ಸ್ವಾತಂತ್ರ್ಯಉದ್ಯಾನದಲ್ಲಿ ಪುಸ್ತಕ ಮೇಳ
ಬೆಂಗಳೂರು: ಆ: 16: ಬೆಂಗಳೂರಿನ ಪುಸ್ತಕ ಪ್ರಿಯರಿಗೆ ಸಿಹಿ ಸುದ್ದಿ. ಹ್ಯಾಪಿ ಕ್ಲಬ್ ಈವೆಂಟ್ಸ್ ಸಂಸ್ಥೆ ಆ. 22ರಿಂದ 31ರವರೆಗೆ ಸ್ವಾತಂತ್ರ್ಯಉದ್ಯಾನದಲ್ಲಿ ಹತ್ತು ದಿನಗಳ ಪುಸ್ತಕ ಮೇಳ ಆಯೋಜಿಸಿದೆ.
ಬೆಂಗಳೂರಿನಲ್ಲಿ ಪುಸ್ತಕ ಮೇಳದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಆಯೋಜಕರಾದ ಬಿ.ಪ್ರಕಾಶ್, ಆ.22 ರಂದು ಬೆಳಗ್ಗೆ 11 ಗಂಟೆಗೆ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದರು. ಭಾರತದ ಬಹುತೇಕ ಭಾಷೆಯ ಪುಸ್ತಕಗಳು ಪ್ರದರ್ಶನದಲ್ಲಿ ಇರಲಿವೆ ಎಂದು ಹೇಳಿದರು.

ಮೇಳದಲ್ಲಿ ಕನ್ನಡ ಪುಸ್ತಕಗಳಿಗೆ ವಿಶೇಷ ರಿಯಾಯಿತಿ ನೀಡಲಾಗುವುದು. ಹತ್ತು ದಿನಗಳ ಪ್ರಸ್ತಕ ಪ್ರದರ್ಶನದಲ್ಲಿ ಪುಸ್ತಕ ಮಳಿಗೆ ಹೊಂದಿರುವವರಿಗೆ ಅವರ ಪುಸ್ತಕಗಳನ್ನು ಬಿಡುಗಡೆ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಪುಸ್ತಕ ಮಳಿಗೆಗಳು ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ತೆರೆದಿರುತ್ತವೆ. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಡಾ. ಲೀಲಾದೇವಿ ಆರ್. ಪ್ರಸಾದ್, ಬಂಜೆಗರೆ ಜಯಪ್ರಕಾಶ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಾಲಾಜಿ ನೋಡಲು ಫ್ರೀಡಂ ಪಾರ್ಕ್ ಗೆ ಬನ್ನಿ : ಶ್ರೀ ಶಂಕರ ವಾಹಿನಿ ಸ್ವಾತಂತ್ರ್ಯ ಉದ್ಯಾನದಲ್ಲಿ ಸ್ಥಾಪಿಸಿರುವ 25 ಅಡಿ ಎತ್ತರದ ಬಾಲಾಜಿ ಮೂರ್ತಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು ನಾಗರಿಕರ ಗಮನ ಸೆಳೆಯುತ್ತಿದೆ. ಬಾಲಾಜಿಗೆ ಪೂಜೆ ಸಲ್ಲಿಸಲು ನೂರಾರು ಭಕ್ತರು ಪ್ರತಿದಿನ ಆಗಮಿಸುತ್ತಿದ್ದಾರೆ. ಅಲ್ಲದೇ ಶಂಕರ ವಾಹಿನಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪೊಲೀಸ್ ಇಲಾಖೆಯ ಸಾಧಕರಿಗೆ ಸನ್ಮಾನ ಮತ್ತು ಆರೋಗ್ಯ ತಪಾಸಣಾ ಶಿಬಿರಗಳು ನಡೆಯಲಿವೆ.


Click it and Unblock the Notifications
