SWR: ಯಶವಂತಪುರ ರೈಲು ನಿಲ್ದಾಣದ ಪ್ರಯಾಣಿಕರೇ ಗಮನಿಸಿ
ಹುಬ್ಬಳ್ಳಿ, ಮಾರ್ಚ್ 17: ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ರಾಜ್ಯದ ವಿವಿಧ ರೈಲು ನಿಲ್ದಾಣಗಳು ಪುನರ್ ಅಭಿವೃದ್ಧಿ ಆಗುತ್ತಿವೆ. ಅದೇ ರೀತಿ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ಅಭಿವೃದ್ಧಿ ಕೆಲಸ ಬರದಿಂದ ಸಾಗಿದೆ. ಹೀಗಾಗಿ ಈ ಕೆಳಗಿನ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗುತ್ತಿದೆ. ಯಾರೆಲ್ಲ ಈ ನಿಲ್ದಾಣಕ್ಕೆ ಬರುತ್ತೀರಾ? ಇಲ್ಲವೇ ಬೇರೆಡೆಯಿಂದ ಬಂದು ಇಲ್ಲಿಗೆ ಇಳಿಯುತ್ತೀರಾ? ಅವರೆಲ್ಲ ಗಮನಿಸಿ ಓಡಾಡುವಂತೆ ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸಾಪ್ತಾಹಿಕ ರೈಲುಗಳ ತಾತ್ಕಾಲಿಕ ರದ್ದು
* ಯಶವಂತಪುರ-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್ ಪ್ರೆಸ್ ರೈಲು (ಸಂಖ್ಯೆ 12291) ಏಪ್ರಿಲ್ 4 ರಂದು ರದ್ದು.
* ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಯಶವಂತಪುರ ಎಕ್ಸ್ ಪ್ರೆಸ್ ರೈಲು (ಸಂಖ್ಯೆ 12292), ಏಪ್ರಿಲ್ 5 ರಂದು ರದ್ದು
* ಯಶವಂತಪುರ-ಪುದುಚೇರಿ ಎಕ್ಸ್ ಪ್ರೆಸ್ ರೈಲು (ಸಂಖ್ಯೆ 16573) ಏಪ್ರಿಲ್ 5ಕ್ಕೆ ತಾತ್ಕಾಲಿಕವಾಗಿ ರದ್ದಾಗಿದೆ.
* ಸಂಖ್ಯೆ 16574 ಪುದುಚೇರಿ-ಯಶವಂತಪುರ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 5 ರಂದು ಈ ನಿಲ್ದಾಣಕ್ಕೆ ಬರುವುದಿಲ್ಲ.
* ಯಶವಂತಪುರ-ಬೀದರ್ ಎಕ್ಸ್ ಪ್ರೆಸ್ ರೈಲು (ಸಂಖ್ಯೆ 16577) ಏಪ್ರಿಲ್ 6 ರಂದು ರದ್ದುಗೊಳಿಸಲಾಗಿದೆ.
* ಸಂಖ್ಯೆ 16578 ಬೀದರ್-ಯಶವಂತಪುರ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 3 ರದ್ದು ಸಂಚರಿವುದಿಲ್ಲ
* ಏಪ್ರಿಲ್ 10 ರಂದು ರೈಲು ಸಂಖ್ಯೆ 16541 ಯಶವಂತಪುರ-ಪಂಢರಪುರ ಎಕ್ಸ್ ಪ್ರೆಸ್ ರೈಲು ತಾತ್ಕಾಲಿಕವಾಗಿ ರದ್ದಾಗಿದೆ. * * ರೈಲು ಸಂಖ್ಯೆ 16542 ಪಂಢರಪುರ-ಯಶವಂತಪುರ ಎಕ್ಸ್ ಪ್ರೆಸ್ ರೈಲುಗಳು ಏಪ್ರಿಲ್ 4 ಮತ್ತು11 ರಂದು ರದ್ದಾಗಿವೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ರೈಲುಗಳ ಟರ್ಮಿನಲ್ ಮತ್ತು ಮಾರ್ಗ ಬದಲಾವಣೆ ವಿವರ
ಬೆಂಗಳೂರಿನ ಮೆಜೆಸ್ಟಿಕ್ (ಕೆಎಸ್ಆರ್) ರೈಲು ನಿಲ್ದಾಣದಿಂದ ಹೊರಡುವ ಬೆಂಗಳೂರು-ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲುಗಳ (ಸಂಖ್ಯೆ 16511/16512 ) ಟರ್ಮಿನಲ್ ಮತ್ತು ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದ್ದು, ಪ್ರಯಾಣಿಕರು ಗಮನಿಸಬೇಕಿದೆ.
* ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್ ಪ್ರೆಸ್ ರೈಲು (16511) ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ರಾತ್ರಿ 8:00 ಗಂಟೆಗೆ ಸಂಚಾರ ಆರಂಭಿಸುತ್ತದೆ. ಬಾಣಸವಾಡಿ, ಹೆಬ್ಬಾಳ ಮತ್ತು ಚಿಕ್ಕಬಾಣಾವರ ಮಾರ್ಗದ ಮೂಲಕ ಸಂಚರಿಸಲಿದೆ.
* ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (16512) ಚಿಕ್ಕಬಾಣಾವರ, ಹೆಬ್ಬಾಳ, ಬಾಣಸವಾಡಿ ಮಾರ್ಗದ ಮೂಲಕ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ. ಈ ರೈಲು ಕೆಎಸ್ಆರ್ ಬೆಂಗಳೂರಿನ ಬದಲು ಎಸ್ಎಂವಿಟಿನಲ್ಲಿ ತನ್ನ ಪ್ರಯಾಣವನ್ನು ಎಸ್ಎಂವಿಟಿ ಬೆಂಗಳೂರಿಗೆ ಟರ್ಮಿನಲ್‌ಗೆ ಬೆಳಗ್ಗೆ 07:45ಕ್ಕೆ ಆಗಮಿಸಿ ಅಂತ್ಯಗೊಳಿಸಿದೆ.












Click it and Unblock the Notifications