ಶರ್ಮಿಳಾ ಹಾಗೂ ವಹೀದಾ ಲೈವ್ ಚಾಟ್ ಮ್ಯೂಸಿಕ್ ಶೋ

ಬೆಂಗಳೂರು, ಏ,3: ಮಾಮ್ ಎಂಟರ್ಟ್ಮೆಂಟ್ ಸಂಸ್ಥೆ THE RENDEZVOUS ಹೆಸರಿನಲ್ಲಿ ವಿಶಿಷ್ಟ ಸಂಗೀತ ಕಾರ್ಯಕ್ರಮವನ್ನು ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದೆ.

ಹಿಂದಿ ಚಿತ್ರರಂಗದ ತಾರೆಗಳಾದ ವಹೀದಾ ರೆಹಮಾನ್ ಹಾಗೂ ಶರ್ಮಿಳಾ ಠಾಗೋರ್ ಅವರ ನೆಚ್ಚಿನ ಗೀತೆಗಳನ್ನು ಆಲಿಸುತ್ತಾ ಅವರ ಬದುಕಿನ ಬೆಳ್ಳಿ ಹೆಜ್ಜೆಗಳನ್ನು ಸಾರ್ವಜನಿಕರ ಮುಂದಿಡುವ ಪ್ರಯತ್ನ ಇದಾಗಿದೆ.

'ಚೌಧ್ವಿ ಕಾ ಚಾಂದ್' ವಹೀದಾ ಹಾಗೂ ಕಾಶ್ಮೀರ್ ಕಿ ಕಲಿ ಶರ್ಮಿಳಾ ಅವರೊಂದಿಗೆ ಹರಟೆ ಹೊಡೆಯಲು ಸುಚಿತ್ರಾ ಕೃಷ್ಣಮೂರ್ತಿ ಹಾಗೂ ಬ್ರಹ್ಮಾನಂದ್ ಸಿಂಗ್ ಅವರಿರುತ್ತಾರೆ. ಈ ಲೈವ್ ಚಾಟ್ ಶೋ ಕಮ್ ಸಂಗೀತ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತುಕತೆ ನಡೆಸಲಾಗುತ್ತದೆ. ಈ ಕಾರ್ಯಕ್ರಮವೂ ಸಂಪೂರ್ಣವಾಗಿ ಮಹಿಳೆಯರ ಸಬಲೀಕರಣ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿದೆ. ಜೀ ಸಾರೆಗಮಾಪ ವಿಜೇತರು ಆ ಕಾಲದ ಸ್ಮರಣೀಯ ಗೀತೆಗಳನ್ನು ನಿಮಗಾಗಿ ಸಾದರ ಪಡಿಸುತ್ತಾರೆ.

THE RENDEZVOUS’ a tête-à-tête with Waheeda Rehman and Sharmila Tagore

ಸ್ಥಳ: ಚೌಡಯ್ಯ ಸ್ಮಾರಕ ಭವನ, ಬೆಂಗಳೂರು
ಸಮಯ: 6 ಗಂಟೆ
ದಿನಾಂಕ/ದಿನ: ಏ.3. ಶನಿವಾರ
ಗಾಯಕರು: ಸುರೋಜಿತ್ ಗುಹಾ, ಗೌರವ್ ಬಾಂಗಿಯಾ, ಕಿಂಜಲ್ ಚಟರ್ಜಿ, ಮಧುರಾ ದಾತಾರ್, ಸಿಂಚನ್ ದೀಕ್ಷಿತ್, ಸಮನ್ವಿತಾ ಶರ್ಮ, ಸ್ವಾಗತಾ ಮಿತ್ರ, ರಾಜಾ ದತ್ತ ಗುಪ್ತಾ, ಅಂಜನಾ ಪದ್ಮನಾಭನ್(ಅತಿಥಿ ಕಲಾವಿದರು)
ಸಂಗೀತ ವ್ಯವಸ್ಥೆ: ಶ್ರೀನಿವಾಸ್ ಆಚಾರ್
ಟಿಕೆಟ್ ಬೆಲೆ : 1,000 ರು

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಪ್ರಶಾಂತ್: www.bookurevent.com or call him at +91 98458 24725

Maam Entertainment: ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ನಾಟಕ, ಬಾಲಿವುಡ್ ನೈಟ್ಸ್, ಸ್ಮರಣೆ ಕಾರ್ಯಕ್ರಮ, ಕಾರ್ಪೊರೇಟ್ ಇವೆಂಟ್, ಕ್ರಿಕೆಟ್, ಚೆಸ್, ಫಿಲಂ ಫೆಸ್ಟಿವೆಲ್ ಸೇರಿದಂತೆ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಸಂಸ್ಥೆ ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+