ಟಿವಿ 9 ಪ್ರತಿನಿಧಿಗಳಿಗೆ ಜಾಮೀನು ಮಂಜೂರು
ಬೆಂಗಳೂರು, ಮಾ.13: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರು ಟಿವಿ 9 ಸುದ್ದಿವಾಹಿನಿಯ ಇಬ್ಬರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ಜರುಗಿದೆ. ಈ ನಡುವೆ ಸ್ಟಿಂಗ್ ಆಪರೇಷನ್ ಮಾಡಲು ಹೋಗಿ ಸಿಕ್ಕಿಬಿದ್ದ ಇಬ್ಬರು ಪತ್ರಕರ್ತರ ಜಾಮೀನು ಅರ್ಜಿ ವಿಚಾರಣೆ ಮುಗಿಸಿರುವ ಲೋಕಾಯುಕ್ತ ಕೋರ್ಟ್ ಟಿವಿ 9 ಪ್ರತಿನಿಧಿಗಳಿಗೆ ಜಾಮೀನು ಮಂಜೂರು ಮಾಡಿದೆ. ವಿವರ ಸ್ಲೈಡಿನಲ್ಲಿದೆ.
ಇಂಧನ ಸಚಿವ ಡಿಕೆ ಶಿವಕುಮಾರ್ ಅವರಿಗೆ ಲಂಚ ನೀಡಲು ನಿರ್ದೇಶನ ನೀಡಿದ ಆರೋಪ ಹೊತ್ತಿರುವ ನ್ಯೂಸ್ 9, ಟಿವಿ 9 ಕನ್ನಡ ಸುದ್ದಿ ವಾಹಿನಿ ನಿರ್ದೇಶಕ ಮಹೇಂದ್ರ ಮಿಶ್ರಾ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಂಧಿತ ಟಿವಿ 9 ಕನ್ನಡ ಪತ್ರಕರ್ತರಾದ ಶ್ರೇಯಸ್(24), ವರದಿಗಾರ ಹಾಗೂ ನ್ಯೂಸ್ 9(ಇಂಗ್ಲೀಷ್) ಸಹಾಯಕ ಪೋಗ್ರಾಂ ಪ್ರೊಡ್ಯೂಸರ್ ಶ್ವೇತಾ(28) ಇಬ್ಬರನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 9 ಹಾಗೂ 12ರ ಅಡಿಯಲ್ಲಿ ಸೋಮವಾರ ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಇಬ್ಬರ ನ್ಯಾಯಾಂಗ ಬಂಧನ ಗುರುವಾರಕ್ಕೆ ಮುಕ್ತಾಯವಾಗಿದ್ದು, ಜಾಮೀನು ಅರ್ಜಿ ವಿಚಾರಣೆ ಜಾರಿಯಲ್ಲಿದೆ.
ಪ್ರೆಸ್ ಕ್ಲಬ್ ನಿಂದ ಖಂಡನೆ : ಪತ್ರಕರ್ತರ ಮೇಲಿನ ಪೈಶಾಚಿಕ ದೌರ್ಜನ್ಯ ನಡೆಸಿರುವುದನ್ನು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ತೀವ್ರವಾಗಿ ಖಂಡಿಸುತ್ತದೆ. ಟಿವಿ-9 ಕನ್ನಡ ವಾಹಿನಿಯ ಸುದ್ದಿಗಾರರಾದ ಶ್ವೇತ ಮತ್ತು ಶ್ರೇಯಸ್ ಅವರ ಮೇಲೆ ಅಮಾನವೀಯ ಹಲ್ಲೆ ನಡೆಸಿ ಮುಫ್ತಿಯಲ್ಲಿರುವ ಪೊಲೀಸರ ಎದರು ಇಂತಹ ಕೃತ್ಯ ನಡೆಸಿದ್ದು, ಜನಪ್ರತಿನಿಧಿಗೆ ಶೋಭೆ ತರುವಂಥದ್ದು ಅಲ್ಲ. [ಆಕೆ ನನ್ನ ಮಗಳಿದ್ದಂತೆ. ಹಲ್ಲೆ ನಡೆದಿಲ್ಲ : ಡಿಕೆ ಶಿವಕುಮಾರ್]
ಕುಟುಕು ಕಾರ್ಯಾಚರಣೆಯು ಸುಪ್ರೀಂ ಕೋರ್ಟಿನ ಸೂಚನೆಯಂತೆಯೇ ನಡೆಸಬಹುದಾದ ಕಾರ್ಯಯೋಜನೆಯಾಗಿದೆ. ಇದನ್ನು ದೂರಾಗಿ ಪರಿಗಣಿಸುವ ಯಾವುದೇ ಪ್ರಕರಣಗಳು ಇಲ್ಲದಿದ್ದರೂ ಸಹ ಸಚಿವರ ಬೆಂಬಲಿಗರು ವಿನಾಕಾರಣ ದೂರು ನೀಡಿ ಸುದ್ದಿಗಾರರು ಜೈಲು ಸೇರುವಂತೆ ಮಾಡಿದ್ದು ಖಂಡನೀಯ ಎಂದು ಬೆಂಗಳೂರು ಪ್ರೆಸ್ ಕ್ಲಬ್ ಪ್ರಕಟಣೆ ಹೊರಡಿಸಿದೆ. ರಾಜ್ಯದೆಲ್ಲೆಡೆ ನಡೆದ ವ್ಯಾಪಕ ಪ್ರತಿಭಟನೆ ವಿವರ ಮುಂದೆ ಓದಿ....ಗುರುವಾರ ಸಂಜೆ ಡಿಕೆಶಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ನಿರೀಕ್ಷಿಸಿ...

ಟಿವಿ 9 ಪ್ರತಿನಿಧಿಗಳಿಗೆ ಜಾಮೀನು ಮಂಜೂರು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ 9 ಪ್ರತಿನಿಧಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಡಿಕೆ ಶಿವಕುಮಾರ್ ಅವರ ಬೆಂಬಲಿಗರು ನಡೆಸಿದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ 9 ಪ್ರತಿನಿಧಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಇಬ್ಬರಿಗೂ 1 ಲಕ್ಷ ರು ವೈಯಕ್ತಿಕ ಬಾಂಡ್, ದೇಶ ಬಿಟ್ಟು ಹೊರ ಹೋಗದಂತೆ ಲೋಕಾಯುಕ್ತ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.
ಟಿವಿ 9 ಸಂಸ್ಥೆ ನೀಡಿರುವ ದೂರನ್ನು ಸ್ವೀಕರಿಸಿ ಕಾನೂನು ರೀತಿಯಲ್ಲಿ ಪ್ರಕರಣದ ತನಿಖೆ ನಡೆಸಿ ಎಂದು ಪೊಲೀಸರಿಗೆ ನ್ಯಾ. ಸುಧೀಂದ್ರ ರಾವ್ ಅವರು ಸ್ಪಷ್ಟವಾಗಿ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ರಾಜಿ ಪಂಚಾಯತಿಗೆ ಅವಕಾಶವಿಲ್ಲ. ಎಫ್ ಐಆರ್ ದಾಖಲಾದರೆ ಡಿಕೆಶಿ ಸೇರಿದಂತೆ ಅವರ ಬೆಂಬಲಿಗರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ.

ಬೆಂಗಳೂರು ಪ್ರೆಸ್ ಕ್ಲಬ್ ನಿಂದ ತೀವ್ರ ಖಂಡನೆ
ಈ ಘಟನೆ ಸಂದರ್ಭದಲ್ಲಿ ಪೊಲೀಸರು ಸಹ ಸಚಿವರ ಕೈಗೊಂಬೆಯಂತೆ ವರ್ತಿಸಿ ಹಲ್ಲೆ ನಡೆಸಿದವರ ಮೇಲೆ ದೂರು ದಾಖಲಿಸಲು ವಿಳಂಬದೋರಣೆ ತೋರಿದ್ದು, ಮಾಧ್ಯಮ ರಂಗಕ್ಕೆ ತೋರಿದ ಅಗೌರವವಾಗಿದೆ. ಹಲ್ಲೆ ಮಾಡಿದವರ ವಿರುದ್ಧ ದೂರು ನೀಡಿದರೂ ಸಹ ತಕ್ಷಣದ ಕ್ರಮ ಕೈಗೊಳ್ಳದೆ ಕೇವಲ ರಾಜಕೀಯ ಪಿತೂರಿಗೆ ಒಳಗಾಗಿರುವ ಪೊಲೀಸರು ಇಬ್ಬರು ಸುದ್ದಿಗಾರರನ್ನು ಅಮಾಯಕ ರೀತಿಯಲ್ಲಿ ಕ್ರಮ ಕೈಗೊಳ್ಳದೆ
ವಿಫಲತೆ ತೋರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ಸುಳ್ಳು ಪ್ರಕರಣದ ಅಡಿ ಶಾಮೀಲಾಗಿರುವ ಎಲ್ಲಾ ವ್ಯಕ್ತಿಗಳನ್ನು ಸೂಕ್ತ ಕ್ರಮಕ್ಕೆ ಒಳಪಡಿಸಿ ಸುದ್ದಿಗಾರರನ್ನು ಯಾವುದೇ ಆಪಾದನೆ ಇಲ್ಲದೆ ಬಿಡುಗಡೆ ಮಾಡುವ ಕ್ರಮಕ್ಕೆ ಮುಂದಾಗಬೇಕಾಗಿದೆ.
-ರಾಮಕೃಷ್ಣ ಉಪಾಧ್ಯ, ಅಧ್ಯಕ್ಷರು
- ಕೆ. ಸದಾಶಿವ ಶೆಣೈ, ಕಾರ್ಯದರ್ಶಿ

ಡಿಕೆಶಿ ಸ್ಟಿಂಗ್ ಪೊಲೀಸರ ಹೇಳುವುದೇನು?
ಟಿವಿ 9 ಸಂಸ್ಥೆ ನಿರ್ದೇಶಕ ಮಿಶ್ರಾ ಅವರ ಯೋಜನೆಯಂತೆ ಈ ಸ್ಟಿಂಗ್ ಆಪರೇಷನ್ ಕೈಗೊಳ್ಳಲಾಗಿದೆ. ಅಕ್ರಮ ಯೋಜನೆಯೊಂದಕ್ಕೆ ಲಂಚ (5 ಲಕ್ಷ ರು) ಪಡೆಯುವ ಡಿಕೆ ಶಿವಕುಮಾರ್ ಎಂದು ಅವರ ವಿಡಿಯೋ ಚಿತ್ರೀಕರಣ ಮಾಡಲು ಶ್ವೇತಾ ಹಾಗೂ ಶ್ರೇಯಸ್ ಪತ್ರಕರ್ತರಿಬ್ಬರು ಮಾರುವೇಷದಲ್ಲಿ ಡಿಕೆ ಶಿವಕುಮಾರ್ ಮನೆಗೆ ತೆರಳಿ ಬೇನಾಮಿ ಸಂಸ್ಥೆ (EnerGo) ಹೆಸರಿನಲ್ಲಿ ಡೀಲ್ ಕುದುರಿಸಲು ಯತ್ನಿಸಿದ್ದಾರೆ. ಆದರೆ, ಇದರ ಬಗ್ಗೆ ಸುಳಿವು ಪಡೆದುಕೊಂಡ ಡಿಕೆಶಿ ಅವರು ಇಬ್ಬರ ಕಾರ್ಯಾಚರಣೆ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.
ಸೋಮವಾರ ಇಲಾಖೆ ಅಧಿಕಾರಿಗಳು ಬರುತ್ತಾರೆ ಅವರಿಗೆ ನೀಡಿ ಎಂದು ಹೇಳುವ ಮೂಲಕ ಟ್ರಾಪ್ ಮಾಡಿದ್ದಾರೆ. ಪೊಲೀಸರು ಲಂಚ ನೀಡಲು ಮುಂದಾದ ಆರೋಪದಡಿಯಲ್ಲಿ ಬಂಧಿಸಿದ್ದಾರೆ.

ನಿಜಕ್ಕೂ ಇದು ಉದ್ದೇಶ ಪೂರ್ವಕ ಆಪರೇಷನ್ ?
ಟಿವಿ 9 ಸಂಸ್ಥೆ ಮೊದಲಿನಿಂದಲೂ ಡಿಕೆ ಶಿವಕುಮಾರ್ ಅವರ ಭ್ರಷ್ಟತನದ ದರ್ಶನವನ್ನು ಜನತೆ ಮುಂದಿಡುತ್ತಾ ಬಂದಿದೆ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರ ಲಂಚಕೋರತನವನ್ನು ಬಯಲಿಗೆಳೆದರೆ ಹೇಗೆ? ಎಂಬ ಆಲೋಚನೆಯಿಂದಲೋ ಏನೋ ಈ ಸ್ಟಿಂಗ್ ಆಪರೇಷನ್ ಗೆ ಟಿವಿ 9 ಕೈ ಹಾಕಿದೆ. ಪೊಲೀಸರ ಪ್ರಕಾರ ಇದು ಟಿಆರ್ ಪಿ ವಾರ್ ನಿಂದ ಆಗಿರಲೂ ಬಹುದು. ಆದರೆ, ಸ್ಟಿಂಗ್ ಆಪರೇಷನ್ ಮಾಡುವುದು ತಪ್ಪಲ್ಲ, ಈ ಬಗ್ಗೆ ಸುಪ್ರೀಂಕೋರ್ಟ್ ಅದೇಶವಿದೆ ಎಂದು ಟಿವಿ 9 ವಕೀಲ ವಾದಿಸಿದ್ದಾರೆ.

ಟಿವಿ 9 ಎಚ್ಚರ ತಪ್ಪಿದ್ದಾರರೂ ಎಲ್ಲಿ?
ಹಲವಾರು ಸ್ಟಿಂಗ್ ಆಪರೇಷನ್ ಮಾಡಿ, ಕಲಬೆರಕೆ ಆಹಾರ, ನಕಲಿ ಬಾಬಾಗಳು, ನಕಲಿ ವೈದ್ಯರು, ಶಿಕ್ಷಣ ಸಂಸ್ಥೆಗಳ ಅವ್ಯವಹಾರಗಳನ್ನು ಬಯಲಿಗೆಳೆದಿರುವ ಟಿವಿ 9 ಸಂಸ್ಥೆಗೆ ಈ ಬಾರಿ ಲಕ್ ಕೈ ಕೊಟ್ಟಿತ್ತು. ಅಥವಾ ಡಿಕೆಶಿ ಜಾಣ್ಮೆ ಅವರನ್ನು ಬಚಾವ್ ಮಾಡಿದೆ.
ಆದರೆ, ಸ್ಟಿಂಗ್ ಆಪರೇಷನ್ ಗೂ ಮುನ್ನ ಸೂಕ್ತ ಸಾಕ್ಷಿಗಳಿದ್ದರೆ ಪೊಲೀಸರಿಗೆ ತಿಳಿಸಬಹುದಿತ್ತು ಅಥವಾ ಮತ್ತೊಂದು ಯೋಜನೆ ರೂಪಿಸಿಕೊಂಡು ಸಿಕ್ಕಿ ಬಿದ್ದರೆ ಏನು ಮಾಡುವುದು ಹೇಗೆ ಬಚಾವಾಗುವುದು ಎಂಬುದನ್ನು ಮೊದಲೇ ಯೋಚಿಸಬೇಕಿತ್ತು.
ಡಿಕೆ ಶಿವಕುಮಾರ್ ಅವರಿಗೆ ಹಾದಿ ರಂಪ ಬೀದಿ ರಂಪಗಳೇನು ಹೊಸದಲ್ಲ. ಕೋತ್ವಲ ರಾಮಚಂದ್ರನ ಕಾಲದಿಂದ ಬೆಳೆದು ಬಂದ ರಾಜಕೀಯ ಪಟು ಹೀಗಾಗಿ ಮೈಯೆಲ್ಲ ಕಣ್ಣಿರುವ 'ಪ್ರಭು' ವೊಬ್ಬನನ್ನು ಖೆಡ್ಡಾಗೆ ಬೀಳಿಸಿಕೊಳ್ಳುವ ಮುನ್ನ ಎಚರಿಕೆ ವಹಿಸಬೇಕಿತ್ತು.

ಉತ್ತಮ ಸಮಾಜಕ್ಕಾಗಿ ಟಿವಿ 9 ವಾಹಿನಿ
ಡಿಕೆ ಶಿವಕುಮಾರ್ ಅವರ ಮನೆ ಅಂಗಳದಲ್ಲಿ ನಡೆದ ದೌರ್ಜನ್ಯಕ್ಕೆ ಆಮ್ ಆದ್ಮಿ ಪಕ್ಷ, ವಿವಿಧ ಮಹಿಳಾ ಸಂಘಟನೆ ಸೇರಿದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ರಿಪಬ್ಲಿಕ್ ಮಾದರಿಯಲ್ಲಿ ಡಿಕೆಶಿ ಹೊಸ ರಿಪಬ್ಲಿಕ್ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಇವರು ಪ್ರಜಾಪ್ರತಿನಿಧಿಗಳು ಮಾತ್ರ ಎಂದು ಆಮ್ ಆದ್ಮಿ ಪಕ್ಷ ತಿರುಗೇಟು ನೀಡಿದ್ದಾರೆ.

ಡಿಕೆಶಿ ಅನ್ಯಾಯ, ಅಕ್ರಮದ ವಿರುದ್ಧ ದನಿ ಎತ್ತಿದವರು
ಡಿಕೆ ಶಿವಕುಮಾರ್ ಅವರು ಕನಕಪುರ(ಬೆಂಗಳೂರು ಗ್ರಾಮಾಂತರ ಕ್ಷೇತ್ರ) ವ್ಯಾಪ್ತಿಯಲ್ಲಿ ನಡೆಸಿರುವ ಕಲ್ಲುಗಣಿಗಾರಿಕೆ, ಭೂ ಕಬಳಿಕೆ, ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದವರಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಅವರ ಕುಟುಂಬದವರು ಮೊದಲಿಗರು. ನಂತರ ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ್ ಅವರು ಅನೇಕ ಬಾರಿ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದರು. ಕಾಂಗ್ರೆಸ್ ನಿಂದ ಬಿಜೆಪಿಗೆ ಹಾರಿರುವ ಕಾಂಗ್ರೆಸ್ ಮಾಜಿ ಸಂಸದೆ ತೇಜಸ್ವಿನಿ ಅವರು ಡಿಕೆಶಿ ಅವರ ಅಕ್ರಮದ ವಿರುದ್ಧ ದನಿ ಎತ್ತಬಲ್ಲ ಶಕ್ತಿಯಾಗಿದ್ದಾರೆ. ಇದೇ ಕಾರ್ಯವನ್ನು ಟಿವಿ 9 ಸಂಸ್ಥೆ ನಿರಂತರವಾಗಿ ಮಾಡಿಕೊಂಡು ಬಂದಿದೆ. ಇದೇ ದ್ವೇಷಕ್ಕೆ ಡಿಕೆಶಿ ಅವರು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

ನಮ್ಮ ಹೋರಾಟ ನಿರಂತರ : ಟಿವಿ 9
ಭ್ರಷ್ಟರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ಟಿವಿ 9 ಸಂಸ್ಥೆ ಹೇಳಿದೆ. ಇತ್ತ ಸದಾಶಿವ ನಗರ ಪೊಲೀಸ್ ಠಾಣೆಯ ಎದುರು ಮಹಿಳಾ ಸಂಘಟನೆಗಳು ಪ್ರತಿಭಟನೆ ಮಾಡಿವೆ. ಡಿಕೆ ಶಿವಕುಮಾರ್ ವಿರುದ್ಧ ಪತ್ರಕರ್ತರು ನೀಡಿದ ದೂರು ಸ್ವೀಕರಿಸಿ ಎಫ್ ಐಆರ್ ದಾಖಲಿಸಲು ವಿಳಂಬಿಸುತ್ತಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ರಾಜ್ಯದೆಲ್ಲೆಡೆ ಕಾರ್ಯನಿರತ ಪತ್ರಕರ್ತರಿಂದ ಪ್ರತಿಭಟನೆ ನಡೆಸಲು ಪತ್ರಕರ್ತರ ಪರವಾಗಿ ಗಂಗಾಧರ್ ಮೊದಲಿಯಾರ್ ಅವರು ನೀಡಿದ್ದ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರ ಪೊಲೀಸ್ ಆಯುಕ್ತ ಔರಾದ್ ಕರ್ ಹೇಳಿಕೆ
ಟಿವಿ 9 ಪತ್ರಕರ್ತರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣದ ತನಿಖೆಯನ್ನು ಜಂಟಿ ಆಯುಕ್ತ ಶರತ್ಚಂದ್ರ ಅವರು ನಡೆಸುತ್ತಿದ್ದಾರೆ. ನಾವು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಕಾನೂನು ರೀತಿ ಜರುಗಿಸಬೇಕಾದ ಕ್ರಮವನ್ನು ತ್ವರಿತವಾಗಿ ಕೈಗೊಳ್ಳುತ್ತೇವೆ. ಕೋರ್ಟಿನಲ್ಲಿ ಕೇಸ್ ವಿಚಾರಣೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಔರಾದ್ ಕರ್ ಅವರು ಗುರುವಾರ ಹೇಳಿದ್ದಾರೆ.
-
IPL 2026 Free Ticket: ರಾಜ್ಯದ ಶಾಸಕರಿಗೆ ಪ್ರತಿ ಪಂದ್ಯಕ್ಕೂ 3 ಟಿಕೆಟ್ ಉಚಿತ; ಡಿ.ಕೆ.ಶಿವಕುಮಾರ್ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications