Get Updates
Get notified of breaking news, exclusive insights, and must-see stories!

ಬೆಂಗಳೂರಿನ ಉಬರ್ ಚಾಲಕನೊಂದಿಗಿನ ಆ ಒಂದು ಹೃದಯ ಸ್ಪರ್ಶಿ ಸಂದರ್ಭ..

ಬೆಂಗಳೂರು ಸೆಪ್ಟೆಂಬರ್ 2: ಆಟೋ, ಟ್ಯಾಕ್ಸಿಯಲ್ಲಿ ತೆರಳುವಾಗ ಪ್ರಯಾಣಿಕರಿಗೆ ಊಟ, ತಿಂಡಿ ಬಗ್ಗೆ ಕೇಳುವುದು ಒಂದು ಕಡೆ ಇರಲಿ ಕೊಂಚ ನಿದ್ದೆಗೆ ಜಾರಿದರೆ ಯಾಮಾರಿಸುವ ಚಾಲಕರೇ ಹೆಚ್ಚು. ಹೀಗಿರುವಾಗ ಉಬರ್ ಚಾಲಕನೊಂದಿಗಿನ ಅತ್ಯುತ್ತಮ ಕ್ಷಣಗಳನ್ನು ಪ್ರಯಾಣಿಕರೊಬ್ಬರು ಲಿಂಕ್‌ಡಿನ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ಜನಮೆಚ್ಚುಗೆಯನ್ನು ಪಡೆದುಕೊಂಡಿದೆ.

ಬೆಂಗಳೂರಿನ ಉಬರ್ ರೈಡ್‌ನಲ್ಲಿ ಸಂಭವಿಸಿದ ಹೃದಯಸ್ಪರ್ಶಿ ಘಟನೆಯನ್ನು ಪ್ರಯಾಣಿಕರೊಬ್ಬರು ಹಂಚಿಕೊಂಡಿದ್ದಾರೆ. ಹರ್ಷ್ ಶರ್ಮಾ ಎಂಬ ವ್ಯಕ್ತಿ ತನ್ನ ಉಬರ್ ಚಾಲಕ ರವಿಯ ಕುರಿತು ಲಿಂಕ್ಡ್‌ಇನ್‌ನಲ್ಲಿ ಹೃದಯಸ್ಪರ್ಶಿ ಕಥೆಯನ್ನು ಪೋಸ್ಟ್ ಮಾಡಿದ್ದಾರೆ. ಸುದೀರ್ಘ ಪೋಸ್ಟ್‌ನಲ್ಲಿ, ಹರ್ಷ್ ಶರ್ಮಾ ಅವರನ್ನು ಬೇರೆ ಸ್ಥಳದಲ್ಲಿ ಅಪರಿಚಿತರು ಹೇಗೆ ನಡೆದುಕೊಳ್ಳುತ್ತಾರೆ ಮತ್ತು ಅವರನ್ನು ತನ್ನ ಸ್ವಂತ ಮನೆಯವರಂತೆ ನೋಡಿಕೊಂಡ ರೀತಿಯನ್ನು ವಿವರಿಸಿದ್ದಾರೆ.

ಹರ್ಷ್ ಶರ್ಮಾ ಅವರು ತಮ್ಮ ಉಬರ್ ಡ್ರೈವರ್‌ನ ಸ್ವಭಾವ ಅವರಿಗೆ ಹೇಗೆ ಆರಾಮವಾಗಿ ಮತ್ತು ಪರಿಚಯವಿಲ್ಲದ ಸ್ಥಳದಲ್ಲಿ ಮನೆಯ ವಾತಾವರಣವನ್ನು ನೀಡಿತು ಎಂಬುದರ ಕುರಿತು ಲಿಂಕ್ಡ್‌ಇನ್‌ನಲ್ಲಿ ಬರೆದಿದ್ದಾರೆ. ಹರ್ಷ್ ಪ್ರಕಾರ, ಭಾಷೆಯ ಸಮಸ್ಯೆಯಿಂದಾಗಿ ಸಂವಹನ ನಡೆಸಲು ಸಾಧ್ಯವಾಗದೆ ಹೆಡ್‌ಫೋನ್‌ಗಳನ್ನು ಬಳಸುವ ಇತರ ಚಾಲಕರಿಗೆ ಹೋಲಿಸಿದರೆ ಚಾಲಕ ರವಿ ಎಷ್ಟು ಬೆಸ್ಟ್ ಎನ್ನುವ ಬಗ್ಗೆ ಅವರು ಬರೆದಿದ್ದಾರೆ. ವಿಮಾನದಲ್ಲಿ ಸಾಕಷ್ಟು ನಿದ್ರೆ ಮಾಡದ ಪರಿಣಾಮವಾಗಿ ದಣಿದಿದ್ದ ಹರ್ಷ ಅವರನ್ನು ಚಾಲಕ ರವಿ ಮನೆಯವರಂತೆ ನೋಡಿಕೊಂಡಿದ್ದಾರೆ.

That heart touching moment with an Uber driver in Bengaluru..

ಹರ್ಷನು ನಿಶ್ಚಿಂತೆಯಿಂದ ಮಲಗಲು ರವಿ ಕಾರಿನ ಸೀಟ್ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ರವಿ ಅವರು ಉಪಹಾರ ಸೇವನೆಯ ಬಗ್ಗೆ ಹರ್ಷನನ್ನು ಪ್ರಶ್ನಿಸಿದರು. ಅದಕ್ಕೆ ಹರ್ಷನು ತಾನು ಮಾಡಿಲ್ಲ ಎಂದು ಉತ್ತರಿಸಿದರು. ಹರ್ಷ ಅವರಿಗೆ ಮಲಗಲು ಹೇಳಿದ ಚಾಲಕ ರವಿ ಒಂದು ಗಂಟೆಯ ನಂತರ ಅವರನ್ನು ಒಳ್ಳೆಯ ರೆಸ್ಟೋರೆಂಟ್‌ನಲ್ಲಿ ಎಬ್ಬಿಸಿದ್ದಾರೆ.

ಎರಡು ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಹರ್ಷ್ ಲಿಂಕ್ಡ್‌ಇನ್‌ನಲ್ಲಿ ಸಂಪೂರ್ಣ ಕಥೆಯನ್ನು ವಿವರಿಸಿದ್ದಾರೆ. ಇದನ್ನು ಹಂಚಿಕೊಂಡ ನಂತರ, ಪೋಸ್ಟ್ 44,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಪೋಸ್ಟ್ ಜನಪ್ರಿಯತೆ ಗಳಿಸಿದ ನಂತರ 'ಉಬರ್ ಇಂಡಿಯಾ' ಹರ್ಷ್‌ಗೆ ಕರೆ ಮಾಡಿ, ರವಿ ಅವರ ಈ ರೀತಿಯ ಕಾರ್ಯವನ್ನು ಪ್ರಶಂಸಿಸಲು ಅವರ ಸಂಪರ್ಕ ಮಾಹಿತಿಯನ್ನು ನೀಡುವಂತೆ ವಿನಂತಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+