ಹಿರಿಯ ಪತ್ರಕರ್ತ ಕೆ ಸತ್ಯನಾರಾಯಣಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ

ಬೆಂಗಳೂರು, ಆಗಸ್ಟ್ 10: ಹಿರಿಯ ಪತ್ರಕರ್ತರಾದ ಕೆ.ಸತ್ಯನಾರಾಯಣ ಅವರಿಗೆ ಕನ್ನಡ ಪತ್ರಿಕೋದ್ಯಮದ ಜನಕ ಎಂದೇ ಜನಜನಿತರಾಗಿರುವ ಹರ್ಮನ್ ಮೊಗ್ಲಿಂಗ್ ಜೀವಮಾನದ ಸಾಧನೆ ಪ್ರಶಸ್ತಿ ಸಂದಿದೆ.

ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆರಂಭಿಸಿರುವ ಈ ಪ್ರಶಸ್ತಿಯು ಒಂದು ಲಕ್ಷ ರುಪಾಯಿ ನಗದನ್ನು ಒಳಗೊಂಡಿದೆ.

ಕನ್ನಡಪ್ರಭಕ್ಕೆ ಸುದೀರ್ಘ ಸೇವೆ ಸಲ್ಲಿಸಿರುವ ಕೆ.ಸತ್ಯನಾರಾಯಣ ಅವರಿಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಯನ್ನು ಸಚಿವ ಕೆ.ಜೆ.ಜಾರ್ಜ್ ಘೋಷಿಸಿದ್ದಾರೆ. ಈ ಪ್ರಶಸ್ತಿಯನ್ನು ಆಗಸ್ಟ್ ಹನ್ನೆರಡರ ಶನಿವಾರದಂದು ಬೆಂಗಳೂರಿನಲ್ಲಿರುವ ರಾಡಿಸನ್ ಬ್ಲೂ ಏಟ್ರಿಯಾ ಹೋಟೆಲಿನಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ.

The Hermaan Mogling Life Time Achievement for Journalist is conferred to. Sathyanarana. K

ಪತ್ರಿಕೋದ್ಯಮದಲ್ಲಿ ಅಮೋಘ ಸೇವೆ ಸಲ್ಲಿಸಿದ, ಆ ಮೂಲಕ ಸಮಾಜಕ್ಕೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಿದವರಿಗೆ ಪ್ರಶಸ್ತಿ ಮೀಸಲಾಗಿದೆ. ಬೆಂಗಳೂರು ನಗರ ಕಾರ್ಯನಿರತ ಪತ್ರಕರ್ತರ ಸಂಘವು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟದಲ್ಲಿ ನೋಂದಣಿ ಆಗಿದೆ. ಸಂಘಕ್ಕೆ ಎಂಬತ್ತೈದು ವರ್ಷಗಳ ಇತಿಹಾಸವಿದ್ದು, 1932ರಲ್ಲಿ ಸಾಹಿತಿ ಡಿ.ವಿ.ಗುಂಡಪ್ಪ ಅವರಿಂದ ಆರಂಭವಾಗಿದೆ.

ಹರ್ಮನ್ (1811-1881) ಅವರು ತಮ್ಮಿಡೀ ವೃತ್ತಿ ಜೀವನವನ್ನು ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಕಳೆದಿರುವುದು ವಿಶೇಷ. ಕನ್ನಡದ ಮೊಟ್ಟಮೊದಲ ಪತ್ರಿಕೆ 'ಮಂಗಳೂರು ಸಮಾಚಾರ'ವನ್ನು ಕನ್ನಡದಲ್ಲಿ ತಂದ ಹೆಗ್ಗಳಿಕೆ ಹರ್ಮನ್ ಮೊಗ್ಲಿಂಗ್ ಅವರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+