ಸರ್ಕಾರಿ ಕಾರು, ಕಚೇರಿ, ಗೋಡೌನಲ್ಲೂ ಮುನಿರತ್ನ ನನ್ನ ಬಿಡಲಿಲ್ಲ: ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಸಂತ್ರಸ್ತೆ

ಮಹಿಳೆ ಮೇಲಿನ ಅತ್ಯಾಚಾರ ಆರೋಪದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರು ಈಗಾಗಲೇ ಜೈಲು ಸೇರಿದ್ದಾರೆ. ಮುನಿರತ್ನ ವಿರುದ್ಧ ಸಂತ್ರಸ್ತೆ ಮಾಡಿರುವ ಆರೋಪಗಳು ಸದ್ಯ ಸಂಚಲನ ಸೃಷ್ಟಿಸುತ್ತಿವೆ. ಮುನಿರತ್ನ ತಮ್ಮ ಮೇಲೆ ಅತ್ಯಾಚಾರ ನಡೆಸಿದ ಜಾಗಗಳನ್ನೂ ಪಟ್ಟಿ ಮಾಡಿ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

'ಈ ಹಿಂದೆ ತೋಟಗಾರಿಕೆ ಇಲಾಖೆ ಸಚಿವರಾಗಿದ್ದ ಮುನಿರತ್ನ ಅವರಿಗೆ ನೀಡಲಾಗಿದ್ದ ಸರ್ಕಾರಿ ಕಾರಿನಲ್ಲಿ, ತನ್ನ ವಿಕಾಸೌಧದ ತಮ್ಮ ಕಚೇರಿಯಲ್ಲಿ ಹಾಗೂ ಗೋಡೌನ್‌ನಲ್ಲಿಯೂ ಮುನಿರತ್ನ ನನ್ನನ್ನು ಅತ್ಯಾಚಾರ ಮಾಡಿದ್ದರು' ಎಂಬ ಶಾಕಿಂಗ್‌ ವಿಚಾರವನ್ನು ಸಂತ್ರಸ್ತೆ ಬಹಿರಂಗಪಡಿಸಿದ್ದಾರೆ.

The Victim Woman Made A Serious Allegation Against BJP MLA Munirathna

'ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್ ಹಾಗೂ ಪೊಲೀಸ್ ಅಧಿಕಾರಿಗಳ ಅಶ್ಲೀಲ ವಿಡಿಯೋಗಳನ್ನು, ಫೋಟೋಗಳನ್ನು ನನ್ನಿಂದ ಮುನಿರತ್ನ ಸಂಗ್ರಹಿಸಿದ್ದರು. ಅದನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಕೂಡ ಮಾಡಿದ್ದರು' ಎಂದು ಆರೋಪಿಸಿದ್ದಾರೆ.

'ಕೋವಿಡ್‌ ಸಂದರ್ಭದಲ್ಲಿ ಜನರಿಗೆ ಮಾಸ್ಕ್‌ ಹಂಚಲು ಕಾರ್ಪೊರೇಟರ್‌ ಮಮತಾ ವಾಸುದೇವ್‌ ಅವರಿಗೆ ಕೊಟ್ಟಿದ್ದೆ. ಇದನ್ನು ತಿಳಿದು ಮುನಿರತ್ನ ನನ್ನನ್ನು ಪರಿಚಯ ಮಾಡಿಕೊಂಡಿದ್ದರು. ಬಳಿಕ ಪ್ರತಿದಿನ ನನಗೆ ಫೋನ್‌ ಕಾಲ್‌, ವಿಡಿಯೋ ಕಾಲ್‌ ಮಾಡುತ್ತಿದ್ದರು. ನಾನು ಸ್ನಾನ ಮಾಡುವಾಗ ಒಮ್ಮೆ ವಿಡಿಯೋ ಕಾಲ್‌ ಮಾಡಿದ್ದರು. ನಾನು ಪಿಕ್‌ ಮಾಡಲಿಲ್ಲ. ಬಳಿಕ ಗೋಡೌನ್‌ಗೆ ಬರೋಕೆ ಹೇಳಿದ್ದರು' ಎಂದಿದ್ದಾರೆ.

'ನಾನು ಗೋಡೌನ್‌ಗೆ ಹೋದಾಗ ನನ್ನನ್ನು ಬೆದರಿಸಿ, ಅತ್ಯಾಚಾರ ಮಾಡಿದರು. ಬಳಿಕ ಅದರ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು. ಕಾರ್ಪೊರೇಟರ್‌ ಪತಿ ವಾಸುದೇವ್‌ ಬೇರೆ ಹೆಣ್ಣಿನ ಜೊತೆ ಮಲಗಿರುವ ವಿಡಿಯೋ ಮಾಡಿಕೊಡುವಂತೆ ಡಿಮ್ಯಾಂಡ್‌ ಮಾಡಿದ್ದರು'.

The Victim Woman Made A Serious Allegation Against BJP MLA Munirathna

'ಬಳಿಕ ನಾನು ಮತ್ತು ಮತ್ತೊಬ್ಬ ಮಹಿಳೆಯಿಂದ ಅಂತಹ ಅಶ್ಲೀಲ ವಿಡಿಯೋ ರೆಕಾರ್ಡ್‌ ಮಾಡಿಸಿಕೊಂಡಿದ್ದರು. ಆ ವಿಡಿಯೋ ಮಾಡಲು ನನ್ನೊಂದಿಗೆ ರಾಧಾ ಹೆಸರಿನ ಎಚ್‌ಐವಿ ಸೋಂಕಿತೆಯನ್ನು ವಾಸುದೇವ್‌ ಜೊತೆ ಖಾಸಗಿ ಕ್ಷಣ ಕಳೆಯಲು ಕಳುಹಿಸಿದ್ದರು. ಈ ಕೃತ್ಯದ ಚಿತ್ರೀಕರಣಕ್ಕೆ ಮೊಬೈಲ್ ಕ್ಯಾಮೆರಾಗಳನ್ನು ರಾಧಾ ಹಾಗೂ ನನ್ನಿಂದ ಫಿಕ್ಸ್ ಮಾಡಿಸಿದ್ದರು. ಅದನ್ನು ಶಾಸಕರ ಆಪ್ತರಿಗೆ ಕಳಿಸಲಾಗಿತ್ತು' ಎಂದು ವಿವರಿಸಿದ್ದಾರೆ.

'ಮೊದಲು ಮಾಡಿದ ವಿಡಿಯೋ ಅಸ್ಪಷ್ಟವಾಗಿದೆ ಎಂದು ಮತ್ತೊಮ್ಮೆ ವಾಸುದೇವ್‌ ಅವರೊಂದಿಗೆ ಅಶ್ಲೀಲ ವಿಡಿಯೋ ರೆಕಾರ್ಡ್‌ ಮಾಡಿಸಿದರು. ಇದೇ ಮಾದರಿಯಲ್ಲಿ ರಾಜಕೀಯ ಮುಖಂಡರಾದ ಗಂಗಣ್ಣನವರೊಂದಿಗೆ ಮಲಗುವಂತೆ ಬಲವಂತ ಮಾಡಿದ್ದರು. ನಮ್ಮಿಬ್ಬರ ವಿಡಿಯೋ ಅನ್ನು ಶಾಸಕರ ಆಪ್ತ ಸುಧಾಕರ್‌ ರೆಕಾರ್ಡ್‌ ಮಾಡಿಕೊಂಡಿದ್ದರು'.

'ನಾನು ಗೌಡ ಜಾತಿಗೆ ಸೇರಿದ್ದರಿಂದ ಮುನಿರತ್ನ ಅವರು ನನಗೆ ಗೌಡರ ಮೇಲೆ ಹೆಚ್ಚು ಪ್ರೀತಿ ಎಂದು ಹೇಳುತ್ತಿದ್ದರು. ನನ್ನನ್ನು ಗೌಡತಿ ಎಂದೇ ಹೆಸರಿಟ್ಟು ಕರೆಯುತ್ತಿದ್ದರು. ಹೀಗೆಯೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಬಳಿಕ ಅವರ ಗನ್‌ಮ್ಯಾನ್‌ ನನಗೆ ಬೆದರಿಸಿದ್ದರು. ಬಾಸ್‌ ಹೇಳಿದಂತೆ ಕೇಳದಿದ್ದರೆ ನನ್ನ ಮಗನನ್ನು ಕೊಲೆ ಮಾಡುವುದಾಗಿ ಹೇಳಿದ್ದರು'.

'ಮಾಜಿ ಶಾಸಕ ಮಂಜುನಾಥ್‌ ಜೊತೆ ಅಶ್ಲೀಲವಾಗಿ ಮಾತನಾಡುವಂತೆ ಹೇಳಿ, ನನ್ನಿಂದ ಅವರ ನಗ್ನ ಫೋಟೋಗಳನ್ನು ಪಡೆದುಕೊಂಡಿದ್ದರು. ಇದೇ ಮಾದರಿಯಲ್ಲಿ ಹಲವರೊಂದಿಗೆ ಅಶ್ಲೀಲವಾಗಿರುವಂತೆ ನನ್ನನ್ನು ಬಳಸಿಕೊಂಡಿದ್ದಾರೆ. ನಾನು ಇದರಿಂದ ಬೇಸತ್ತಿದ್ದೆ. ಮತ್ತೊಮ್ಮೆ ವೈದ್ಯರೊಬ್ಬರ ವಿಡಿಯೋ ಮಾಡಿಕೊಡುವಂತೆ ಕೇಳಿದ್ದರು. ನಾನು ಒಪ್ಪದಿದ್ದಾಗ ನನ್ನ ಬೆತ್ತಲೆ ವಿಡಿಯೋಗಳನ್ನು ನನ್ನ ಪತಿಗೆ ಕಳಿಸಿದ್ದರು. ಕೊನೆಗೆ ನನ್ನನ್ನು ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು' ಎಂದು ಸಂಸತ್ತೆ ಎಳೆಎಳೆಯಾಗಿ ಕೃತ್ಯಗಳನ್ನು ಬಿಚ್ಚಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+