Tejaswini Gowda: ಮಾಧ್ಯಮ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿದ ಮೊದಲ ಮಹಿಳೆ ತೇಜಸ್ವಿನಿ
ಬೆಂಗಳೂರು ಏಪ್ರಿಲ್ 6: ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ರಮೇಶ್ ಈಗ ಮತ್ತೆ ತವರು ಪಕ್ಷ ಕಾಂಗ್ರೆಸ್ ಸೇರಿದ್ದಾರೆ. ಇವರು ಎಚ್‌ಡಿ ದೇವೇಗೌಡರನ್ನು ಮಣಿಸಿ ಮಾಧ್ಯಮ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿದ ಮೊದಲ ಮಹಿಳಾ ಫೈರ್‌ಬ್ರ್ಯಾಂಡ್ ಅಂತಲೇ ಹೆಸರುವಾಸಿಯಾಗಿದ್ದಾರೆ.
ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ತೇಜಸ್ವಿನಿ ರಮೇಶ್ ಮಾತ್ರ ಈವರೆಗೆ ಆಯ್ಕೆಯಾಗಿರುವ ಏಕೈಕ ಮಹಿಳೆ ಆಗಿದ್ದಾರೆ. ಕನಕಪುರ ಸಂಸತ್ ಕ್ಷೇತ್ರ 11 ಸಾರ್ವತ್ರಿಕ, 1 ಉಪಚುನಾವಣೆ, ಅನಂತರ ಅಸ್ತಿತ್ವಕ್ಕೆ ಬಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರ 3 ಸಾರ್ವತ್ರಿಕ, 1 ಉಪಚುನಾವಣೆ ಸೇರಿ ಒಟ್ಟು 14 ಸಾರ್ವತ್ರಿಕ, 2 ಉಪಚುನಾವಣೆಗಳನ್ನು ಕಂಡಿದೆ.

ಈ ಚುನಾವಣೆಗಳಲ್ಲಿ ಮೂವರು ಮಹಿಳೆಯರು ಸ್ಪರ್ಧಿಸಿ ಪುರುಷ ಅಭ್ಯರ್ಥಿಗಳಿಗೆ ಸವಾಲೊಡ್ಡಿದ್ದರು. ಇವರಲ್ಲಿ ತೇಜಸ್ವಿನಿ ರಮೇಶ್ ಮಾತ್ರ ಗೆಲುವಿನ ದಡ ಸೇರಲು ಸಾಧ್ಯವಾಯಿತು. ಅದು ಕೂಡ ಐತಿಹಾಸಿಕ ಗೆಲುವಿನಿಂದ ಕೂಡಿತ್ತು. ಉಳಿದಂತೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಸೋಷಿಯಲಿಸ್ಟ್ ಯುನಿಟ್ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯಾಗಿದ್ದ ಟಿ.ಸಿ ರಮಾ ಸೋಲು ಕಂಡವರು.
ಪ್ರಸಕ್ತ ಚುನಾವಣೆಯಲ್ಲಿ ಪ್ರಮುಖವಾದ ಯಾವುದೇ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡಿಲ್ಲ. ಆದರೆ ಸೋಷಿಯಲಿಸ್ಟ್ ಯುನಿಟ್ ಸೆಂಟರ್ ಆಫ್ ಇಂಡಿಯಾ (ಕಮ್ಯನಿಸ್ಟ್) ಪಕ್ಷ ಕೆ.ಹೇಮಾವತಿ ಅವರನ್ನು ಕಣಕ್ಕಿಳಿಸಿದೆ.

ಸಂಸತ್‌ಗೆ ಹೋದ ಮೊದಲ ಮಹಿಳೆ:
ಕನಕಪುರ ಲೋಕಸಭಾ ಕ್ಷೇತ್ರ 1967ರಲ್ಲಿ ಅಸ್ತಿತ್ವಕ್ಕೆ ಬಂದಿತು. ಅಲ್ಲಿಂದ 1999ರವರೆಗೆ ನಡೆದ 10 ಚುನಾವಣೆಗಳಲ್ಲಿ ಸ್ಪರ್ಧೆ ಮಾಡಲು ಯಾವೊಬ್ಬ ಮಹಿಳೆಯೂ ಧೈರ್ಯ ಮಾಡಲಿಲ್ಲ. ಆದರೆ, ಮಾಧ್ಯಮ ಕ್ಷೇತ್ರದಿಂದ ರಾಜಕೀಯ ರಂಗಕ್ಕೆ ಪ್ರವೇಶಿಸಿದಂತೆ ತೇಜಸ್ವಿ ರಮೇಶ್ ರವರು ಚೊಚ್ಚಲ ಚುನಾವಣೆಯಲ್ಲಿಯೇ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರನ್ನು ಮಣಿಸುವ ಮೂಲಕ ಎಲ್ಲರ ಗಮನ ಸೆಳೆದರು. ಇಷ್ಟೇ ಅಲ್ಲದೆ, ಈ ಕ್ಷೇತ್ರದಿಂದ ಸಂಸತ್‌ಗೆ ಪ್ರವೇಶಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೂ ಪಾತ್ರರಾದರು.
1999ರ ಚುನಾವಣೆಯಲ್ಲಿ ಹಾಸನದಲ್ಲಿ ಹೀನಾಯವಾಗಿ ಸೋತು ಹಣ್ಣಾಗಿದ್ದ ದೇವೇಗೌಡರಿಗೆ 2002ರಲ್ಲಿ ನಡೆದ ಉಪ ಚುನಾವಣೆಯಲ್ಲಿ ರಾಜಕೀಯ ಮರು ಜನ್ಮ ನೀಡಿದ್ದು ಇದೇ ಕ್ಷೇತ್ರ. ಚಂದ್ರ ಶೇಖರ್ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆ ದೇವೇಗೌಡರಿಗೆ ರಾಜಕೀಯ ಶಕ್ತಿ ತುಂಬಿತ್ತು. ಆ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಅವರು ದೇವೇಗೌಡರ ವಿರುದ್ಧ ರಾಜಕೀಯ ಎದುರಾಳಿಯಾಗಿ ಕಣಕ್ಕಿಳಿದಿದ್ದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಹೋರಾಟದಲ್ಲಿ 52,576 ಮತಗಳ ಅಂತರದಿಂದ ಗೆದ್ದು ದೇವೇಗೌಡರು ನಿಟ್ಟುಸಿರು ಬಿಟ್ಟರು.

ಅನಿತಾ ಕುಮಾರಸ್ವಾಮಿಗೆ ಸೋಲು:
ಹೀಗಾಗಿ 2013ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ತಮ್ಮ ಸ್ಥಾನ ಬಿಟ್ಟುಕೊಡಲು ಕುಮಾರಸ್ವಾಮಿ ಮುಂದಾಗಿದ್ದರು. ಆದರೆ, ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಇಳಿದಿದ್ದ ಡಿಕೆ ಸುರೇಶ್, 1,36,000 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು.
ಇನ್ನು 2019ರ ಚುನಾವಣೆಯಲ್ಲಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷದಿಂದ ಸ್ಪರ್ಧಿಸಿದ್ದ ಟಿ.ಸಿ ರಮಾ ಕೇವಲ 2094 ಮತಗಳನ್ನು ಪಡೆದು 10ನೇ ಸ್ಥಾನ ಅಲಂಕರಿಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿಕೆ ಸುರೇಶ್ 8,78,258 ಮತ ಪಡೆದು ಹ್ಯಾಟ್ರಿಕ್ ಗೆಲುವನ್ನು ದಾಖಲಿಸಿದರು.
ಎಚ್‌ಡಿಡಿರನ್ನು ಮಣಿಸಿದ ತೇಜಸ್ವಿನಿ
2004ರ ಸಾರ್ವತ್ರಿಕ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದ ದೇವೇಗೌಡರ ವಿರುದ್ಧ ತೇಜಸ್ವಿನಿ ರಮೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಬಾರಿಸಿದರು. ತೇಜಸ್ವಿನಿ 5,84,238 ಮತ ಪಡೆದರೆ, ದೇವೇಗೌಡರು 4,62,320 ಮತ ಪಡೆದು ಮೂರನೇ ಸ್ಥಾನಕ್ಕೆ ತಲ್ಳಲ್ಪಟ್ಟರು. ಬಿಜೆಪಿಯ ರಾಮಚಂದ್ರ ಗೌಡ 4,67,575 ಮತ ಪಡೆದು ಎರಡನೇ ಸ್ಥಾನದಲ್ಲಿದ್ದರು. ಮೊದಲ ಬಾರಿ ಸಂಸತ್ ಪ್ರವೇಶಿಸಿದ ಖುಷಿಯಲ್ಲಿದ್ದ ತೇಜಸ್ವಿನಿ ರಮೇಶ್ ಮರು ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡರು.
ಕಾಂಗ್ರೆಸ್ ಪಾಳಯದಲ್ಲಿಯೇ ತೀವ್ರ ವಿರೋಧ ಕಟ್ಟಿಕೊಂಡಿದ್ದ ತೇಜಸ್ವಿನಿ 2008ರ ವೇಳೆಗೆ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ 2009ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಚುನಾವಣೆಯಲ್ಲಿ ಜೆಡಿಎಸ್‌ನ ಕುಮಾರ್ಸವಾಮಿ, 2013ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲವಿನ ಮಾಲೆ ಧರಿಸಿಕೊಂಡರು. ರಾಜ್ಯ ರಾಜಕಾರಣದೆಡೆಗೆವಾಲಿದ ಕುಮಾರಸ್ವಾಮಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು.












Click it and Unblock the Notifications