ಈ ಬಿಎಂಟಿಸಿ ನಿಲ್ದಾಣಗಳಲ್ಲಿ ಸಿಗಲಿದೆ ಪುಕ್ಕಟೆ ವೈ-ಫೈ
ಬೆಂಗಳೂರಿನ ಕೆಲವು ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ಪುಕ್ಕಟೆ ವೈಫೈ ಸೇವೆ ಒದಗಿಸಲು ಬಿಎಂಟಿಸಿ ಅಧಿಕಾರಿಗಳು ಚಿಂತನೆ ನಡೆಸಲಿದ್ದಾರೆ. ಸದ್ಯದಲ್ಲಿಯೇ ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ಬರಲಿದೆ
ಬೆಂಗಳೂರು, ಮೇ 9: ಇನ್ನು ಮುಂದೆ ಬಿಎಂಟಿಸಿ ಬಸ್ ಗಳಿಗೆ ಕಾದು ಬೋರೆದ್ದು ಹೋಯಿತು ಎಂದು ನಿಡುಸುಯ್ಯುವ, ಬೇಸರಪಡುವ ಅಗತ್ಯವಿಲ್ಲ. ಏಕೆಂದರೆ ಬೆಂಗಳೂರಿನ ಕೆಲವು ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪುಕ್ಕಟೆ ವೈ-ಫೈ ಸೌಲಭ್ಯ ಒದಗಿಸಲು ಬಿಎಂಟಿಸಿ ಅಧಿಕಾರಿಗಳು ಯೋಜನೆಯನ್ನು ರೂಪಿಸಿದ್ದಾರೆ.
ಬಿಎಂಟಿಸಿ ಅಧಿಕಾರಿ ನಾಗೇಂದ್ರ ಪ್ರಕಾರ, ಇಂಟರ್ ನೆಟ್ ಸೌಕರ್ಯ ಒದಗಿಸಲು ಖಾಸಗಿ ಸಂಸ್ಥೆಯೊಂದರ ಜತೆ ಈಗಾಗಲೇ ಮಾತುಕತೆ ನಡೆದಿದೆ. ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿ ನಗರ, ಶಾಂತಿ ನಗರ, ಬನಶಂಕರಿ, ಯಶವಂತಪುರ, ಜಯನಗರ, ಕೆಂಗೇರಿ, ವೈಟ್ ಫೀಲ್ಡ್, ಕೋರಮಂಗಲ, ದೊಮ್ಮಲೂರು ಮತ್ತು ಬನ್ನೇರುಘಟ್ಟ ನಿಲ್ದಾಣಗಳಲ್ಲಿ ಪುಕ್ಕಟೆ ವೈ-ಫೈ ವ್ಯವಸ್ಥೆ ಒದಗಿಸಲಾಗುತ್ತದೆ.[ಗ್ರಾಮೀಣ ರೈಲು ನಿಲ್ದಾಣಗಳಲ್ಲಿ ವೈಫೈ ಹಾಟ್ಸ್ಪಾಟ್]

ಸೇವೆ ಒದಗಿಸುವವ ಜತೆಗೆ ಮಾತುಕತೆ ನಡೆಯುತ್ತಿದೆ. ಎರಡು ವಾರಗಳಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ ಮತ್ತು ಆ ನಂತರ ಎಲ್ಲೆಡೆಯೂ ಅದನ್ನು ವಿಸ್ತರಿಸಲಾಗುತ್ತದೆ ಎಂದು ನಾಗೇಂದ್ರ ಹೇಳಿದ್ದಾರೆ. ಕನಿಷ್ಠ 7.2 ಎಂಬಿಪಿಎಸ್ ವೇಗದ ಸೌಲಭ್ಯ ಒದಗಿಸುವುದಾಗಿ ಕಂಪೆನಿ ಹೇಳಿದೆ. ವಾಯು ವಜ್ರ ಬಸ್ಸಿನಲ್ಲಿ ಇದೇ ವೇಗದಲ್ಲಿ ಸೌಲಭ್ಯ ಒದಗಿಸಲಾಗುತ್ತಿದೆ. ಡೌನ್ ಲೋಡ್ ದರ ಎಷ್ಟಿರಬೇಕು ಎಂಬುದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಇನ್ನೂರು ಏರ್ ಕಂಡೀಷನ್ ಬಸ್ ಗಳಲ್ಲಿ ವೈ-ಫೈ ಸೌಲಭ್ಯ ಒದಗಿಸುವುದಾಗಿ ಏಪ್ರಿಲ್ ನಲ್ಲಿ ಘೋಷಣೆ ಮಾಡಿತ್ತು. "ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, ಅದನ್ನು ಪರಿಹರಿಸಲು ಯತ್ನಿಸುತ್ತಿದ್ದೇವೆ. ಇನ್ನೂ ಪ್ರಾಯೋಗಿಕ ಯೋಜನೆ ಜಾರಿಯಲ್ಲಿದೆ.[ಇನ್ನು 'ಜಿಯೊ' ಮೂಲಕ ಕಾರು ನಿಯಂತ್ರಿಸಿ, ಮೆಟ್ರೊ ಟಿಕೆಟ್ ಬುಕ್ ಮಾಡಿ!]
"ವಾಯುವಜ್ರ ಬಸ್ಸಿನಲ್ಲಿ ವೈಫೈ ಇದ್ದು, ಪ್ರಯಾಣಿಕರು ಅವರ ಲ್ಯಾಪ್ ಟಾಪ್, ಮೊಬೈಲ್ ಫೋನ್ ಅದಕ್ಕೆ ಕನೆಕ್ಟ್ ಮಾಡಬಹುದು. ಬ್ರೌಸಿಂಗ್ ಗಾಗಿ ಈ ಸೌಲಭ್ಯ ಬಳಸಬಹುದು" ಎಂದು ಅಧಿಕಾರಿ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಬಿಎಂಟಿಸಿ ಇ ಯೋಜನೆ ಜಾರಿಗೆ ಮುಂದಾಗಿದೆ. 2010ರಲ್ಲಿ ಪ್ರಾಯೋಗಿಕವಾಗಿ ವಾಯುವಜ್ರ ಬಸ್ಸಿನಲ್ಲಿ ಈ ಯೋಜನೆ ಜಾರಿಗೆ ತಂದಿತ್ತು.
ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಈ ಸೌಲಭ್ಯ ಬಳಸಬಹುದು. ಆನಂತರ ಅರವತ್ತು ಬಸ್ಸುಗಳಿಗೆ ಸೇವೆ ವಿಸ್ತರಿಸಲಾಗಿತ್ತು. ಆ ನಂತರ ಸೇವೆ ನಿಂತುಹೋಗಿತ್ತು. ಏಕೆಂದರೆ ಇಂಟರ್ ನೆಟ್ ಸೇವೆ ಒದಗಿಸುತ್ತಿದ್ದ ಖಾಸಗಿ ಕಂಪೆನಿ ಈ ಯೋಜನೆಯಿಂದ ಹಿಂದೆ ಸರಿದಿತ್ತು.












Click it and Unblock the Notifications