಿಫನ್ ಬಾಕ್ಸ್ ನಲ್ಲೇ ಊಟ ಮಾಡ್ತಿದ್ದ ಕಳ್ಳ

ಆತ ಬ್ಯಾಗ್ ಹಾಕಿಕೊಂಡು, ಪುಸ್ತಕ ಹಿಡಿದುಕೊಂಡು ವಿದ್ಯಾರ್ಥಿ ಸೋಗಿನಲ್ಲಿ ಬಂದು ಕೈಚಳಕ ತೋರಿಸುತ್ತಿದ್ದ.

English summary
It's like a story of Hindi film DHOOM as a thief was traveled from Delhi to Bengaluru through flight and stayed at luxurious hotel. But Bengaluru police have finally arrested him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X